ಜನ ಸಾಮಾನ್ಯರ ಸಿಎಂ ಬೊಮ್ಮಾಯಿ: ಡಾ.ಕೆ ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ 710 ಅಂಬುಲೆನ್ಸ್ ಇವೆ. ಇದರ ಜೊತೆ ಮತ್ತೆ 120 ಹೊಸದಾಗಿ ಸೇರ್ಪಡೆ ಮಾಡಲಾಗಿದೆ. ಆರೋಗ್ಯ ಸೇವೆಯಲ್ಲಿ ಇದೊಂದು ಮೈಲಿಗಲ್ಲು. ಈ ಸೇವೆಯನ್ನು ಮತ್ತಷ್ಟು ಸುಧಾರಣೆ ಮಾಡಲು ಸಿಎಂ ಮನಸ್ಸು ಮಾಡಿದ್ದಾರೆ ಅವರು ಜನ ಸಾಮಾನ್ಯರ ಸಿಎಂ ಎಂದು ಬಸವರಾಜ ಬೊಮ್ಮಾಯಿ ಅವರನ್ನು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹಾಡಿ ಹೊಗಳಿದ್ದಾರೆ.

ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ 120 ನೂತನ 108 ಆರೋಗ್ಯ ಕವಚ ಅಂಬುಲೆನ್ಸ್ ಲೋಕಾರ್ಪಣೆಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ನೆರವೇರಿಸಿದರು. ಇದನ್ನೂ ಓದಿ: ಲಸಿಕಾಕರಣದಲ್ಲಿ ವಿದೇಶಗಳಿಂತ ಕರ್ನಾಟಕವೇ ಫಾಸ್ಟ್ ಅಂಡ್ ಬೆಸ್ಟ್

ಬಳಿಕ ಮಾತನಾಡಿದ ಸುಧಾಕರ್, ರಾಜ್ಯಕ್ಕೆ ಹೊಸದಾಗಿ 120 ಅಂಬುಲೆನ್ಸ್ ಗಳನ್ನು ಲೋಕಾರ್ಪಣೆ ಮಾಡ್ತಿದ್ದೇವೆ. ಈಗಾಗಲೇ 710 ಆಂಬ್ಯುಲೆನ್ಸ್ ಇವೆ. ಇದರ ಜೊತೆ ಮತ್ತೆ 120 ಹೊಸದಾಗಿ ಸೇರ್ಪಡೆ ಮಾಡಲಾಗಿದೆ. 120 ಅಂಬುಲೆನ್ಸ್ ಗಳು ಅಡ್ವಾನ್ಸ್ ಸಿಸ್ಟಮ್ ಇರೋ ಅಂಬುಲೆನ್ಸ್ ಗಳು. ಆರೋಗ್ಯ ಸೇವೆಯಲ್ಲಿ ಇದೊಂದು ಮೈಲಿಗಲ್ಲು. ಈ ಸೇವೆಯನ್ನು ಮತ್ತಷ್ಟು ಸುಧಾರಣೆ ಮಾಡಲು ಸಿಎಂ ಮನಸ್ಸು ಮಾಡಿದ್ದಾರೆ. ಹೊಸದಾಗಿ ಟೆಂಡರ್ ಚಾಲನೆ ಮಾಡಲಾಗಿದೆ. ಈ ಟೆಂಡರ್ ನಲ್ಲಿ ಆಸ್ಪತ್ರೆಗಳನ್ನು ಮ್ಯಾಪಿಂಗ್ ಮಾಡಲಾಗುತ್ತಿದೆ. ಸಾರ್ವಜನಿಕರಿಗೆ ಆರೋಗ್ಯ ಸೇವೆ ಮುಖ್ಯ. ಅದರೊಂದಿಗೆ ಈ ಅಂಬುಲೆನ್ಸ್ ಸೇವೆ ಕೂಡ ಬಹಳ ಪ್ರಮುಖವಾದ ಭಾಗವಾಗಿದೆ. ಹಾಗಾಗಿ ನಾವು ರಾಜ್ಯದ ಜನರ ಸೇವೆಗಾಗಿ ಇದೀಗ ಮತ್ತೆ ಮುಂದಾಗಿದ್ದೇವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

blank

ಮುಂದಿನ ದಿನಗಳಲ್ಲಿ ರೋಗಿಯನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲು ಕಮಾಂಡ್ ಕೊಡುವ ಕೆಲಸ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ. ಈಗ 1 ಲಕ್ಷ ಜನಸಂಖ್ಯೆಗೆ ಒಂದು ಆಂಬ್ಯುಲೆನ್ಸ್ ಇದೆ. ಮುಂದೆ ಇದನ್ನು 40-50 ಸಾವಿರ ಜನರಿಗೆ ಒಂದು ಅಂಬುಲೆನ್ಸ್ ನೀಡುವ ಉದ್ದೇಶ ಇದೆ. ಮತ್ತೆ 410 ಅಂಬುಲೆನ್ಸ್ ಖರೀದಿ ಮಾಡುತ್ತೇವೆ. ಕೋವಿಡ್-19 ಲಸಿಕೆಯಲ್ಲೂ ನಾವು ಸಾಧನೆ ಮಾಡಿದ್ದೇವೆ. ಲಸಿಕೆ ನಿಡೋದ್ರಲ್ಲಿ ರಷ್ಯಾವನ್ನು ನಮ್ಮ ರಾಜ್ಯ ಮೀರಿಸಿದೆ. ನಿತ್ಯ 3.8 ಲಕ್ಷ ಲಸಿಕೆ ನೀಡುತ್ತಿದ್ದೇವೆ. ಶೀಘ್ರವೇ 5 ಕೋಟಿ ಲಸಿಕೆ ನಮ್ಮ ರಾಜ್ಯದಲ್ಲಿ ಆಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಲ್ಯಾಬ್ ಉಪಕರಣ ಖರೀದಿಯಲ್ಲಿ 34 ಕೋಟಿ ರೂ. ಕಿಕ್ ಬ್ಯಾಕ್- ಸಿಬಿಐ ತನಿಖೆಗೆ ಕಾಂಗ್ರೆಸ್ ಆಗ್ರಹ

ಕಾರ್ಯಕ್ರಮದಲ್ಲಿ ಸಚಿವರಾದ ಶ್ರೀರಾಮುಲು, ಮುನಿರತ್ನ, ಭೈರತಿ ಬಸವರಾಜ್, ಎಸ್.ಟಿ. ಸೋಮಶೇಖರ್, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Source: publictv.in Source link