ಮತದಾರ ಪ್ರಭುಗಳ ಖುಣ ತೀರಿಸುವ ಕೆಲಸ ಮಾಡುತ್ತೇನೆ: ಮುನಿರತ್ನ

– ನಿಮ್ಮಂತಹ ಮತದಾರ ಪ್ರಭು ಪಡೆದ ನಾನೇ ಭಾಗ್ಯವಂತ

ಬೆಂಗಳೂರು: ಮತದಾರ ಪ್ರಭುಗಳ ಖುಣ ತೀರಿಸುವ ಕೆಲಸ ಮಾಡುತ್ತೇನೆ. ನಿಮ್ಮಂತಹ ಮತದಾರ ಪ್ರಭು ಪಡೆದ ನಾನೇ ಭಾಗ್ಯವಂತ ಎಂದು ತೋಟಗಾರಿಕೆ ಹಾಗೂ ಯೋಜನಾ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರಾದ ಮುನಿರತ್ನ ಅವರು ಹೇಳಿದ್ದಾರೆ.

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ಜಾಲಹಳ್ಳಿ ವಾರ್ಡ್-16ರಲ್ಲಿ ಮುನಿರತ್ನರವರಿಗೆ ಅಭಿನಂದನಾ ಸಮಾರಂಭ ಮತ್ತು ಜಾಲಹಳ್ಳಿ ವಾರ್ಡ್ ಬಿ.ಬಿ.ಎಂ.ಪಿ.ಸದಸ್ಯರಾದ ಶ್ರೀನಿವಾಸ್ ಮೂರ್ತಿ(ಜಾನಿ)ರವರ ಹುಟ್ಟುಹಬ್ಬದ ಅಚರಣೆ ಸಮಾರಂಭ ನಡೆಯಿತ್ತು. ಜಾಲಹಳ್ಳಿ ವಾರ್ಡ್-16ರ ಹೆಚ್.ಎಂ.ಟಿ.ಆಫೀಸರ್ಸ್ ಕ್ಲಬ್ (HMT officers club)ನಲ್ಲಿ ಅಭಿಮಾನಿಗಳು, ಸ್ನೇಹಿತರು ಕಾರ್ಯಕ್ರಮವನ್ನು ಏರ್ಪಡಿಸಿದ್ದರು.

ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿ ನಂತರ ಮುನಿರತ್ನರವರಿಗೆ ಅಭಿನಂದನಾ ಸಮಾರಂಭ ನಂತರ ಶ್ರೀನಿವಾಸ್ ಮೂರ್ತಿ(ಜಾನಿ)ರವರು ಹುಟ್ಟುಹಬ್ದದ ಕೇಕ್ ಕತ್ತರಿಸಿ ಸಿಹಿ ವಿತರಿಸಿದರು. ಜಾಲಹಳ್ಳಿ ವಾರ್ಡ್ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ವೇಲು ನಾಯ್ಕರ್, ಸಚಿವ ಮುನಿರತ್ನ, ಬಿ.ಬಿ.ಎಂ.ಪಿ.ಸದಸ್ಯರಾದ ಶ್ರೀರವರು, ಬಿ.ಜೆ.ಪಿ.ಮುಖಂಡರು ಮತ್ತು ಸ್ಥಳೀಯ ನಾಗರಿಕರು ಪಾಲ್ಗೊಂಡಿದ್ದರು. ಇದನ್ನೂ ಓದಿ: ಆರೋಗ್ಯ ಕವಚ ಸೇವೆಯಡಿ 120 ಅಂಬುಲೆನ್ಸ್ ಸೇರ್ಪಡೆ – ಸಿಎಂ ಲೋಕಾರ್ಪಣೆ

ಇದೇ ಸಂದರ್ಭದಲ್ಲಿ ಸಚಿವರಾದ ಮುನಿರತ್ನರವರು ಮಾತನಾಡಿ ಶಾಸಕನಾಗಿ, ಸಚಿವನಾಗಿ ರಾಜ್ಯ ಸೇವೆ ಮಾಡುವಂತೆ ಆಶೀರ್ವಾದ ಮಾಡಿ ಬೆಂಬಲಿಸಿದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಮತದಾರ ಪ್ರಭುಗಳಿಗೆ ಈ ಕೀರ್ತಿ ಸಲ್ಲುತ್ತದೆ. ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ, ಬೆಂಬಲ ನೀಡುತ್ತಿರುವ ಮತದಾರರ ಖುಣ ತೀರಿಸುವ ಕೆಲಸ ಮಾಡುತ್ತೇನೆ. ಸಾರ್ವಜನಿಕರ ಸಂಕಷ್ಟಗಳಿಗೆ ಸದಾ ಸ್ಪಂದಿಸುವ ಕೆಲಸ ಮಾಡುತ್ತೇನೆ. ನಿಮ್ಮಂತಹ ಮತದಾರ ಪ್ರಭು ಪಡೆದ ನಾನೇ ಭಾಗ್ಯವಂತ. ಪುಣ್ಯವಂತ ಎಂದು ಹೇಳಿದರು. ಇದನ್ನೂ ಓದಿ: ಗಣಪತಿಯ ಕುತ್ತಿಗೆಗೆ ಸುತ್ತಿಕೊಂಡ ನಾಗರ

blank

ಇದೇ ವೇಳೆ ಮಾತನಾಡಿದ ಶ್ರೀನಿವಾಸಮೂರ್ತಿ(ಜಾನಿ) ರವರು ನನ್ನ ರಾಜಕೀಯ ಗುರುಗಳಾದ ಸಚಿವರಾದ ಮುನಿರತ್ನ ರವರ ಮಾರ್ಗದರ್ಶನದಲ್ಲಿ ಕಳೆದ ವರ್ಷದಲ್ಲಿ ಜಾಲಹಳ್ಳಿ ವಾರ್ಡ್ ಅಭಿವೃದ್ಧಿಯತ್ತ ಸಾಗುತ್ತಿದೆ. ಶಿಕ್ಷಣ, ಆರೋಗ್ಯ ಮತ್ತು ಪರಿಸರದ ಬಗ್ಗೆ ಹೆಚ್ಚು ಗಮನಹರಿಸಲಾಗಿದೆ. ಜಾಲಹಳ್ಳಿ ವಾರ್ಡ್ ನಾಗರಿಕರ ಸಹಕಾರ, ಬೆಂಬಲಕ್ಕೆ ಅಭಿನಂದನಾಪೂರ್ವಕ ಧನ್ಯವಾದಗಳು ಹೇಳಿದರು.

Source: publictv.in Source link