ರಸ್ತೆ ಡಿವೈಡರ್​​​​​ಗೆ ಡಿಕ್ಕಿ ಹೊಡೆದು ಭೀಕರ ಕಾರು ಅಪಘಾತ; ಇಬ್ಬರು ದುರ್ಮರಣ

ರಸ್ತೆ ಡಿವೈಡರ್​​​​​ಗೆ ಡಿಕ್ಕಿ ಹೊಡೆದು ಭೀಕರ ಕಾರು ಅಪಘಾತ; ಇಬ್ಬರು ದುರ್ಮರಣ

ಚಿಕ್ಕೋಡಿ: ರಸ್ತೆ ಡಿವೈಡರ್​​​ಗೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಕಾರು ಅಪಘಾತ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪೂರ ಕ್ರಾಸ್ ಬಳಿ ಸಂಭವಿಸಿದ ಈ ಭೀಕರ ಕಾರು ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಅಲ್ಲದೇ ಓರ್ವನ ಸ್ಥಿತಿ ಗಂಭೀರವಾಗಿದೆ.

ಧಾರವಾಡದಿಂದ ಅಥಣಿಗೆ ಆಗಮಿಸುವ ಮೇಲೆ ರಸ್ತೆ ಮಧ್ಯದಲ್ಲಿ ಈ ಅಪಘಾತ ಸಂಭವಿಸಿದೆ. ಇನ್ನು, ಮೃತರನ್ನು ವಿನಾಯಕ‌ ಚಿದಾನಂದ ಕಾವೇರಿ (22) ಮುತ್ತು ಮಾಳಿ (22) ಎಂದು ಗುರುತಿಸಲಾಗಿದೆ. ಈರಯ್ಯ ಹಿರೇಮಠ (22) ಸ್ಥಿತಿ ಗಂಭೀರವಾಗಿದ್ದು, ಹಾರೂಗೇರಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಹಾರೋಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಅಬ್ಬಬ್ಬಾ! ಮೇಘನಾ ರಾಜ್​​ಗೆ ಚಿರು ಸರ್ಜಾ ಕೊಡಿಸಿದ್ದ ಕಾಫಿ ರೇಟ್ ಎಷ್ಟು ಗೊತ್ತಾ?

Source: newsfirstlive.com Source link