ಶಾಸಕನನ್ನು ರಾಜನಂತೆ ಮೆರೆಸಿದ್ದ ಪೊಲೀಸರ ವಿರುದ್ಧ ಕ್ರಮಕ್ಕೆ ಮುಂದಾಗ ಇಲಾಖೆ; ಜನ ಆಕ್ರೋಶ

ಶಾಸಕನನ್ನು ರಾಜನಂತೆ ಮೆರೆಸಿದ್ದ ಪೊಲೀಸರ ವಿರುದ್ಧ ಕ್ರಮಕ್ಕೆ ಮುಂದಾಗ ಇಲಾಖೆ; ಜನ ಆಕ್ರೋಶ

ಬೆಳಗಾವಿ: ಜಿಲ್ಲೆಯ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಹಾಗೂ ಪತ್ನಿಗೆ ಹೂಮಳೆಗೈದ ಪ್ರಕರಣಕ್ಕೆ ಸಂಬಧಿಸಿ ಇಲಾಖೆಗೆ ಮುಜುಗರವನ್ನುಂಟು ಮಾಡಿದ ಅಧಿಕಾರಿಗಳ ವಿರುದ್ಧ ಇನ್ನೂ ಕ್ರಮ ಕೈಗೊಂಡಿಲ್ಲ ಎಂಬ ಕೂಗು ಕೇಳಿ ಬಂದಿದೆ.

ಇಲಾಖೆಗೆ ಮುಜುಗರವನ್ನುಂಟು ಮಾಡಿದ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಿ ಕೈ ತೊಳೆದುಕೊಂಡ ಹಿರಿಯ ಪೋಲಿಸ್ ಅಧಿಕಾರಿಗಳು, ಪ್ರಕರಣ ನಡೆದು 8 ದಿನಗಳು ಗತಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಪ್ರಕರಣ ಮುಚ್ಚಿಹಾಕಲು ಒಳಗೊಳಗೆ ಕಸರತ್ತು ನಡೆಲಾಗಿದೆಯಾ ಎಂಬ ಸಂಶಯ ವ್ಯಕ್ತವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ:ಶಾಸಕ ಮಹಾಂತೇಶ ದೊಡ್ದಗೌಡರ ದಂಪತಿಗೆ ಹೂ ಮಳೆ: ಪೊಲೀಸರಿಗೆ ಶೋಕಾಸ್ ನೋಟಿಸ್ ಜಾರಿ

ಸೆಪ್ಟೆಂಬರ್​ 4 ರಂದು ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಬರ್ತಡೇ ನಿಮಿತ್ತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪೊಲೀಸ್​ ಅಧಿಕಾರಿಗಳು, ಶಾಸಕ ಹಾಗೂ ಪತ್ನಿಗೆ ಪುಷ್ಪವೃಷ್ಠಿ ಮಾಡಿದ್ದರು. ಈ ಕುರಿತು ಸಾರ್ವಜನಿಕವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಇದನ್ನೂ ಓದಿ: ಕಿತ್ತೂರು ಶಾಸಕನನ್ನ ಮಹಾರಾಜನಂತೆ ಮೆರೆಸಿದ ಪೊಲೀಸ್ ಅಧಿಕಾರಿಗಳು

Source: newsfirstlive.com Source link