ಭೀಮಾ ನದಿ ಪ್ರವಾಹ ಆತಂಕ – ನದಿ ತೀರಕ್ಕೆ ತೆರಳದಂತೆ ಡಿಸಿ ರಾಗಾಪ್ರಿಯಾ ಸೂಚನೆ

ಯಾದಗಿರಿ: ಮುಂದಿನ ವಾರದಿಂದ ಅಕ್ಟೋಬರ್ ಎರಡನೇ ವಾರದ ವರೆಗೆ ಭೀಮಾ ನದಿಯ ನೀರಿನ ಪ್ರಮಾಣ ಜಾಸ್ತಿಯಾಗುವ ಸಂಭವಿದ್ದು, ಮತ್ತೆ ಭೀಮಾ ನದಿ ಪ್ರವಾಹ ಆತಂಕ ಶುರುವಾಗಿದೆ. ನದಿ ತೀರಕ್ಕೆ ಸಾರ್ವಜನಿಕರು ತೆರಳದಂತೆ ಮತ್ತು ಮೀನುಗಾರಿಕೆ ಮಾಡದಂತೆ ಯಾದಗಿರಿ ಡಿಸಿ ರಾಗಾಪ್ರಿಯಾ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಪಬ್ಲಿಕ್ ಟಿವಿಯ ಮುಖಾಂತರ ಜಿಲ್ಲೆಯ ಜನತೆ ಡಿಸಿ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಭೀಮಾ ನದಿಗೆ ಸದ್ಯ ಒಂದು ಲಕ್ಷ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ, 3 ರಿಂದ 4 ಲಕ್ಷ ನೀರು ಬಂದರೆ ತೊಂದರೆಯಾಗುತ್ತದೆ. ಈಗಾಗಲೇ ಸಂಬಂಧಪಟ್ಟ ತಹಶೀಲ್ದಾರರ ಸಭೆ ನಡೆಸಲಾಗಿದೆ. ನದಿ ತೀರದ ಗ್ರಾಮಗಳಲ್ಲಿ ಅಲರ್ಟ್ ಘೋಷಣೆ ಮಾಡಲಾಗಿದೆ. ಭೀಮಾ ನದಿ ತೀರದ ಜನರು ಜಿಲ್ಲಾಡಳಿತಕ್ಕೆ ಸಹಕಾರ ನೀಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಕೊಚ್ಚಿಹೋದ ಸೇತುವೆಗೆ ಡಿಸಿ, ಎಸ್ಪಿ ಭೇಟಿ, ಶೀಘ್ರ ದುರಸ್ತಿಗೆ ಆದೇಶ

ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಭಾರಿ ಮಳೆಯಾಗಿದೆ, ನಾಯ್ಕಲ್ ಸೇರಿದಂತೆ ಹಲವಾರು ಗ್ರಾಮದ ಮನೆಗಳಿಗೆ ಹಾನಿಯಾಗಿದೆ, ಯಡ್ಡಳ್ಳಿ ಸೇತುವೆ ಕೊಚ್ಚಿ ಹೋಗಿದೆ, ಈ ಬಗ್ಗೆ ಶೀಘ್ರ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ, ಕಾಳಜೀ ಕೇಂದ್ರಗಳನ್ನು ಓಪನ್ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹಿಂದೂ ದೇವಸ್ಥಾನ ಟಾರ್ಗೆಟ್ ಮಾಡಿ ಧ್ವಂಸ ಮಾಡಲಾಗುತ್ತಿದೆ: ಪ್ರತಾಪ್ ಸಿಂಹ

Source: publictv.in Source link