ಸಾಕು ತಂದೆ-ತಾಯಿ ಇಂದಲೇ ಮಗಳಿಗೆ ಮಹಾಮೋಸ; ಬರೋಬ್ಬರಿ 30 ಲಕ್ಷಕ್ಕೂ ಹೆಚ್ಚು ಹಣ ಪಡೆದು ವಂಚನೆ..

ಸಾಕು ತಂದೆ-ತಾಯಿ ಇಂದಲೇ ಮಗಳಿಗೆ ಮಹಾಮೋಸ; ಬರೋಬ್ಬರಿ 30 ಲಕ್ಷಕ್ಕೂ ಹೆಚ್ಚು ಹಣ ಪಡೆದು ವಂಚನೆ..

ಬೆಂಗಳೂರು: ಸಾಕು ತಂದೆ ತಾಯಿಯಿಂದಲೇ ಯುವತಿಗೆ ಮಹಾಮೋಸ ಆಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವಿಷ ಸೇವಿಸಿದರೂ ಸಾಕು ತಂದೆ, ತಾಯಿ ಮನಸ್ಸು ಕರಗುತ್ತಿಲ್ಲ. ತನ್ನ ಸಾಕು ತಂದೆ, ತಾಯಿ ತನಗೆ 30 ಲಕ್ಷಕ್ಕೂ ಅಧಿಕ ಹಣ ಪಡೆದು ವಂಚಿಸಿದ್ದಾರೆ ಎಂದು ಜಿಗಣಿ ತಾಲೂಕಿನ ಲಾವಣ್ಯ ಎಂಬಾಕೆ ಪೊಲೀಸ್​​ ಠಾಣೆ ಮೆಟ್ಟಿಲೇರಿದ್ದಾರೆ.

ಮುನಿರೆಡ್ಡಿ ಹಾಗೂ ನಿರ್ಮಲಾ ದಂಪತಿ 30 ಲಕ್ಷಕ್ಕೂ ಅಧಿಕ ಹಣ ಪಡೆದು ವಂಚಿಸಿದ್ದಾರೆ ಎಂದು ಪೊಲೀಸ್​ ಠಾಣೆಯಲ್ಲಿ ದೂರು ನೀಡಲಾಗಿದೆ. ದಂಪತಿ ಮಕ್ಕಳಾದ ಪ್ರತಿಮಾ ಹಾಗೂ ದೀಪು ಮೇಲೂ ಕೇಸ್ ದಾಖಲಿಸಲಾಗಿದೆ.

ನಾನು ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಮುನಿರೆಡ್ಡಿ ಹಾಗೂ ನಿರ್ಮಲಾ ಚೀಟಿ ವ್ಯವಹಾರ ನಡೆಸುತ್ತಿದ್ರು. ಚೀಟಿಯಲ್ಲಿ ನಷ್ಟವಾದ ಬಳಿಕ ಲಾವಣ್ಯ ಬಳಿ ಹಣ ತೆಗೆದುಕೊಂಡಿದ್ದರು. ಅಷ್ಟೇ ಅಲ್ಲ ನನ್ನ ಸ್ನೇಹಿತರಿಂದಲೂ ಹಣ ಪಡೆದಿದ್ದರು ಎಂದು ಲಾವಣ್ಯ ಆರೋಪಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ವೀಕೆಂಡ್​​ ಪಾರ್ಟಿ; ಐಷಾರಾಮಿ ಕಾರುಗಳಲ್ಲಿ ಡ್ಯಾನ್ಸ್​ ಮಾಡಿ ದೊಡ್ಡವ್ರ ಮಕ್ಕಳ ಪುಂಡಾಟ

ಸದ್ಯ ಹಣ ಕೇಳಿದ್ದಕ್ಕೆ ಲಾವಣ್ಯಳನ್ನ ದಂಪತಿ ಬೀದಿಗೆ ತಳ್ಳಿದ್ದಾರೆ. ಲಾವಣ್ಯ ಬೆಸ್ಕಾಂ ಅಸೋಸಿಯೇಷನ್ ಕಚೇರಿಯನ್ನ ನೋಡಿಕೊಳ್ಳುತ್ತಿದ್ದರು. ಕಚೇರಿಯ ಆಡಿಟ್ ಸಮಯದಲ್ಲಿ ಹಣ ಕೊಡುವಂತೆ ಕೇಳಿದ್ದರು ಲಾವಣ್ಯ. ಈ ವೇಳೆ ನಿನಗೆ ಯಾವುದೇ ಹಣ ಕೊಡೋದಕ್ಕೆ ಇಲ್ಲ ಅಂಥ ಹೇಳಿದ್ದ ದಂಪತಿ ಲಾವಣ್ಯಳನ್ನು ಬೀದಿಗೆ ತಳ್ಳಿದ್ದರು. ಇದರಿಂದ ಬೇಸತ್ತ ಯುವತಿ ವಿಷ ಸೇವಿಸಿ ಆಸ್ಪತ್ರೆಗೂ ದಾಖಲಾಗಿದ್ದರು. ಈಗ ನನಗೆ ನ್ಯಾಯ ಕೊಡಿಸಿ ಎಂದು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Source: newsfirstlive.com Source link