IPL ಆರಂಭಕ್ಕೂ ಮುನ್ನವೇ ಕೊಹ್ಲಿ, ರೋಹಿತ್​​​, ಜಡೇಜಾ ಸೇರಿದಂತೆ ಪ್ರಮುಖ ಆಟಗಾರರಿಗೆ ಭಾರೀ ಆತಂಕ

IPL ಆರಂಭಕ್ಕೂ ಮುನ್ನವೇ ಕೊಹ್ಲಿ, ರೋಹಿತ್​​​, ಜಡೇಜಾ ಸೇರಿದಂತೆ ಪ್ರಮುಖ ಆಟಗಾರರಿಗೆ ಭಾರೀ ಆತಂಕ

ಟೀಮ್​ ಇಂಡಿಯಾ ಕ್ಯಾಂಪ್​​ನಲ್ಲಿ ಡೇಂಜರಸ್​ ಕೊರೊನಾ ಕಾಣಿಸಿಕೊಂಡ ಹಿನ್ನೆಲೆ, ಇಂಡೋ-ಇಂಗ್ಲೆಂಡ್​​ ನಡುವಿನ ಅಂತಿಮ ಟೆಸ್ಟ್​​ ರದ್ದುಗೊಂಡಿದೆ. ಹೀಗಾಗಿ ಐಪಿಎಲ್​​ ಆಡುವ ಟೀಮ್ ಇಂಡಿಯಾ ಆಟಗಾರರ ಸಿದ್ಧತೆಗೆ, ಕೊಂಚ ಸಮಯ ಸಿಕ್ಕಿದಂತಾಗಿದೆ. ಆದರೆ ಐಪಿಎಲ್​ ಫ್ರಾಂಚೈಸಿಗಳಿಗೆ ಮಾತ್ರ ಟೆನ್ಶನ್​ ಶುರುವಾಗಿದೆ.

ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯು, ನಿರಾಶಾದಾಯಕ ರೀತಿಯಲ್ಲಿ ಕೊನೆಗೊಂಡಿದೆ. ಟೀಮ್​ ಇಂಡಿಯಾ ಕ್ಯಾಂಪ್​​ನಲ್ಲಿ ಕೊರೊನಾ ಕಾಣಿಸಿಕೊಂಡ ಹಿನ್ನೆಲೆ, ಮ್ಯಾಂಚೆಸ್ಟರ್‌ನಲ್ಲಿ ಕೊನೇ ಟೆಸ್ಟ್​​​​​ ಪಂದ್ಯ​ವನ್ನ ರದ್ದುಗೊಳಿಸಲಾಗಿದೆ. ಇನ್ನ ರದ್ದಾಗಿರುವ ಅಂತಿಮ ಟೆಸ್ಟ್ ಯಾವಾಗ ನಡೆಯಲಿದೆ ಅನ್ನೋದ್ರ ಬಗ್ಗೆ ಬಿಸಿಸಿಐ ಮತ್ತು ಇಸಿಬಿ ಚರ್ಚೆ ನಡೆಸಿ ಮಹತ್ವದ ನಿರ್ಧಾರಕ್ಕೆ ಬರಲಿವೆ. ಆದರೆ ಈ ಪಂದ್ಯಕ್ಕೆ ಅಡ್ಡಿಯಾದ ಕೋವಿಡ್​​, IPL ಫ್ರಾಂಚೈಸಿಗಳಿಗೂ ತಲೆಬಿಸಿ ತಂದಿಟ್ಟಿದೆ.

ಅಂತಿಮ ಟೆಸ್ಟ್​​ ರದ್ದತಿಗೇ ಹೆಡ್​ಕೋಚ್ ರವಿ ಶಾಸ್ತ್ರಿಯೇ ನೇರ ಕಾರಣ.!

ಹೌದು.. ಪಂದ್ಯ ರದ್ದತಿಗೆ ಪ್ರಮುಖ ಕಾರಣ, ಹೆಡ್ ​​ಕೋಚ್​ ರವಿಶಾಸ್ತ್ರಿ ಎನ್ನಲಾಗ್ತಿದೆ. ಬಿಸಿಸಿಐ ಅನಮತಿ ಪಡೆಯದೆ ತಮ್ಮ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಸಿದ್ದರ ಪರಿಣಾಮ, ರವಿ ಶಾಸ್ತ್ರಿಗೆ ಇಲ್ಲೇ ಸೋಂಕು ಹರಡಿದೆ ಎನ್ನಲಾಗ್ತಿದೆ. ಶಾಸ್ತ್ರಿ ಬಳಿಕ ಸಹಾಯಕ ಕೋಚ್​ಗಳಾದ ಭರತ್‌ ಅರುಣ್‌, ಆರ್‌. ಶ್ರೀಧರ್​​ಗೆ ಪಾಸಿಟಿವ್ ಬಂತು. ಇದಾದ ಬೆನ್ನಲ್ಲೆ ಸಹಾಯಕ ಫಿಜಿಯೋ ಯೋಗೇಶ್‌ ಪರ್ಮಾರ್​​​ಗೂ ಸೋಂಕು ತಗುಲಿದ್ದು, ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಆದ್ರೆ ಪ್ರಮುಖ ಆಟಗಾರರು ಹಾಗೂ ಮ್ಯಾಚ್​ ವಿನ್ನರ್​​​​ಗಳೇ ಪ್ರೈಮರಿ ಕಾಂಟ್ಯಾಕ್ಟ್​ ಆಗಿರೋದು, ತಲೆಬಿಸಿ ಹೆಚ್ಚಿಸಿದೆ.

ಹಾಗಾಗಿ ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ ಮತ್ತು ಚೇತೇಶ್ವರ್ ಪೂಜಾರ ಸಂಕಷ್ಟಕ್ಕೆ ಸಿಲುಕಿದ್ದು, ಅವರ ಮೇಲೆ ಬಿಸಿಸಿಐ ತೀವ್ರ ನಿಗಾ ಇಟ್ಟಿದೆ. ಇದರ ಜೊತೆಗೆ IPL​ ಫ್ರಾಂಚೈಸಿಗಳಿಗೆ ಟೆನ್ಶನ್​ ಕೂಡ ಆರಂಭವಾಗಿದೆ. ಅದರಲ್ಲೂ ಮುಂಬೈ, ಡೆಲ್ಲಿ, ಚೆನ್ನೈ, ಆರ್​ಸಿಬಿ, ಪಂಜಾಬ್​​​​​​​​ ಫ್ರಾಂಚೈಸಿಗಳಿಗೆ ಭೀತಿ ಎದುರಾಗಿದೆ. ಒಬ್ಬರಿಗೆ ಕೊರೊನಾ ಬಂದರೂ ಇವಱರು ಕೂಡ ಐಪಿಎಲ್​ ಆಡೋಕೆ ಆಗೋದಿಲ್ಲ.!

ಇದನ್ನೂ ಓದಿ: ಮಿತಿಮೀರಿದ ಬೀದಿ ವ್ಯಾಪರಿಗಳ ಸೌಂಡ್​​ ಹಾವಳಿ; ಪೊಲೀಸ್​ ಕಂಟ್ರೋಲ್​​ ರೂಮ್​​ಗೆ ಸಾವಿರಾರು ಕರೆಗಳು

ಇನ್ನು ಕಾರ್ಯಕ್ರಮಕ್ಕೆ ವಿರಾಟ್​ ಕೊಹ್ಲಿ, ಶಾರ್ದೂಲ್​, ಬೂಮ್ರಾ, ರಹಾನೆ ಸೇರಿ ಹಲವರು ಹೋಗಿದ್ರು. ರೋಹಿತ್, ಪೂಜಾರ, ಜಡೇಜಾ ಮತ್ತು ಶಮಿ ಇಂಜುರಿಗೆ ತುತ್ತಾಗಿದ್ದ ಪರಿಣಾಮ, ಫಿಸಿಯೋ ಯೋಗೇಶ್​ರೊಂದಿಗೆ ಇದ್ರು. ಸದ್ಯ ಫಿಜಿಯೋಗೆ ಕೊರೊನಾ ಬಂದಿದ್ದು, ಈ ಎಲ್ಲ ಆಟಗಾರರ ಮೇಲೆ ಬಿಸಿಸಿಐ ಕಣ್ಣಿಟ್ಟಿದೆ.

ಸದ್ಯ ಆಟಗಾರರ ವರದಿ ನೆಗೆಟಿವ್ ಬಂದಿದ್ದರೂ, ಮುಂದಿನ ಟೆಸ್ಟ್​​​ಗಳಲ್ಲಿ ಪಾಸಿಟಿವ್​ ಬಂದರೂ ಅಚ್ಚರಿ ಇಲ್ಲ.!!! ಹಾಗಾಗಿ ಐಪಿಎಲ್ ಆರಂಭಕ್ಕೂ ಮುನ್ನವೇ ಬಿಸಿಸಿಐ ಮತ್ತು ಐಪಿಎಲ್ ಫ್ರಾಂಚೈಸಿಗಳು, ಹೆಚ್ಚು ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಬೇಕಿದೆ.

ಪ್ರಸನ್ನಕುಮಾರ್​ ಪಿಎನ್​, ಸ್ಪೋರ್ಟ್ಸ್​​ಬ್ಯೂರೋ, ನ್ಯೂಸ್​​ಫಸ್ಟ್

Source: newsfirstlive.com Source link