ಸೈಕ್ಲಿಂಗ್ ವೇಳೆ ಹೃದಯಾಘಾತ – ಸೈಕ್ಲಿಸ್ಟ್ ಸಾವು!

ಹುಬ್ಬಳ್ಳಿ: ಹವ್ಯಾಸಿ ಸೈಕ್ಲಿಸ್ಟ್ ಒಬ್ಬರು ಸೈಕಲ್ ರೈಡ್ ಮಾಡುವಾಗಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಏನಿದು ಘಟನೆ?: ಹುಬ್ಬಳ್ಳಿಯ ಬಸನಗೌಡ ಶಿವಳ್ಳಿ (35) ಎಂಬುವವರೇ ಮೃತ ಸೈಕ್ಲಿಸ್ಟ್. ಶಿವಳ್ಳಿ ಅವರು ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಸದಸ್ಯರಾಗಿದ್ದರು. ಹುಬ್ಬಳ್ಳಿ ಬೈಸಿಕಲ್ ಕ್ಲಬ್ 200 ಕಿ.ಮೀ. ಸೈಕಲ್ ಓಡಿಸುವ ಗುರಿ ಇಟ್ಟುಕೊಂಡು 35 ಸೈಕ್ಲಿಸ್ಟ್‍ಗಳು ಹುಬ್ಬಳ್ಳಿಯಿಂದ ಶಿಗ್ಗಾವಿಗೆ, ಹುಬ್ಬಳ್ಳಿಯಿಂದ ಕಿತ್ತೂರಿಗೆ ಹೋಗಿ ಬರುವ ಯೋಜನೆ ಹಾಕಿಕೊಂಡಿದ್ದರು. ಇದನ್ನೂ ಓದಿ: ಅಟ್ಲಾಂಟಾ ಮೃಗಾಲಯದ ಗೊರಿಲ್ಲಾಗಳಲ್ಲಿ ಕೊರೊನಾ ಸೋಂಕು ದೃಢ

ಶಿವಳ್ಳಿ ಅವರು ಸೈಕಲ್ ಪ್ರಯಾಣಕ್ಕೆ ಹೆಸರು ನೋಂದಾಯಿಸಿಕೊಂಡಿರಲಿಲ್ಲ. ಆದರೆ, ಸ್ನೇಹಿತರನ್ನು ಬೀಳ್ಕೊಡಲು ಆಗಮಿಸಿದ್ದರು. ಹುಬ್ಬಳ್ಳಿಯ ಹೊರ ವಲಯದ ಕೆಲ ಕಿಲೋಮೀಟರ್ ವರೆಗೆ ಬಿಟ್ಟು ಬರುವುದಾಗಿ ಹೇಳಿ ಸ್ನೇಹಿತರೊಂದಿಗೆ ಸೈಕಲ್ ಏರಿ ಹೊರಟಿದ್ದರು. ಆದರೆ, ಮಧ್ಯದಲ್ಲಿ ಬಿಟ್ಟು ಬಾರದೇ ಶಿಗ್ಗಾವಿವರೆಗೆ ತೆರಳಿದ್ದರು. ಅಲ್ಲಿ ಹಣ್ಣು ತಿಂದು ಕೆಲಕಾಲ ಸ್ನೇಹಿತರೊಂದಿಗೆ ಹರಟೆ ಹೊಡೆದಿದ್ದಾರೆ. ಇದನ್ನೂ ಓದಿ:   ಗುಜರಾತ್ ಮುಂದಿನ ಸಿಎಂ ಯಾರು?- ಪಟೇಲ್ ಸಮುದಾಯಕ್ಕೆ ಮಣೆ ಹಾಕುವ ಚಿಂತನೆ

ಶಿಗ್ಗಾವಿಯಿಂದ 3 ಕಿ.ಮೀ. ಮುಂದೆ ಹೋದಾಗ ಏಕಾಏಕಿ ಕುಸಿದು ಬಿದ್ದಿದ್ದಾರೆ. ಸೈಕಲ್ ರೈಡರ್ ತಂಡದಲ್ಲಿದ್ದ ವೈದ್ಯರು ಪರೀಕ್ಷೆ ಮಾಡಿದಾಗ ಹೃದಯಾಘಾತದಿಂದ ಶಿವಳ್ಳಿ ಅವರು ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. ಇದನ್ನೂ ಓದಿ:  ವಿಜಯಪುರದ ಕುವರಿಗೆ ರಾಷ್ಟ್ರೀಯ ಪ್ರಶಸ್ತಿ

ಮೃತ ಬಸನಗೌಡ ಶಿವಳ್ಳಿ ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.

Source: publictv.in Source link