ನಿಷೇಧದ ನಡುವೆಯೂ ಗಡಿಭಾಗದಲ್ಲಿ ಮಹಾರಾಷ್ಟ್ರದ ವ್ಯಕ್ತಿಯಿಂದ ವಾಮಾಚಾರ

ನಿಷೇಧದ ನಡುವೆಯೂ ಗಡಿಭಾಗದಲ್ಲಿ ಮಹಾರಾಷ್ಟ್ರದ ವ್ಯಕ್ತಿಯಿಂದ ವಾಮಾಚಾರ

ಚಿಕ್ಕೋಡಿ: ರಾಜ್ಯದಲ್ಲಿ ಮೌಢ್ಯ ನಿಷೇಧವಿದ್ದರೂ ಮಹಾರಾಷ್ಟ್ರದ ತಾಂತ್ರಿಕನೋರ್ವ ಗಡಿಭಾಗದಲ್ಲಿ ಹಾಡಹಗಲೇ ವಾಮಾಚಾರ ನಡೆಸಿರುವ ಘಟನೆ ನಡೆದಿದೆ.

ಮಹಾರಾಷ್ಟ್ರದ ತಾಂತ್ರಿಕ ಮನಬಂದಂತೆ ಕುಣಿದು, ಹಳದಿ ಭಂಡಾರ ಚೆಲ್ಲಿ, ನಿಂಬೆಹಣ್ಣು ಎಸೆದು ವಾಮಾಚಾರ ನಡೆಸಿದ್ದಾನೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ‌ ಕೃಷ್ಣಾ ಕಿತ್ತೂರು ಗ್ರಾಮದಲ್ಲಿ ಘಟನೆ ನಡೆದಿದೆ.
ಶನಿವಾರ ಮಧ್ಯಾಹ್ನ ಅಶೋಕ ರಾಮ ಕಾಕನಕಿ ಎಂಬುವರಿಂದ ಅಣ್ಣಪ್ಪ ಕಾಕನಕಿ ಎಂಬುವರ ಮನೆ ಮುಂದೆ ವಾಮಾಚಾರ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಮಹಾರಾಷ್ಟ್ರದಿಂದ ತಾಂತ್ರಿಕನನ್ನು ಕರೆಯಿಸಿ ವಾಮಾಚಾರ ಮಾಡಲಾಗುತ್ತಿದೆ ಎನ್ನಲಾಗಿದೆ.

ವಾಮಾಚಾರ ಮಾಡುವದನ್ನ ಪ್ರಶ್ನಿಸಿದ್ದಕ್ಕೆ ಅಶೋಕ ಕಾಕನಕಿ‌ ಕುಟುಂಬ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಅಲ್ಲದೇ ಅಣ್ಣಪ್ಪ ಕಾಕನಕಿ‌ ಅಳಿಯ ಪುಂಡಲಿಕ ಭೋಗಿ ವಿಡಿಯೋ ಮಾಡುವಾಗ ಅಶೋಕ‌ ಕಾಕನಕಿ ಅವರಿಂದ ಹಲ್ಲೆಗೆ ಯತ್ನ ನಡೆದಿದೆ ಎಂದು ಹೇಳಲಾಗಿದೆ. ಕಾಗವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Source: newsfirstlive.com Source link