ಮಕ್ಕಳು ಕೂರಿಸಿದ್ದ ಗಣಪತಿ ಮೂರ್ತಿಯನ್ನೇ ಕದ್ದೊಯ್ದ ಖತರ್ನಾಕ್​ ಕಳ್ಳರು..!

ಮಕ್ಕಳು ಕೂರಿಸಿದ್ದ ಗಣಪತಿ ಮೂರ್ತಿಯನ್ನೇ ಕದ್ದೊಯ್ದ ಖತರ್ನಾಕ್​ ಕಳ್ಳರು..!

ಮಂಡ್ಯ: ಮೊಬೈಲ್​, ಬೈಕ್​,ಹಣ, ಬೆಲೆ ಬಾಳುವ ಆಭರಣಗಳಿಗೆ ಕಳ್ಳರು ಕನ್ನ ಹಾಕೋದು ಕಾಮನ್​, ಆದರೆ ಇಲ್ಲಿ ಈ ಖತರ್ನಾಕ್​ ಖದೀಮರು ಗಣೇಶ ಮೂರ್ತಿಯನ್ನೇ ಕದ್ದೊಯ್ದು ನಾವು ಸ್ವಲ್ಪ ಡಿಫರೆಂಟ್ ಅಂತಾ ಅಂದಿದ್ದಾರೆ. ಹೌದು ಮಕ್ಕಳು ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನ ಕಳ್ಳರು ಕದ್ದೊಯ್ದ ಘಟನೆ ಜಿಲ್ಲೆಯ ಜಿಲ್ಲೆ ಕೆ‌.ಆರ್.ಪೇಟೆ ಪಟ್ಟಣದ ಅಗ್ರಹಾರ ಬೀದಿಯಲ್ಲಿ ನಡೆದಿದೆ.

blank

ಗಣೇಶ ಹಬ್ಬದ ನಿಮಿತ್ತ ಮಕ್ಕಳು ಜನರಿಂದ ಹಣ ಸಂಗ್ರಹಿಸಿ ಗಣೇಶ ಮೂರ್ತಿಯನ್ನ ಕೂರಿಸಿ ಹಾಗೂ ಪೋಷಕರು ಜೊತೆ ಸೇರಿ ಪೂಜೆ ಸಲ್ಲಿಸಿದ್ದರು. ಆದರೆ ಇಂದು ನಡು ರಾತ್ರಿ 3 ಗಂಟೆ ಸಮಯದಲ್ಲಿ ಗಣೇಶನ ಮೂರ್ತಿ ಮತ್ತು ಗೋಲಕವನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಕಳ್ಳರ ಕೈಚಳಕಕ್ಕೆ ಗಾಬರಿಯಾದ ಮಕ್ಕಳು ಹಾಗೂ ಪೋಷಕರು ಕಣ್ಣೀರು ಹಾಕಿ, ಗಣೇಶನನ್ನು ಕದ್ದೊಯ್ದ ಕಳ್ಳರಿಗೆ ಹಿಡಿಶಾಪ ಹಾಕಿದ್ದಾರೆ.

ಇದನ್ನೂ ಓದಿ: ಡ್ರೈವ್ ಮಾಡುವಾಗಲೇ KSRTC ಚಾಲಕನಿಗೆ ಲೋ ಬಿಪಿ.. ತಪ್ಪಿದ ಮಹಾದುರಂತ​​

Source: newsfirstlive.com Source link