ಮನೆಗೆ ನುಗ್ಗಿ ಮಹಿಳೆಯನ್ನು ಎಳೆದಾಡಿದ ಮಾಜಿ ಜೆಡಿಎಸ್​​ ಕಾರ್ಪೊರೇಟರ್​; ಕೇಸ್​​ ದಾಖಲು​

ಮನೆಗೆ ನುಗ್ಗಿ ಮಹಿಳೆಯನ್ನು ಎಳೆದಾಡಿದ ಮಾಜಿ ಜೆಡಿಎಸ್​​ ಕಾರ್ಪೊರೇಟರ್​; ಕೇಸ್​​ ದಾಖಲು​

ಹುಬ್ಬಳ್ಳಿ: ಮಾಜಿ ಜೆಡಿಎಸ್ ಕಾರ್ಪೊರೇಟರ್ ಅಸಭ್ಯ ವರ್ತನೆ ತೋರಿದ್ದಾರೆ ಎಂದು ಮಹಿಳೆಯೊಬ್ಬರು ವಿದ್ಯಾಗಿರಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ಜೆಡಿಎಸ್ ಮಾಜಿ ಕಾರ್ಪೊರೇಟರ್​​ ಶ್ರೀಕಾಂತ್ ಜಮನಾಳ‌ ಅವರಿಂದ ಜೀವ ಬೆದರಿಕೆ ಇದೆ ಎಂದು ದೂರು ದಾಖಲಿಸಿದ್ದಾರೆ.

ನಡು ರಸ್ತೆಯಲ್ಲಿಯೇ ಅನುಮತಿ ಅತ್ತಿಗೇರಿ ಎಂಬ ಮಹಿಳೆಯನ್ನು ಮಾಜಿ ಕಾರ್ಪೊರೇಟರ್​​ ಎಳೆದಾಡಿದ್ದಾರೆ. ನಗರದ ಸತ್ತೂರು ಡೆಂಟಲ್ ಕಾಲೇಜು ಬಳಿ ಈ ಘಟನೆ ನಡೆದಿದೆ. ಮನೆಗೆ ನುಗ್ಗಿದ ಮಾಜಿ ಕಾರ್ಪೊರೇಟರ್​​ ಮಹಿಳೆಯೊಂದಿಗೆ ಅಸಭ್ಯ ವರ್ತನೆ ತೋರಿದ್ದಾರೆ.

ಗಲಾಟೆ ಬಿಡಿಸಲು ಬಂದವರಿಗೆ ಜಮನಾಳ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಸಂಬಂಧ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ವೈಟ್​​ ಅಂಡ್​​ ವೈಟ್​​​ ಡ್ರೆಸ್​​​​​ ಹಾಕಿ ಮಿಂಚಿದ ಶ್ರೀರಾಮುಲು, ಜನಾರ್ದನ್​​ ರೆಡ್ಡಿ..!

Source: newsfirstlive.com Source link