ಮಹತ್ವದ ಬೆಳವಣಿಗೆ; ತಡರಾತ್ರಿ ‘ಬಿಎಸ್​​ವೈ’ರನ್ನು ಕಟೀಲ್​​ ದಿಢೀರ್​​ ಭೇಟಿಯಾಗಿದ್ಯಾಕೆ?

ಮಹತ್ವದ ಬೆಳವಣಿಗೆ; ತಡರಾತ್ರಿ ‘ಬಿಎಸ್​​ವೈ’ರನ್ನು ಕಟೀಲ್​​ ದಿಢೀರ್​​ ಭೇಟಿಯಾಗಿದ್ಯಾಕೆ?

ಬೆಂಗಳೂರು: ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​​ ಕುಮಾರ್​​ ಕಟೀಲ್​​ ದಿಢೀರ್​​ ಭೇಟಿಯಾಗಿದ್ದಾರೆ. ಶನಿವಾರ ತಡರಾತ್ರಿ ಸರ್ಕಾರಿ ನಿವಾಸ ಕಾವೇರಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾದ ನಳಿನ್​​ ಕುಮಾರ್​​ ಕಟೀಲ್​​ ಮಹತ್ವದ ಮಾತುಕತೆ ನಡೆಸಿದ್ದಾರೆ.

ನಾಯಕತ್ವದ ಬದಲಾವಣೆಯಾದ ಬಳಿಕ ಇದುವರೆಗೂ ಬಿಜೆಪಿ ಕೋರ್​​ ಕಮಿಟಿ ಸಭೆ ನಡೆದಿಲ್ಲ. ಹೀಗಾಗಿ ಮುಂದಿನ ವಾರ ಬಿಜೆಪಿ ಕೋರ್​​ ಕಮಿಟಿ ಸಭೆ ನಡೆಯಲಿದ್ದು, ಇದಕ್ಕೆ ಬಿ.ಎಸ್​ ಯಡಿಯೂರಪ್ಪ ಅವರನ್ನು ಆಹ್ವಾನಿಸಲು ಆಗಮಿಸಿದ್ದರು ಎನ್ನಲಾಗುತ್ತಿದೆ.

ಇನ್ನು, ಭೇಟಿ ವೇಳೆ ಯಡಿಯೂರಪ್ಪ ಅವರೊಂದಿಗೆ ಪಕ್ಷ ಸಂಘಟನೆ ಕುರಿತು ಚರ್ಚಿಸಲಾಗಿದೆ. ಅಲ್ಲದೇ ನಾಯಕತ್ವ ಬದಲಾವಣೆ ಬಳಿಕ ಬಿಜೆಪಿ ಕೋರ್​​ ಕಮಿ ಪುನಾರಚನೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಬಾಲಿವುಡ್​​ ನಟಿ ಸನ್ನಿ ಲಿಯೋನ್​​ ಮನೆಯಲ್ಲಿ ಗಣೇಶ ಹಬ್ಬದ ಸಂಭ್ರಮ

Source: newsfirstlive.com Source link