ಮನೆ ಮುಂದೆ ಬೈಕ್​ ನಿಲ್ಲಿಸೋರೆ ಹುಷಾರ್.. ಕ್ಷಣಾರ್ಧದಲ್ಲಿ ಮಾಯವಾಗುತ್ತೆ ಬೈಕ್​ನಲ್ಲಿದ್ದ ಪೆಟ್ರೋಲ್​

ಮನೆ ಮುಂದೆ ಬೈಕ್​ ನಿಲ್ಲಿಸೋರೆ ಹುಷಾರ್.. ಕ್ಷಣಾರ್ಧದಲ್ಲಿ ಮಾಯವಾಗುತ್ತೆ ಬೈಕ್​ನಲ್ಲಿದ್ದ ಪೆಟ್ರೋಲ್​

ಬೆಂಗಳೂರು: ದಿನದಿಂದ ದಿನಕ್ಕೆ ಪೆಟ್ರೋಲ್ ರೇಟ್ ಹೆಚ್ಚಾಗ್ತಿದ್ದಂತೆ ನಗರದಲ್ಲಿ ಪೆಟ್ರೋಲ್ ಕಳ್ಳರ ಹಾವಳಿಯು ಹೆಚ್ಚಾಗ್ತಿದ್ದು ಸಾರ್ವಜನಿಕರ ನಿದ್ದೆಗೆಡಿಸಿದೆ.

ಹೌದು ಮನೆ ಹೊರಗೆ ನಿಲ್ಲಿಸಿರೋ ಬೈಕ್ ಗಳನ್ನೇ ಟಾರ್ಗೆಟ್​ ಮಾಡ್ತಿರೋ ಕಳ್ಳರು, ಬೈಕ್ ನ ಪೆಟ್ರೋಲ್ ಪೈಪ್ ತೆಗೆದು ಬಾಟಲಿಯಲ್ಲಿ ಪೆಟ್ರೋಲ್ ತುಂಬಿಕೊಂಡು ಎಸ್ಕೇಪ್ ಆಗುತ್ತಿದ್ದಾರೆ. ನಗರದ ಬೈಯ್ಯಪ್ಪನಹಳ್ಳಿ ಲೇಔಟ್ ನಲ್ಲಿ ಪೆಟ್ರೋಲ್​ ಕಳ್ಳರ ಹಾವಳಿ ಜೋರಾಗಿದ್ದು, ಸಾರ್ವಜನಿಕರು ಹೈರಾಣಾಗಿ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಖದೀಮರು ಪೆಟ್ರೋಲ್​ ಕನ್ನ ಹಾಕುವ ದೃಶ್ಯಗಳು ಸದ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಪೆಟ್ರೋಲ್​ ಕಳ್ಳರಿಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಮಕ್ಕಳು ಕೂರಿಸಿದ್ದ ಗಣಪತಿ ಮೂರ್ತಿಯನ್ನೇ ಕದ್ದೊಯ್ದ ಖತರ್ನಾಕ್​ ಕಳ್ಳರು..!

Source: newsfirstlive.com Source link