ಸರ್ಕಾರಿ ಆಸ್ಪತ್ರೆಯಲ್ಲಿ ಬೀದಿ ಶ್ವಾನಗಳ ಹಾವಳಿ – ರೋಗಿಗಳಲ್ಲಿ ಆತಂಕ

ಬೆಂಗಳೂರು/ನೆಲಮಂಗಲ: ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯೊಂದರಲ್ಲಿ ಬೀದಿ ಶ್ವಾನಗಳ ಹಾವಳಿಯಿಂದಾಗಿ ರೋಗಿಗಳು ಹಾಗೂ ಸಾರ್ವಜನಿಕರು ಆತಂಕಗೊಂಡಿದ್ದಾರೆ.

ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಈ ಅವ್ಯವಸ್ಥೆ ಕಂಡುಬಂದಿದೆ. ಈ ಆಸ್ಪತ್ರೆಯಲ್ಲಿ ಬೀದಿ ಶ್ವಾನಗಳ ಉಪಟಳ ತಾಳಲಾರದೇ ರೋಗಿಗಳು ತಮ್ಮ ಮೊಬೈಲ್ ಫೋನ್ ಮೂಲಕ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಇನ್ನೂ ಬೀದಿಯ ಶ್ವಾನಗಳು ಆಸ್ಪತ್ರೆಯಲ್ಲಿ ರೋಗಿಗಳು ಬಳಸುವ ಬೆಡ್ ಗಳ ಮೇಲೆ ಬಂದು ಮಲಗಿ, ಗಲೀಜು ಮಾಡಿರುವುದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ.  ಇದನ್ನೂ ಓದಿ: ಫಸಲಿಗೆ ಬಂದಿದ್ದ 700 ಅಡಿಕೆ ಮರ ಕಡಿದು ಹಾಕಿದ ದುಷ್ಕರ್ಮಿಗಳು

hospital dog

ಈ ಶ್ವಾನಗಳು ಆಸ್ಪತ್ರೆಯಲ್ಲಿ ಬರುವ ಪುಟಾಣಿ ಮಕ್ಕಳು, ಮಹಿಳೆಯರು ಹಾಗೂ ವೃದ್ಧರ ಮೇಲೆ ದಾಳಿ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಕೂಡಲೇ ಆಸ್ಪತ್ರೆಯ ಆಡಳಿತ ಮಂಡಳಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಹಾಗೂ ಬೀದಿ ಶ್ವಾನಗಳಿಗೆ ಬ್ರೇಕ್ ಹಾಕುವಂತೆ ಮನವಿ ಮಾಡಿದ್ದಾರೆ.  ಇದನ್ನೂ ಓದಿ: ಹೆಣ್ಣು ಬಳೆ ತೊಟ್ಟಿದ್ದಾಳೆ ಅಂದರೆ ಅಬಲೆ ಅಂತಾನಾ? – ತನ್ವೀರ್ ಸೇಠ್ ವಿರುದ್ಧ ಪ್ರತಾಪ್ ಸಿಂಹ ಕಿಡಿ

Source: publictv.in Source link