ಹುಟ್ಟೂರಿಗೆ ಹುತಾತ್ಮ ಯೋಧನ ಪಾರ್ಥಿವ ಶರೀರ; ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಹುಟ್ಟೂರಿಗೆ ಹುತಾತ್ಮ ಯೋಧನ ಪಾರ್ಥಿವ ಶರೀರ; ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಬೆಳಗಾವಿ: ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದಿದ್ದ ಬಿಎಸ್​​ಎಫ್​​​​​ ಯೋಧನ ಅಂತ್ಯಕ್ರಿಯೆ ಇಂದು ನಡೆಯಲಿದೆ. ಹುತಾತ್ಮ ಬಿಎಸ್​​ಎಫ್​ ಯೋಧನ ಅಂತ್ಯಕ್ರಿಯೆ ಸ್ವಗ್ರಾಮ ರಾಯಭಾಗ ಪಟ್ಟಣದಲ್ಲಿ ಆಗಲಿದೆ.

ವಿಷ್ಣು ಕಾಂಬಳೆ (56) ಮರಣ ಹೊಂದಿದ ವೀರ ಯೋಧ. ಇವರು ಸುಮಾರು 39 ವರ್ಷಗಳ ಕಾಲ ಬಿಎಸ್​​ಎಫ್​​ ಯೋಧರಾಗಿ ಸೇವೆ ಸಲ್ಲಿಸಿದ್ದಾರೆ.

blank

ಕೊಲ್ಕತ್ತಾದ 100 ಬೆಟಾಲಿಯನ್​​​ನಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆ ಸೆಪ್ಟೆಂಬರ್​​ 8ನೇ ತಾರೀಕಿನಂದು ಯೋಧ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಈಗ ಮೃತ ಯೋಧನ ಪಾರ್ಥಿವ ಶರೀರ ಗೌಹಾಟಿಯಿಂದ ಬೆಂಗಳೂರು ಮೂಲಕ ಹುಟ್ಟೂರಿಗೆ ಆಗಮಿಸಿದೆ. ಸಕಲ ಸರ್ಕಾರಿ ಗೌರವದೊಂದಿಗೆ ಹುಟ್ಟೂರು ರಾಯಭಾಗದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಇದನ್ನೂ ಓದಿ: ಇಂದು ದೇಶಾದ್ಯಂತ ನೀಟ್ ಪರೀಕ್ಷೆ; ವಿದ್ಯಾರ್ಥಿಗಳಿಗೆ ಕೋವಿಡ್​​ ಲಸಿಕೆ ಕಡ್ಡಾಯ

Source: newsfirstlive.com Source link