ಫ್ಯಾಮಿಲಿ ಜೊತೆ ಅರಣ್ಯ ಸಫಾರಿಗೆ ಟ್ರಿಪ್​​​ ಹೋದ ಗೋಲ್ಡನ್​ ಸ್ಟಾರ್​ ಗಣೇಶ್

ಫ್ಯಾಮಿಲಿ ಜೊತೆ ಅರಣ್ಯ ಸಫಾರಿಗೆ ಟ್ರಿಪ್​​​ ಹೋದ ಗೋಲ್ಡನ್​ ಸ್ಟಾರ್​ ಗಣೇಶ್

ಸ್ಯಾಂಡಲ್​ವುಡ್​ನ ಮಳೆ ಹುಡುಗ, ಗೋಲ್ಡನ್​ ಸ್ಟಾರ್​ ಗಣೇಶ್​ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಫುಲ್​ ಬ್ಯುಸಿಯಾಗಿದ್ದಾರೆ. ಇದರ ನಡುವೆಯು ಗಣೇಶ್​ ಕಬಿನಿ ಉದ್ಯಾನ ವನ್ಯಜೀವಿ ತಾಣಕ್ಕೆ ಫ್ಯಾಮಿಲಿ ಜೊತೆ ಟ್ರಿಪ್​ ಹೋಗಿದ್ದಾರೆ.

ಹೌದು, ಗಣಿ ಕಬಿನಿ ಉದ್ಯಾನ ವನ್ಯಜೀವಿ ತಾಣದಲ್ಲಿ ತಮ್ಮ ಫ್ಯಾಮಿಲಿ ಜೊತೆ ಅರಣ್ಯ ಸಫಾರಿಗೆ ಹೋಗಿದ್ದಾರೆ. ಇನ್ನು ಈ ವೇಳೆ ಗಣಿ ಚಿರತೆಯೊಂದು ಓಡಾಡುವ ದೃಶ್ಯವನ್ನು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿಯುವ ವಿಡಿಯೋವನ್ನು ಗಣಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಈ ವಿಡಿಯೋದಲ್ಲಿ ಗಣಿ ಪುತ್ರ ವಿಹಾನ್​ ಕೂಡ ಅಪ್ಪನ ಜೊತೆ ಚಿರತೆಯನ್ನು ನೋಡುತ್ತಿದ್ದಾನೆ. ಸದ್ಯ ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

blank

ಇನ್ನು ಗಣೇಶ್​ ಸಖತ್​, ತ್ರಿಬಲ್​ ರೈಡಿಂಗ್​, ರಗಡ್​ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿಯಿದ್ದು ,ಸದ್ಯದಲ್ಲೆ ಜೀ ವಾಹಿನಿಯಲ್ಲಿ ಮೂಡಿ ಬರುತ್ತಿರುವ ರಿಯಾಲಿಟಿ ಶೋವೊಂದನ್ನು ನಿರೂಪಣೆ ಮಾಡಲಿದ್ದಾರೆ.

ಇದನ್ನೂ ಓದಿ:ಬಾಯ್​​ ಫ್ರೆಂಡ್​​ಗೆ ಕಿಸ್​​ ಕೊಟ್ಟ ನ್ಯಾಷನಲ್​​​​ ಕ್ರಶ್​​​ ರಶ್ಮಿಕಾ ಮಂದಣ್ಣ..

 

Source: newsfirstlive.com Source link