ಮಿತಿಮೀರಿದ ಬೀದಿ ವ್ಯಾಪರಿಗಳ ಸೌಂಡ್​​ ಹಾವಳಿ; ಪೊಲೀಸ್​ ಕಂಟ್ರೋಲ್​​ ರೂಮ್​​ಗೆ ಸಾವಿರಾರು ಕರೆಗಳು

ಮಿತಿಮೀರಿದ ಬೀದಿ ವ್ಯಾಪರಿಗಳ ಸೌಂಡ್​​ ಹಾವಳಿ; ಪೊಲೀಸ್​ ಕಂಟ್ರೋಲ್​​ ರೂಮ್​​ಗೆ ಸಾವಿರಾರು ಕರೆಗಳು

ಬೆಂಗಳೂರು: ಸಿಲಿಕಾನ್​​ ಸಿಟಿಯಲ್ಲಿ ಬೀದಿ ವ್ಯಾಪಾರಿಗಳ ಮೆಗಾಪೋನ್ ಲೌಡ್​​ ಸ್ಪೀಕರ್​​ ಹಾವಳಿಗೆ ಜನ ಕೆಂಗೆಟ್ಟು ಹೋಗಿದ್ದಾರೆ. ಇದರ ಪರಿಣಾಮ ಬೆಂಗಳೂರು ಪೊಲೀಸ್​​ ಕಂಟ್ರೋಲ್​​​ ರೂಮ್​​​ಗೆ ಪ್ರತಿನಿತ್ಯ ನೂರಾರು ಕರೆಗಳು ಬರುತ್ತಿವೆ.

2021ರ ಜನವರಿಯಿಂದ ಇಲ್ಲಿಯವರೆಗೂ ಕಂಟ್ರೋಲ್ ರೂಮ್​​ಗೆ ಸಾವಿರಾರು ಕರೆಗಳು ಬಂದಿವೆ. ತಳ್ಳುಗಾಡಿ ವ್ಯಾಪಾರಿಗಳು ಮೆಗಾಪೋನ್ ಸ್ಪೀಕರ್​​ ಬಳಸಿ ತರಕಾರಿ ಸೇರಿದಂತೆ ವಿವಿಧ ವಸ್ತುಗಳ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಹಿರಿಯ ನಾಗರಿಕರು ಹಾಗೂ ವಿದ್ಯಾರ್ಥಿಗಳ ಆನ್​​ಲೈನ್​​ ಕ್ಲಾಸ್​​ಗೆ ತೊಂದರೆ ಆಗುತ್ತಿದೆ ಎಂದು ದೂರುಗಳು ಬಂದಿವೆ.

ಜನವರಿಯಲ್ಲಿ 711 ಮಂದಿ ಕಂಟ್ರೋಲ್ ರೂಂಗೆ ಕರೆ ಮಾಡಿ ದೂರು ನೀಡಿದ್ದಾರೆ. ಫೆಬ್ರುವರಿಯಲ್ಲಿ 650 ಮಂದಿ ದೂರು ದಾಖಲಿಸಿದ್ದಾರೆ‌. ಮಾರ್ಚ್‌ನಲ್ಲಿ 621 ದೂರುಗಳು ದಾಖಲಾಗಿದೆ. ಲಾಕ್​ಡೌನ್ ಅವಧಿಯಾದ ಏಪ್ರಿಲ್​​​ನಲ್ಲಿ 275 ದೂರು ದಾಖಲಾಗಿವೆ. ಮೇನಲ್ಲಿ 136, ಜೂನ್​​ನಲ್ಲಿ 186, ಜುಲೈನಲ್ಲಿ 250, ಆಗಸ್ಟ್​ನಲ್ಲಿ 484 ದೂರುಗಳ ದಾಖಲಾಗಿದೆ.

ಇದನ್ನೂ ಓದಿ: ಸಾಕು ತಂದೆ-ತಾಯಿ ಇಂದಲೇ ಮಗಳಿಗೆ ಮಹಾಮೋಸ; ಬರೋಬ್ಬರಿ 30 ಲಕ್ಷಕ್ಕೂ ಹೆಚ್ಚು ಹಣ ಪಡೆದು ವಂಚನೆ..

Source: newsfirstlive.com Source link