ಗಣೇಶ ವಿಸರ್ಜನೆ ವೇಳೆ ವೈಟ್​​ ಅಂಡ್​​ ವೈಟ್​​​ ಡ್ರೆಸ್​​​​​ ಹಾಕಿ ಮಿಂಚಿದ ಶ್ರೀರಾಮುಲು, ಜನಾರ್ದನ್​​ ರೆಡ್ಡಿ..!

ಗಣೇಶ ವಿಸರ್ಜನೆ ವೇಳೆ ವೈಟ್​​ ಅಂಡ್​​ ವೈಟ್​​​ ಡ್ರೆಸ್​​​​​ ಹಾಕಿ ಮಿಂಚಿದ ಶ್ರೀರಾಮುಲು, ಜನಾರ್ದನ್​​ ರೆಡ್ಡಿ..!

ಬಳ್ಳಾರಿ: ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಗಣಿ ನಾಡಿನ ಸ್ನೇಹಿತರು ಒಂದಾಗಿದ್ದು, ಕುಚಿಕು ದೋಸ್ತಿಗಳು ಗಣೇಶನ ವಿಸರ್ಜನೆ ಮಾಡಿ ಸಂಭ್ರಮಾಚರಣೆ ಮಾಡಿದ್ದಾರೆ.

blank

ಇದನ್ನೂ ಓದಿ: ದಾರುಣ ಘಟನೆ: ನಾಪತ್ತೆಯಾದ ಅಪ್ಪನ ಹುಡುಕುತ್ತಾ ಮಸಣ ಸೇರಿದ ಮಗ..

ಇತ್ತೀಚೆಗೆ ಸುಪ್ರೀಂ ಕೋರ್ಟ್ ನಿಂದ ಅನುಮತಿ ಪಡೆದು ಬಳ್ಳಾರಿಗೆ ಬಂದಿರೋ ಮಾಜಿ ಸಚಿವ ಜನಾರ್ದನ್​​ ರೆಡ್ಡಿ ಫುಲ್​ ರಿಲ್ಯಾಕ್ಸ್​ ಮೂಡನಲ್ಲಿದ್ದಾರೆ. ರೆಡ್ಡಿ‌‌ ಮನೆಯಲ್ಲಿ ಪರಿಸರ ಸ್ನೇಹಿ ಗಣಪನ ಇಟ್ಟು ಪೂಜೆ ಮಾಡಲಾಗಿದ್ದು, ನಿನ್ನೆ ರಾತ್ರಿ ನಿವಾಸದಲ್ಲಿನ ಬಾವಿಯಲ್ಲಿ ಗಣೇಶನ ಶಾಸ್ತ್ರೋಕ್ತ ವಿಸರ್ಜನೆ ಮಾಡಲಾಯಿತು.

ಈ ವೇಳೆ ಕುಚಿಕು ಸ್ನೇಹಿತರಾದ ಜನಾರ್ದನ್​​ ರೆಡ್ಡಿ ಮತ್ತು ಶ್ರೀರಾಮುಲು ಒಂದೇ ತರ ಬಟ್ಟೆ ತೊಟ್ಟು ಫುಲ್​ ಮಿಂಚಿದ್ದಾರೆ. ವೈಟ್ ಅಂಡ್ ವೈಟ್ ಶರ್ಟ್ ಹಾಗೂ ಪಂಚೆ ತೊಟ್ಟು ಗೆಳೆಯರಿಬ್ಬರು ಸಂಭ್ರಮಾಚರಣೆಯಲ್ಲಿ ತೊಡಗಿದ್ದು, ಕೈ ಕೈ ಹಿಡಿದು ಫೋಟೋಗೆ ಪೋಸ್​ ಕೊಟ್ಟು ಸಂತಸ ಪಟ್ಟಿದ್ದಾರೆ. ಸದ್ಯ ಕುಚಿಕು ಗೆಳೆಯರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.

blank

Source: newsfirstlive.com Source link