ದೇವಸ್ಥಾನ ನೆಲಸಮ ಮಾಡಲು ಜೆಸಿಬಿ ತಂದ್ರೆ ನಾನು ಹೋಗಿ ತಲೆಕೊಡಬೇಕಿತ್ತಾ..? ಎಂದ ಬಿಜೆಪಿ ಶಾಸಕ

ದೇವಸ್ಥಾನ ನೆಲಸಮ ಮಾಡಲು ಜೆಸಿಬಿ ತಂದ್ರೆ ನಾನು ಹೋಗಿ ತಲೆಕೊಡಬೇಕಿತ್ತಾ..? ಎಂದ ಬಿಜೆಪಿ ಶಾಸಕ

ಮೈಸೂರು: ನಂಜನಗೂಡು ದೇವಸ್ಥಾನ ನೆಲಸಮ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಶಾಸಕ ಹರ್ಷವರ್ಧನ್.. ಅಧಿಕಾರಿಗಳು ಜೆಸಿಬಿ ತಂದ್ರೆ ನಾನು ಹೋಗಿ ತಲೆಕೊಡಬೇಕಿತ್ತಾ..? ಈ ವಿಚಾರದಲ್ಲಿ ನಾನು ತುಂಬಾ‌ ಅಸಹಾಯಕ ಎಂದಿದ್ದಾರೆ.

ಇದನ್ನೂ ಓದಿ: ಚರ್ಚ್​​, ಮಸೀದಿ ಬಿಟ್ಟು ಹಿಂದೂ ದೇವಾಲಯಗಳ ಟಾರ್ಗೆಟ್​ ಮಾತ್ರ ಯಾಕೆ?- ಪ್ರತಾಪ್​​ ಸಿಂಹ

ನ್ಯೂಸ್‌ಫಸ್ಟ್‌ ಜೊತೆಗೆ ಮಾತನಾಡಿದ ನಂಜನಗೂಡು ಬಿಜೆಪಿ ಶಾಸಕ ಹರ್ಷವರ್ಧನ್.. ಸುಪ್ರಿಂಕೋರ್ಟ್ ಆದೇಶ ನಮ್ಮಂಥ ಜನಪ್ರತಿನಿಧಿಗಳನ್ನ ಅಸಹಾಯಕರನ್ನಾಗಿ ಮಾಡಿದೆ. ನಾನು ದೇವಾಲಯ ತೆರವಿಗೂ ಮುನ್ನ ಗ್ರಾಮಸ್ಥರ ಮನವೊಲಿಸಿ ಅಂತ ಹೇಳಿದ್ದೆ. ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಸಭೆ ಕರೆದು ಚರ್ಚೆ ಮಾಡಬೇಕಿತ್ತು‌. ಹುಣಸೂರು ಪಿರಿಯಾಪಟ್ಟಣ ತಿ.ನರಸೀಪುರದಲ್ಲೂ ದೇವಾಲಯಗಳನ್ನ ತೆರವು ಮಾಡಲಾಗಿದೆ. ಸಂಸದ ಪ್ರತಾಪ್‌ಸಿಂಹ ನನ್ನ ಕ್ಷೇತ್ರದ ವಿಡಿಯೋ ಮಾತ್ರ ಏಕೆ ಅಪ್‌ಲೋಡ್ ಮಾಡಿದ್ರು..? ಪ್ರತಾಪ್‌ಸಿಂಹಗೆ ಮಾಹಿತಿ ಕೊರತೆಯಿಂದ ಏನೇನೋ ಮಾತನಾಡ್ತಾರೆ ಎಂದಿದ್ದಾರೆ.

ಇದನ್ನೂ ಓದಿ: ನಂಜನಗೂಡು ದೇವಸ್ಥಾನ ನೆಲಸಮ: ಕೆರಳಿ ಕೆಂಡವಾದ ಸಿದ್ದರಾಮಯ್ಯ ಹೇಳಿದ್ದೇನು..?

ಸಿದ್ದರಾಮಯ್ಯನವರ ಟ್ವೀಟ್ ನೋಡಿ ನನಗೆ ತುಂಬಾ ಬೇಸರ ಆಯಿತು. ಅವರು ಸಿಎಂ ಆಗಿದ್ದಾಗ ತಮಿಳುನಾಡಿಗೆ ಒಂದೇ ಒಂದು ಹನಿ ನೀರು ಬಿಡಲ್ಲ ಅಂದ್ರು.. ಸುಪ್ರೀಂ ಆದೇಶ ಮಾಡುತ್ತಿದ್ದಂತೆ ನೀರು ಬಿಡಲಿಲ್ವೇ. ಇಂತಹ ಸಂದಿಗ್ಧ ಪರಿಸ್ಥಿತಿಯಿಂದ ಪಾರಾಗಲು ಕಾನೂನು ರೂಪಿಸುವಂತೆ ಶಾಸಕಾಂಗ ಸಭೆಯಲ್ಲಿ ಸಿಎಂಗೆ ಮನವಿ ಮಾಡುತ್ತೇನೆ ಎಂದಿದ್ದಾನೆ.

ಇದನ್ನೂ ಓದಿ: ದೇವಸ್ಥಾನ ನೆಲಸಮ: ಜಿಲ್ಲಾಡಳಿತದ ವಿರುದ್ಧ ಗರಂ ಆದ ವಿಶ್ವ ಹಿಂದೂ ಪರಿಷತ್​ನಿಂದ ಪ್ರತಿಭಟನೆ

Source: newsfirstlive.com Source link