‘ಕಾಂಗ್ರೆಸ್​ ಬಿಟ್ಟು ಬರಲು ಹಣ ಆಫರ್​​ ಮಾಡಿದ್ರು’ ಎಂದ ಶ್ರೀಮಂತ ಪಾಟೀಲ್​;​​​ ಬಿಜೆಪಿಗರ ಆಕ್ರೋಶ

‘ಕಾಂಗ್ರೆಸ್​ ಬಿಟ್ಟು ಬರಲು ಹಣ ಆಫರ್​​ ಮಾಡಿದ್ರು’ ಎಂದ ಶ್ರೀಮಂತ ಪಾಟೀಲ್​;​​​ ಬಿಜೆಪಿಗರ ಆಕ್ರೋಶ

ಬಿಜೆಪಿಯ ಮಾಜಿ ಸಚಿವ ಮತ್ತು ಶಾಸಕ ಶ್ರೀಮಂತ ಪಾಟೀಲ್ ಹೇಳಿಕೆಯೊಂದು ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ. ಶ್ರೀಮಂತ ಪಾಟೀಲ್ ಹೇಳಿಕೆಗೆ ಕಮಲ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ಬಾರಿ ಮಂತ್ರಿ ಆಗಿದ್ದ ಶಾಸಕ ಪಾಟೀಲ್, ಈ ಬಾರಿ ಮಂತ್ರಿ ಸ್ಥಾನದಿಂದ ವಂಚಿತರಾಗಿದ್ದಾರೆ. ಆ ಕಾರಣಕ್ಕಾಗಿ ತಮ್ಮ ಹಿಂದಿನ ಅನುಭವ ಬಹಿರಂಗಗೊಳಿಸಿದ ಶ್ರೀಮಂತ ಪಾಟೀಲ್ ​ಕಾಂಗ್ರೆಸ್ ಬಿಟ್ಟು ಬರಲು ಕಮಲ ನಾಯಕರು ಹಣದ ಆಫರ್ ನೀಡಿದ್ದರು ಎಂದು ಹೇಳಿದ್ದಾರೆ. ನನಗೆ ಹಣ ಬೇಡ, ಸರ್ಕಾರ ಬಂದಾಗ ಸೂಕ್ತ ಸ್ಥಾನಮಾನ ನೀಡುವಂತೆ ಮನವಿ ಮಾಡಿದ್ದೆ ಎಂದಿದ್ದಾರೆ. ಈ ಕುರಿತ ಬಹಿರಂಗ ಹೇಳಿಕೆಗೆ ಕಮಲ ಪಾಳಯದಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ಇಷ್ಟು ದಿನ ಸುಮ್ಮನಿದ್ದು ಈಗ ಹಣದ ವಿಚಾರ ಪ್ರಸ್ತಾಪ ಮಾಡಿದ್ದು ಎಷ್ಟು ಸರಿ? ಎನ್ನುತ್ತಿದ್ದಾರೆ ಕೇಸರಿ ನಾಯಕರು.

ಇದನ್ನೂ ಓದಿ: ಮಹತ್ವದ ಬೆಳವಣಿಗೆ; ತಡರಾತ್ರಿ ‘ಬಿಎಸ್​​ವೈ’ರನ್ನು ಕಟೀಲ್​​ ದಿಢೀರ್​​ ಭೇಟಿಯಾಗಿದ್ಯಾಕೆ?

ತಾವೂ ಕೂಡ ಈಗ ಪಕ್ಷದ ಶಾಸಕರು ಎಂಬುದನ್ನ ಮರೆಯಬಾರದು. ವಿಧಾನ ಮಂಡಲ ಅಧಿವೇಶನ ಕೂಡ ಶುರು ಆಗ್ತಿದೆ. ಇಂಥ ಸಂದರ್ಭದಲ್ಲಿ ಈ ರೀತಿಯ ಹೇಳಿಕೆ ಶೋಭೆ ಅಲ್ಲ. ಅಧಿಕಾರ ಇದ್ದಾಗ, ಇಲ್ಲದಾಗ ತಮ್ಮ ವರ್ತನೆ ಒಂದೇ ತರ ಇರಬೇಕು, ಈ ತರಹದ ಮುಜುಗರದ ಹೇಳಿಕೆ ಎಷ್ಟು ಸಮಂಜಸ? ಪಾಟೀಲ್ ಈಗ ಪಕ್ಷದಲ್ಲಿ ನೆಲೆಸಿಗರಾಗಿದ್ದಾರೆ, ವಲಸಿಗರ ರೀತಿಯ ಹೇಳಿಕೆ ಯಾರಿಗೂ ಶೋಭೆ ತಂದುಕೊಡಲ್ಲ ಎಂದು ರಾಜ್ಯ ಕಮಲ ನಾಯಕರು ಬೇಸರ ವ್ಯಕ್ತ ಪಡಿಸಿದ್ದಾರೆ.

ಇದನ್ನೂ ಓದಿ: ಬಾಲಿವುಡ್​​ ನಟಿ ಸನ್ನಿ ಲಿಯೋನ್​​ ಮನೆಯಲ್ಲಿ ಗಣೇಶ ಹಬ್ಬದ ಸಂಭ್ರಮ

Source: newsfirstlive.com Source link