ಬೆಂಗಳೂರಿನಲ್ಲಿ ವೀಕೆಂಡ್​​ ಪಾರ್ಟಿ; ಐಷಾರಾಮಿ ಕಾರುಗಳಲ್ಲಿ ಡ್ಯಾನ್ಸ್​ ಮಾಡಿ ದೊಡ್ಡವ್ರ ಮಕ್ಕಳ ಪುಂಡಾಟ

ಬೆಂಗಳೂರಿನಲ್ಲಿ ವೀಕೆಂಡ್​​ ಪಾರ್ಟಿ; ಐಷಾರಾಮಿ ಕಾರುಗಳಲ್ಲಿ ಡ್ಯಾನ್ಸ್​ ಮಾಡಿ ದೊಡ್ಡವ್ರ ಮಕ್ಕಳ ಪುಂಡಾಟ

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ವೀಕೆಂಡ್ ಮೋಜು, ಮಸ್ತಿ ಇನ್ನೂ ನಿಂತೇ ಇಲ್ಲ. ಬದಲಿಗೆ ಎಷ್ಟೇ ಅನಾಹುತಗಳಾದರೂ ನಗರದ ಹೈಫೈ ಏರಿಯಾಗಳಲ್ಲಿ ವೀಕೆಂಡ್​ ಪಾರ್ಟಿ ಮಾಡಲಾಗುತ್ತಿದೆ. ಅಲ್ಲದೇ ಮಸ್ತಿ ಮಾಡಿಕೊಂಡು ಐಷಾರಾಮಿ ಕಾರುಗಳಲ್ಲಿ ಪುಂಡಾಟ ಮೆರೆಯಲಾಗುತ್ತಿದೆ. ಇಂತಹದ್ದೇ ಒಂದು ಘಟನೆ ಈಗ ನಡೆದಿದೆ.

ಮರ್ಸಿಡಿಸ್ ಬೆಂಜ್​ ಕಾರ್​ನಲ್ಲಿ ಯುವಕ-ಯುವತಿಯರ ಪುಂಡಾಟ ಮೆರೆಯುತ್ತಿದ್ದಾರೆ. ಕೆಎ-04 ಎಂವೈ-0450 ನಂಬರ್​ನ ಮರ್ಸಿಡಿಸ್ ಬೆಂಜ್ ಕಾರು ಇದಾಗಿದೆ. ಕಾರಿನ ಎರಡು ಕಡೆ ಡೋರ್, ರೂಫ್ ಟಾಪ್ ಓಪನ್ ಮಾಡಿಕೊಂಡು ಬಿಂದಾಸ್ ಆಗಿ ಸುತ್ತಾಡಿದ್ದಾರೆ.

ಭಾರೀ ಮ್ಯೂಸಿಕ್, ಮೂವಿಂಗ್ ಕಾರ್​ನಲ್ಲೇ ಡ್ಯಾನ್ಸ್ ಮಾಡಿದ್ದಾರೆ. ರೆಸಿಡೆನ್ಶಿಯಲ್ ಏರಿಯಾದಲ್ಲಿ ಱಷ್ ಡ್ರೈವಿಂಗ್, ಸುತ್ತಾಟ ನಡೆಸಿದ್ದಾರೆ. ಪೊಲೀಸರ ಎದುರೇ ತಿರುಗಾಡ್ತಿದ್ರೂ ಅವರು ಫುಲ್ ಸೈಲೆಂಟ್ ಆಗಿದ್ದಾರೆ.

ಇದನ್ನೂ ಓದಿ: ನಾಳೆಯಿಂದ ಅಧಿವೇಶನ; ಬೊಮ್ಮಾಯಿ ಸರ್ಕಾರದ ವಿರುದ್ಧ ಹಲವು ಅಸ್ತ್ರಗಳ ಪ್ರಯೋಗಕ್ಕೆ ಮುಂದಾದ ಕಾಂಗ್ರೆಸ್​​..

ಕೋರಮಂಗಲ ಅಪಘಾತದ ಬಳಿಕವೂ ವೀಕೆಂಡ್​​​ ಪಾರ್ಟಿ ಹುಚ್ಚಾಟ ಮುಂದುವರಿದಿದೆ. ಸದಾಶಿವನಗರದಲ್ಲಿ ಮೋಜು, ಮಸ್ತಿ ಮಾಡಿದರೂ ಕೇಳೋರು ದಿಕ್ಕಿಲ್ಲ. ದೊಡ್ಡವರ ಮಕ್ಕಳು ಎಂದು ಪೊಲೀಸರು ಸೈಲೆಂಟ್ ಆಗಿದ್ದಾರೆ. ಸಾಮಾನ್ಯ ಜನರಿಗೊಂದು, ದೊಡ್ಡವರ ಮಕ್ಕಳಿಗೊಂದು ಕಾನೂನಾ? ಎಂಬ ಪ್ರಶ್ನೆ ಶುರುವಾಗಿದೆ.

Source: newsfirstlive.com Source link