ಮಣ್ಣ ಗಣಪನ ಹೊಟ್ಟೆಗೆ ಸುತ್ತಿಕೊಂಡ ಜೀವಂತ ಹಾವು.. ಕಣ್ತುಂಬಿಕೊಳ್ಳಲು ಮುಗಿಬಿದ್ದ ಜನಸಾಗರ

ಮಣ್ಣ ಗಣಪನ ಹೊಟ್ಟೆಗೆ ಸುತ್ತಿಕೊಂಡ ಜೀವಂತ ಹಾವು.. ಕಣ್ತುಂಬಿಕೊಳ್ಳಲು ಮುಗಿಬಿದ್ದ ಜನಸಾಗರ

ದಾವಣಗೆರೆ: ತಾಲೂಕಿನ ಕೈದಾಳೆ ಗ್ರಾಮದಲ್ಲಿ ಮಣ್ಣಿ ಗಣೇಶನ ಹೊಟ್ಟೆಗೆ ಜೀವಂತ ನಾಗರಹಾವು ಸುತ್ತಿಕೊಂಡ ವಿಶೇಷ ಘಟನೆ ನಡೆದಿದೆ.

ಗಣೇಶ ತನ್ನ ಹೊಟ್ಟೆ ಒಡೆದುಕೊಂಡಾಗ ಹೊಟ್ಟೆಗೆ ಹಾವು ಸುತ್ತಿಕೊಂಡ ಎಂದು ಪುರಾಣಗಳು ಹೇಳುತ್ತವೆ. ಅಂತೆಯೇ ದಾವಣಗೆರೆಯಲ್ಲಿ ನಾಗರಹಾವು ಗಣೇಶನ ಹೊಟ್ಟೆಗೆ ಸುತ್ತಿಕೊಂಡು ಅಚ್ಚರಿ ಮೂಡಿಸಿದೆ. ಈ ಅಪರೂಪದ ಘಟನೆಯನ್ನ ತಂಡೋಪತಂಡವಾಗಿ ಬಂದು ಜನರು ಕುತೂಹಲದಿಂದ ವೀಕ್ಷಣೆ ಮಾಡುತ್ತಿದ್ದಾರೆ. ಗಣೇಶನ ಹೊಟ್ಟೆ ಮೇಲೆ ನಾಗರಹಾವು ಹೆಡೆಎತ್ತಿ ಕೂತಿರುವುದನ್ನು ಮೊಬೈಲ್​ನಲ್ಲಿ ಸೆರೆಹಿಡಿಯಲಾಗಿದೆ.

Source: newsfirstlive.com Source link