ಬ್ಯಾಗ್ ಕದಿಯಲು ಬಂದ ಕಳ್ಳನನ್ನ ಹಿಡಿದು ಥಳಿಸಿದ ಮಂಗಳೂರಿನ ಮಹಿಳೆ; ಇದ್ರಲ್ಲಿದೆ ಒಂದು ಟ್ವಿಸ್ಟ್..!

ಬ್ಯಾಗ್ ಕದಿಯಲು ಬಂದ ಕಳ್ಳನನ್ನ ಹಿಡಿದು ಥಳಿಸಿದ ಮಂಗಳೂರಿನ ಮಹಿಳೆ; ಇದ್ರಲ್ಲಿದೆ ಒಂದು ಟ್ವಿಸ್ಟ್..!

ಮಂಗಳೂರು: ನಗರದಲ್ಲಿ ಹಾಡುಹಗಲೇ ಅಪರಿಚಿತರು ಮಹಿಳೆಯ ಬ್ಯಾಗ್ ಕಸಿದು ದರೋಡೆಗೆ ಯತ್ನಿಸಿದ ಘಟನೆ ನಡೆದಿದೆ. ಮಂಗಳೂರಿನ ಸೆಂಟ್ ಆಗ್ನೇಸ್ ಕಾಲೇಜು ಮುಂಭಾಗ ಕಾರಿನಲ್ಲಿ ಬಂದ ಅಪರಿಚಿತರು ಮಹಿಳೆಯ ಬ್ಯಾಗ್ ಕಸಿದು ಪರಾರಿಯಾಗಲು ಯತ್ನಿಸಿದ್ದಾರೆ. ಆದ್ರೆ ಮಹಿಳೆ ಬ್ಯಾಗ್ ಕಸಿಯಲು ಬಿಡದೆ ತನ್ನ ರಕ್ಷಣೆಗೆ ಮುಂದಾಗಿದ್ದಾರೆ. ದರೋಡೆಗೆಂದು ಕಾರಿನಿಂದ ಇಳಿದ ವ್ಯಕ್ತಿಗೆ ಥಳಿಸಿ ಮಹಿಳೆ ಆತ್ಮರಕ್ಷಣೆ ಮಾಡಿಕೊಂಡಿದ್ದಾರೆ.

ಆರೋಪಿ ಮಹಿಳೆಯನ್ನು ಬೀಳಿಸಿ ಬ್ಯಾಗ್ ಕಸಿಯಲು ಯತ್ನಿಸಿದ್ದಾನೆ. ಆದರೆ ಮಹಿಳೆಯ ಪ್ರತಿರೋಧದಿಂದ ಬ್ಯಾಗ್ ಕಸಿಯಲು ಆಗದೆ ಕಾರ್ ಹತ್ತಿ ಪರಾರಿಯಾಗಿದ್ದಾನೆ. ಘಟನೆಯ ದೃಷ್ಯಾವಳಿ ಸಿಸಿಟಿವಿ ಮತ್ತು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇಲ್ಲೇ ಇದೆ ಒಂದು ಟ್ವಿಸ್ಟ್:

ಬಹುಶಃ ಈ ಘಟನೆಯನ್ನ ನೋಡಿದವರು ಮೇಲ್ಕಂಡಂತೆ ಹೇಳೋದ್ರಲ್ಲಿ ಸಂಶಯವಿಲ್ಲ. ಆದ್ರೆ ಇದೊಂದು ಅಣಕು ಪ್ರದರ್ಶನವಾಗಿದ್ದು, ಸಾರ್ವಜನಿಕರ ಜಾಗೃತಿ ಹೀಗೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಪೊಲೀಸ್ ಇಲಾಖೆಯಿಂದಲೇ ಈ ಪ್ರದರ್ಶನ ನಡೆದಿದ್ದು, ಒಂದು ಶಾಕ್ ಕೊಟ್ಟು ವಿಶೇಷ ರೀತಿಯಲ್ಲಿ ಪ್ರದರ್ಶನ ಮಾಡಲಾಗಿದೆ.

 

Source: newsfirstlive.com Source link