ಟೀಮ್​​ ಇಂಡಿಯಾ ಕ್ಯಾಪ್ಟನ್​​ ಕೊಹ್ಲಿಯಾದ್ರು ನಡಿಯೋದು ಮಾತ್ರ ರೋಹಿತ್​ ಶರ್ಮಾ ಮಾತೇ; ಯಾಕೆ ಗೊತ್ತಾ?

ಟೀಮ್​​ ಇಂಡಿಯಾ ಕ್ಯಾಪ್ಟನ್​​ ಕೊಹ್ಲಿಯಾದ್ರು ನಡಿಯೋದು ಮಾತ್ರ ರೋಹಿತ್​ ಶರ್ಮಾ ಮಾತೇ; ಯಾಕೆ ಗೊತ್ತಾ?

ಟೀಮ್​ ಇಂಡಿಯಾ ಕ್ಯಾಪ್ಟನ್​​ ವಿರಾಟ್​ ಕೊಹ್ಲಿ..! ಆದರೆ ವಿರಾಟ್​ ಕ್ಯಾಪ್ಟನ್​ ಆದರೂ, ಆತನ ಮಾತು ತಂಡದಲ್ಲಿ ನಡೆಯೋದಿಲ್ಲ..! ಆಶ್ಚರ್ಯ ಆದ್ರೂ, ಈ ಮಾತು ನಿಜ. ಇತ್ತೀಚಿಗೆ ಟೀಮ್ ಇಂಡಿಯಾ ಟಿ-ಟ್ವೆಂಟಿ ವಿಶ್ವಕಪ್ ತಂಡ ಪ್ರಕಟಿಸಿತು. ಆದ್ರೆ ಅದು ವಿರಾಟ್ ಕೊಹ್ಲಿಯ ತಂಡವಲ್ಲ..!!!

ನಾಯಕನಾಗಿ ವಿರಾಟ್ ಕೊಹ್ಲಿ, ಪ್ರಮುಖ ಜವಾಬ್ದಾರಿ ಹೊತ್ತಿದ್ದಾರೆ. ಆದರೆ ಆಟಗಾರರ ಆಯ್ಕೆ, ತಂಡದ ಪ್ರಮುಖ ನಿರ್ಧಾರಗಳು… ಹೀಗೆ ಅತ್ಯಂತ ಮಹತ್ವದ ವಿಷಯಗಳಲ್ಲಿ ದರ್ಬಾರ್​ ನಡೆಸೋದು, ರೋಹಿತ್​​ ಶರ್ಮಾ.!! ಹೌದು.! ಇದು ಅಚ್ಚರಿ ಎನಿಸಿದರೂ ಸತ್ಯ.! ಇದಕ್ಕೆ ಬೆಸ್ಟ್​ ಎಕ್ಸಾಂಪಲ್​, ಟಿ-ಟ್ವೆಂಟಿ ವಿಶ್ವಕಪ್​ ತಂಡಕ್ಕೆ ಅಶ್ವಿನ್​ ಕಮ್​​​ಬ್ಯಾಕ್ ಮತ್ತು ಇಶಾನ್​ ಕಿಶನ್​ ಆಯ್ಕೆ.! ಈ ಎರಡು ನಿರ್ಧಾರಗಳೇ ಕೊಹ್ಲಿ ಮಾತು ನಡೀತಿಲ್ಲಾ ಅನ್ನೋದನ್ನ ಪ್ರೂವ್​ ಮಾಡ್ತಿವೆ.

ಅಶ್ವಿನ್​​ T20 ವಿಶ್ವಕಪ್​ ಆಯ್ಕೆ ಹಿಂದಿದ್ದಾರೆ ರೋಹಿತ್​ ಶರ್ಮಾ.!

ಯೆಸ್​​.. ಟಿ20 ವಿಶ್ವಕಪ್​​​​ಗೆ ರವಿಚಂದ್ರನ್​ ಅಶ್ವಿನ್​​ ಆಯ್ಕೆಯಾಗೋದಕ್ಕೆ, ರೋಹಿತ್​​ ಶರ್ಮಾ ಪ್ರಮುಖ ಪಾತ್ರವಹಿಸಿದ್ದಾರೆ. ಆ ಮೂಲಕ 4 ವರ್ಷಗಳ ಬಳಿಕ ವೈಟ್​​ಬಾಲ್​​ ಕ್ರಿಕೆಟ್​ಗೆ ಅಶ್ವಿನ್​​ ಮರಳುವಂತಾಗಿದೆ. ವಿಶ್ವಕಪ್​ಗೆ ತಂಡದ ಆಯ್ಕೆ ಸಭೆಗೂ ಮುನ್ನ ಬಿಸಿಸಿಐ ಮತ್ತು ಆಯ್ಕೆ ಸಮಿತಿ, ರೋಹಿತ್​​​ರ ಅಭಿಪ್ರಾಯ ಕೇಳಿದ್ರಂತೆ. ಈ ವೇಳೆ ಅಶ್ವಿನ್​​ ಹೆಸರು ಸೂಚಿಸಿದ್ದಾರೆ. ಕಳೆದ IPL​ನಲ್ಲಿ ಯುಎಇ ಪಿಚ್​​​ನಲ್ಲಿ ಅಶ್ವಿನ್​​ರದ್ದು ಪರಿಣಾಮಕಾರಿ ಸ್ಪಿನ್​​ ವರ್ಕೌಟ್​ ಆಗಿದೆ. ಹಾಗಾಗಿ ತಂಡಕ್ಕೆ ಅಶ್ವಿನ್​ ಅಗತ್ಯವಿದೆ ಎಂದು ಹೇಳಿದ್ದರಂತೆ ರೋಹಿತ್​.!

ಇಶಾನ್​ ಕಿಶನ್ ಸೆಲೆಕ್ಷನ್​​ ಕೂಡ ರೋಹಿತ್​ನಿಂದಲೇ.!

ಕೇವಲ ಅಶ್ವಿನ್​ ಮಾತ್ರವಲ್ಲ..! ಐಪಿಎಲ್​ನ ಮುಂಬೈ ಇಂಡಿಯನ್ಸ್​ ತಂಡದ ಇಶಾನ್​ ಕಿಶನ್​ ಆಯ್ಕೆ ಹಿಂದಿರೋದು ಕೂಡ, ರೋಹಿತ್ ಶರ್ಮಾನೇ. ಒಂದು ಸ್ಥಾನಕ್ಕಾಗಿ ಶಿಖರ್ ಧವನ್, ಪೃಥ್ವಿ ಶಾ, ಇಶಾನ್ ಮತ್ತು ಸಂಜು ಸ್ಯಾಮ್ಸನ್ ಅವರಿಗೆ ಪೈಪೋಟಿ ನಡೆದಿತ್ತು. ಆದರೆ ಆಯ್ಕೆ ಸಮಿತಿಗೆ ರೋಹಿತ್​ ನೀಡಿದ ಸಲಹೆಯಂತೆ, ಕಿಶನ್​ಗೆ ಮಣೆ ಹಾಕಲಾಗಿದೆ. ಅದೇ ರೀತಿ ಕೊಹ್ಲಿಯ ಫೇವರಿಟ್​ ಸ್ಪಿನ್ನರ್​ ಎನಿಸಿದ್ದ ಯಜುವೇಂದ್ರ ಚಹಲ್​​​​ ಹೊರಗುಳಿಯೋಕು ಕಾರಣರಾಗಿದ್ದಾರೆ ರೋಹಿತ್​.! ಚಹಲ್​​​ ಸ್ಥಾನಕ್ಕೆ ರಾಹುಲ್​ ಚಹರ್​ಗೆ ಚಾನ್ಸ್​ ನೀಡಲಾಗಿದೆ.

ಶಾಸ್ತ್ರಿ-ಕೊಹ್ಲಿ ಒಡನಾಟ ಚೆನ್ನಾಗಿದ್ರು, ಬೆಲೆ ನೀಡೋದು ರೋಹಿತ್​​ಗೆ.!

ಹೌದು.. ಕೋಚ್​ ರವಿ ಶಾಸ್ತ್ರಿ – ವಿರಾಟ್​ ಕೊಹ್ಲಿ ಹೆಚ್ಚು ಒಡನಾಟ ಹೊಂದಿದ್ದಾರೆ. ಹಾಗೇ ಸಹೋದರರಂತೆ ಕಾಣಿಸಿಕೊಳ್ತಾರೆ. ಆದರೆ ಎಷ್ಟೆ ಒಡನಾಟ ಇದ್ದರೂ, ತಮ್ಮದೇ ಊರಿನ ಮುಂಬೈನ ರೋಹಿತ್​ ಶರ್ಮಾರ ಮಾತಿಗೆ ಶಾಸ್ತ್ರಿ ಹೆಚ್ಚು ಬೆಲೆ ನೀಡ್ತಾರೆ. ಜೊತೆಗೆ ಟೀಮ್​ ಇಂಡಿಯಾ ವೈಟ್​ಬಾಲ್​​ ಲೀಡರ್​ಶಿಪ್ ಗ್ರೂಪ್​​​​ನಲ್ಲಿ ರೋಹಿತ್​ ಮಾತಿಗೆ ಜಾಸ್ತಿ ಮನ್ನಣೆ ಸಿಗ್ತಿದೆ. ಒಟ್ನಲ್ಲಿ.. ಟೀಮ್ ಇಂಡಿಯಾ ಒಳಗೆ ಈ ಎಲ್ಲಾ ಬೆಳವಣಿಗೆಗಳು ನೋಡ್ತಿದ್ರೆ, ಕೊಹ್ಲಿ ವರ್ಚಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರ್ತಿದೆ ಅಂತ ಅನಿಸದೇ ಇರೋದಿಲ್ಲ..!!

ಪ್ರಸನ್ನಕುಮಾರ್ ಪಿಎನ್, ಸ್ಪೊರ್ಟ್ಸ್​ಬ್ಯೂರೋ, ನ್ಯೂಸ್​ಫಸ್ಟ್​

Source: newsfirstlive.com Source link