ಬಾಲಿವುಡ್​​ ನಟಿ ಸನ್ನಿ ಲಿಯೋನ್​​ ಮನೆಯಲ್ಲಿ ಗಣೇಶ ಹಬ್ಬದ ಸಂಭ್ರಮ

ಬಾಲಿವುಡ್​​ ನಟಿ ಸನ್ನಿ ಲಿಯೋನ್​​ ಮನೆಯಲ್ಲಿ ಗಣೇಶ ಹಬ್ಬದ ಸಂಭ್ರಮ

ಬಾಲಿವುಡ್​ ಲೋಕದ ಸೆಲೆಬ್ರಿಟಿಗಳೂ ಪತ್ರಿ ವರ್ಷವೂ ಗಣೇಶನ ಹಬ್ಬವನ್ನ ಬಹಳ ಅದ್ದೂರಿಯಾಗಿ ಆಚರಿಸುತ್ತಾರೆ. ಅದರಂತೇ ಬಾಲಿವುಡ್​ ನಟಿಮಣಿಯಾದ ಕರೀನಾ ಕಪೂರ್​ ಖಾನ್​, ಶಿಲ್ಪಾ ಶೆಟ್ಟಿ ತಮ್ಮ ಮನೆಯಲ್ಲಿ ಸಂಭ್ರಮದಿಂದ ಗಣೇಶ ಹಬ್ಬವನ್ನು ಆಚರಿಸಿಕೊಂಡಿದ್ದರು. ಇದೀಗ ಬಾಲಿವುಡ್​​​​ನ ಮತ್ತೊಬ್ಬ ನಟಿಮಣಿ ಕೂಡ ತನ್ನ ಕುಟುಂಬದ ಜೊತೆ ಸಂಭ್ರಮದಿಂದ ಗಣೇಶ ಹಬ್ಬವನ್ನು ಆಚರಿಸಿಕೊಂಡಿದ್ದಾರೆ.

blank

ಹೌದು, ಬಾಲಿವುಡ್​ ಬೆಡಗಿ, ಪಡ್ಡೆ ಹುಡುಗರ ಫೇವ್​ರೇಟ್​ ಚೆಲುವೆ ಸನ್ನಿ ಲಿಯೋನ್​ ತಮ್ಮ ಕುಟುಂಬದ ಜೊತೆ ಸಂಭ್ರಮದಿಂದ ಗಣೇಶನ ಹಬ್ಬವನ್ನ ಆಚರಿಸಿಕೊಂಡಿದ್ದಾರೆ. ತಮ್ಮ ಮನೆಯಲ್ಲಿ ಗಣೇಶನ್ನ ವಿಗ್ರಹವನ್ನು ಇಟ್ಟು ಅದಕ್ಕೆ ಹೂವಿನ ಅಲಂಕಾರ ಮಾಡಿ ಸನ್ನಿ ತನ್ನ ಪತಿ, ಮಕ್ಕಳು ಹಾಗೂ ತನ್ನ ಗೆಳತಿ ಪ್ರಿಯಾಂಕಾ ಜೊತೆ ಗಣೇಶನ ಹಬ್ಬವನ್ನ ಆಚರಿಸಿಕೊಂಡಿದ್ದಾರೆ.

blank

ಇನ್ನು ಸನ್ನಿ ಈ ಫೋಟೊಗಳನ್ನು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಸಖತ್​ ವೈರಲ್​ ಆಗುತ್ತಿದೆ.

Source: newsfirstlive.com Source link