ಚರ್ಚ್​​, ಮಸೀದಿ ಬಿಟ್ಟು ಹಿಂದೂ ದೇವಾಲಯಗಳ ಟಾರ್ಗೆಟ್​ ಮಾತ್ರ ಯಾಕೆ?- ಪ್ರತಾಪ್​​ ಸಿಂಹ

ಚರ್ಚ್​​, ಮಸೀದಿ ಬಿಟ್ಟು ಹಿಂದೂ ದೇವಾಲಯಗಳ ಟಾರ್ಗೆಟ್​ ಮಾತ್ರ ಯಾಕೆ?- ಪ್ರತಾಪ್​​ ಸಿಂಹ

ಮೈಸೂರು: ಹುಚ್ಚಗಣಿ ದೇವಾಲಯ ನೆಲಸಮ ಮಾಡಿದ ಮೈಸೂರು ಮಹಾನಗರ ಪಾಲಿಕೆ ವಿರುದ್ಧ ಸಂಸದ ಪ್ರತಾಪ್​​ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇದೇ ತಿಂಗಳು 22ನೇ ತಾರೀಕು ಗಣಪತಿ ದೇವಾಲಯ ತೆರವು ಮಾಡುವುದಾಗಿ ನೋಟಿಸ್​​ ನೀಡಿರುವ ಪಾಲಿಕೆಗೆ ತರಾಟೆ ತೆಗೆದುಕೊಂಡಿದ್ದಾರೆ.

ಇನ್ನು, ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಪ್ರತಾಪ್​ ಸಿಂಹ, 10 ಗಣಪತಿ ದೇಗುಲಕ್ಕೆ ಹಲವು ವರ್ಷಗಳ ಇತಿಹಾಸವಿದೆ. ಇತಿಹಾಸ ಪರಿಗಣಿಸದೆ ನೆಲಸಮ ಮಾಡಿದ್ರೆ ನೋವಾಗುತ್ತೆ. ಜನರ ಭಾವನೆಗಳಿಗೆ ಧಕ್ಕೆಯಾದ್ರೆ ಪ್ರತಿರೋಧ ವ್ಯಕ್ತವಾಗುತ್ತೆ ಎಂದಿದ್ದಾರೆ.

ಕೇವಲ ಹಿಂದೂ ದೇವಾಲಯಗಳನ್ನ ಮಾತ್ರ ಏಕೆ ತೆರವು ಮಾಡ್ತೀರಾ? ಯಾಕೆ ಚರ್ಚ್, ಮಸೀದಿ ನಿಮ್ಮ ಕಣ್ಣಿಗೆ ಕಾಣಲ್ವ ಎಂದು ಗರಂ ಆಗಿದ್ದಾರೆ.

ನಮ್ಮ ಹಿಂದೂ ದೇವಾಲಗಳನ್ನ ಟಾರ್ಗೆಟ್ ಮಾಡ್ತಿರಾ? ಮಧ್ಯರಾತ್ರಿಯಲ್ಲಿ ಕಳ್ಳರ ರೀತಿ ಬಂದು ದೇಗುಲ ಕೆಡವ್ತಿದ್ದೀರಾ. ಮಾತೆತ್ತಿದ್ರೆ ಸುಪ್ರೀಂಕೋರ್ಟ್​ ಆದೇಶ ಅಂತೀರಾ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ:ಮನೆಗೆ ನುಗ್ಗಿ ಮಹಿಳೆಯನ್ನು ಎಳೆದಾಡಿದ ಮಾಜಿ ಜೆಡಿಎಸ್​​ ಕಾರ್ಪೊರೇಟರ್​; ಕೇಸ್​​ ದಾಖಲು​

Source: newsfirstlive.com Source link