ಬೆಂಗಳೂರು ಪೊಲೀಸರ ನಿದ್ದೆಗೆಡಿಸಿದ ಶೂ, ಚಪ್ಪಲಿ ಕಳ್ಳರು..!

ಬೆಂಗಳೂರು ಪೊಲೀಸರ ನಿದ್ದೆಗೆಡಿಸಿದ ಶೂ, ಚಪ್ಪಲಿ ಕಳ್ಳರು..!

ಬೆಂಗಳೂರು: ನಗರದ ಮಹಾಲಕ್ಷ್ಮಿ ‌ಲೇಔಟ್ ಏರಿಯಾ ಪೊಲೀಸರಿಗೆ ಹೊಸ ತಲೆನೋವು ಶುರುವಾಗಿದ್ದು, ಬ್ರಾಂಡೆಡ್ ಶೂ, ಚಪ್ಪಲಿ ಕಳ್ಳರು ಪೊಲೀಸರ ನಿದ್ದೆಗೆಡಿಸಿದ್ದಾರೆ.

ಹೌದು ಐಷಾರಾಮಿಯಾಗಿರೋ ಒಂಟಿ ಮನೆಗಳನ್ನ ಟಾರ್ಗೆಟ್ ಮಾಡ್ತಿರೋ ಕಳ್ಳರು, ಕದಿಯೋದು ಮಾತ್ರ ಹೈಫೈ ಶೂ, ಚಪ್ಪಲಿಗಳನ್ನ ಅಂದ್ರೆ ನೀವು ನಂಬಲೇ ಬೇಕು. ಕಳೆದೊಂದು ವಾರದಲ್ಲಿ ಮಹಾಲಕ್ಷ್ಮಿ ಲೇಔಟ್ ನ ಐದಾರು ಮನೆಗಳಲ್ಲಿ ಈ ಕೃತ್ಯ ನಡೆದಿದ್ದು, ತಡರಾತ್ರಿಯ ನಂತ್ರ ಅಪಾರ್ಟ್​ಮೆಂಟ್​ಗಳಿಗೆ ಲಗ್ಗೆ ಇಡೋ ಖದೀಮರು ಶೂ, ಚಪ್ಪಲಿಗಳನ್ನು ಎಗರಿಸಿ ನಾಪತ್ತೆಯಾಗುತ್ತಿದ್ದಾರೆ.

ಇದನ್ನೂ ಓದಿ:  ಬೆಂಗಳೂರಿನಲ್ಲಿ ವೀಕೆಂಡ್​​ ಪಾರ್ಟಿ; ಐಷಾರಾಮಿ ಕಾರುಗಳಲ್ಲಿ ಡ್ಯಾನ್ಸ್​ ಮಾಡಿ ದೊಡ್ಡವ್ರ ಮಕ್ಕಳ ಪುಂಡಾಟ

ಸೆಕ್ಯೂರಿಟಿ ಗಾರ್ಡ್ ಇಲ್ಲದ, ಕಂಪೌಂಡ್ ನಲ್ಲಿ ಲೈಟ್ ಆಫ್ ಆಗಿರುವ ಮನೆಗಳೇ ಇವರ ಮೇನ್ ​ಟಾರ್ಗೆಟ್ ಎನ್ನಲಾಗ್ತಿದ್ದು, ಮನೆಯ ಕಂಪೌಂಡ್ ನಲ್ಲಿರೋ ಬ್ರಾಂಡೆಡ್ ಶೂ ಚಪ್ಪಲಿ ಕದ್ದು ಎಸ್ಕೇಪ್ ಆಗುವ ಕಳ್ಳರ ಸಂಪೂರ್ಣ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಶೂ, ಚಪ್ಪಲಿಗಳ್ಳರಿಗೆ ಪೊಲೀಸರು ಶೋಧ ನಡೆಸಿದ್ದಾರೆ.

Source: newsfirstlive.com Source link