ನಾಳೆಯಿಂದ ಅಧಿವೇಶನ; ಬೊಮ್ಮಾಯಿ ಸರ್ಕಾರದ ವಿರುದ್ಧ ಹಲವು ಅಸ್ತ್ರಗಳ ಪ್ರಯೋಗಕ್ಕೆ ಮುಂದಾದ ಕಾಂಗ್ರೆಸ್​​..

ನಾಳೆಯಿಂದ ಅಧಿವೇಶನ; ಬೊಮ್ಮಾಯಿ ಸರ್ಕಾರದ ವಿರುದ್ಧ ಹಲವು ಅಸ್ತ್ರಗಳ ಪ್ರಯೋಗಕ್ಕೆ ಮುಂದಾದ ಕಾಂಗ್ರೆಸ್​​..

ಬೆಂಗಳೂರು: ನಾಳೆಯಿಂದಲೇ ವಿಧಾನಮಂಡಲದ ಅಧಿವೇಶನ ಆರಂಭವಾಗಲಿದೆ. ಹೀಗಾಗಿ ಸಿಎಂ ಬಸವರಾಜ್​​ ಬೊಮ್ಮಾಯಿ ಸರ್ಕಾರವನ್ನು ಹಣಿಯಲು ಕಾಂಗ್ರೆಸ್​-ಜೆಡಿಎಸ್​​ ಮುಂದಾಗಿವೆ. ಸಿಎಂ ಆದ ಬಳಿಕ ಬಸವರಾಜ್​​ ಬೊಮ್ಮಾಯಿ ಎದುರಿಸುತ್ತಿರುವ ವಿಧಾನಮಂಡಲದ ಅಧಿವೇಶನ ಇದಾಗಿದೆ. ಇನ್ನು ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಕಾಂಗ್ರೆಸ್​ ಬಳಿ ಹಲವು ಅಸ್ತ್ರಗಳು ಇವೆ.

ಇದನ್ನೂ ಓದಿ: ಸೋಲು-ಗೆಲುವುಗಳು ನಿರೀಕ್ಷಿತ, ಹೋರಾಟ ನಿರಂತರ- ಸಿದ್ದರಾಮಯ್ಯ

ಕಾಂಗ್ರೆಸ್ ಪಕ್ಷದ ಕೈಯಲ್ಲಿರುವ ಅಸ್ತ್ರಗಳು ಹೀಗಿವೆ…

 • ಮೈಸೂರು ಗ್ಯಾಂಗ್ ರೇಪ್ ಪ್ರಕರಣ & ಕಾನೂನು ಸುವ್ಯವಸ್ಥೆ
 • ರಾಜ್ಯದಲ್ಲಿ ನ್ಯಾಷನಲ್ ಎಜುಕೇಶನ್ ಪಾಲಿಸಿ ಅನುಷ್ಠಾನ
 • ಕೋವಿಡ್ ಎರಡನೇ ಅಲೆಯಲ್ಲಿ ಉಂಟಾದ ಸಾವು ನೋವು ಹಾಗೂ ಪರಿಹಾರ ವಿತರಣೆಯ ಲೋಪ
 • ಜಾತಿ ಗಣತಿ ವರದಿ ಸ್ವೀಕಾರ ಹಾಗೂ ಅನುಷ್ಠಾನದ ವಿಚಾರ
 • ಕಳಂಕಿತ ಸಚಿವೆ ಶಶಿಕಲಾ ಜೊಲ್ಲೆ ಭ್ರಷ್ಟಾಚಾರ ಪ್ರಕರಣ
  ಪಂಚಮಸಾಲಿ, ಕುರುಬ ಸಮುದಾಯ ಸೇರಿದಂತೆ ಮೀಸಲಾತಿಗೆ ಬೇಡಿಕೆ ಇಟ್ಟಿರುವ ಪ್ರಬಲ ಸಮುದಾಯಗಳ ಹೋರಾಟದ ವಿಚಾರ
 • ಜನಸಾಮಾನ್ಯರ ತೀವ್ರವಾಗಿ ಬಾಧಿಸುತ್ತಿರುವ ಬೆಲೆ ಏರಿಕೆ
 • ವಿಪಕ್ಷದ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ನೀಡಿಕೆಯಲ್ಲಿ ತಾರತಮ್ಯ
 • ಅತೀವೃಷ್ಟಿ ಪ್ರವಾಹಕ್ಕೆ ತುತ್ತಾದವರ ಸಂಕಷ್ಟ ಹಾಗೂ ಪರಿಹಾರ ವಿತರಣೆಯ ಲೋಪ
 • ಮಂಡ್ಯ ಜಿಲ್ಲೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣ

ವೀರೇಂದ್ರ ಉಪ್ಪುಂದ, ಪೊಲಿಟಿಕಲ್ ಬ್ಯೂರೋ

Source: newsfirstlive.com Source link