ಅಬ್ಬಬ್ಬಾ! ಮೇಘನಾ ರಾಜ್​​ಗೆ ಚಿರು ಸರ್ಜಾ ಕೊಡಿಸಿದ್ದ ಕಾಫಿ ರೇಟ್ ಎಷ್ಟು ಗೊತ್ತಾ?

ಅಬ್ಬಬ್ಬಾ! ಮೇಘನಾ ರಾಜ್​​ಗೆ ಚಿರು ಸರ್ಜಾ ಕೊಡಿಸಿದ್ದ ಕಾಫಿ ರೇಟ್ ಎಷ್ಟು ಗೊತ್ತಾ?

ಸ್ಯಾಂಡಲ್​ವುಡ್​ ನಟಿ ಮೇಘನಾ ರಾಜ್​ ಸರ್ಜಾ ಸುಮಾರು ಎರಡು ವರ್ಷಗಳ ಬಳಿಕ ಮೊದಲ ಬಾರಿಗೆ ನ್ಯೂಸ್​ಫಸ್ಟ್​ನ ವಿಶೇಷ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಈ ವೇಳೆ ಮಾತನಾಡುವಾಗ ಚಿರು, ಮೇಘನಾ ಯುರೋಪ್​ ಟ್ರಿಪ್ ಹೋದಾಗ ನಡೆದ ಒಂದು ಘಟನೆಯನ್ನ ನೆನೆದಿದ್ದಾರೆ.

ಹೌದು, ಮೇಘನಾ ಬಹಳ ಕಾಫಿ ಪ್ರಿಯೆ. ಹೀಗಾಗಿ ಯುರೋಪ್​ನಲ್ಲಿ ಒಂದು ದಿನ ಮೇಘನಾಗೆ ಕಾಫಿ ಬೇಕೆಂದು ಚಿರುನ ಕೇಳಿದ್ರಂತೆ. ಆಗ ಚಿರು ಮೇಘನಾರನ್ನ ಒಂದು ಕಾಫಿ ಕೆಫೆಗೆ ಕರೆದುಕೊಂಡು ಹೋಗಿ ತೆಗೆದುಕೊಟ್ಟಿದ್ರಂತೆ. ಯುರೋಪ್​ ಟ್ರಿಪ್​ ಮುಗಿಸಿ ಬೆಂಗಳೂರಿಗೆ ಬಂದ ನಂತರ ಚಿರು ನೀನು ಮೊನ್ನೆ ಯುರೋಪ್​ನಲ್ಲಿ ಕುಡಿದ ಕಾಫಿ ಬೆಲೆ 11000 ಅಂದಿದ್ರಂತೆ.

ಇದನ್ನೂ ಓದಿ: ‘ನನಗೆ ದುರಾಸೆ ಜಾಸ್ತಿ’ ಹೀಗ್ಯಾಕಂದ್ರು ಮೇಘನಾ ರಾಜ್ ಸರ್ಜಾ

ನನಗೆ ಆ ಕಾಫಿ ಬೇಕು ಅಂದ್ರೆ ಅದಕ್ಕೆ ಒಂದು ಕೋಟಿ ಆದ್ರು ಚಿರು ಸಾಲ ಮಾಡಿ ತಂದುಕೊಂಡೋರು ಎಂದು ಮೇಘನಾ ಹೇಳಿದ್ದಾರೆ. ಮೇಘನಾಗೆ ಇದು ಬೇಕು ಅಂದ್ರೆ ನನ್ನಿಂದ ಅದು ಆಗುತ್ತಾ ಇಲ್ಲವಾ ಎಂದು ಯೊಚನೇ ಮಾಡುತ್ತಾ ಇರಲಿಲ್ಲವಂತೆ. ಮೇಘನಾಗೆ ಏನ್ನಾದರು ಬೇಕಾದ್ರೆ ಅದು ರೆಡಿ ಇರಲೆಬೇಕು ಅಂತಿದ್ರಂತೆ ಚಿರು.

Source: newsfirstlive.com Source link