ಓವರ್​ಟೇಕ್​ ಮಾಡಲು ಹೋಗಿ ಜೀಪ್​ಗೆ ಗುದ್ದಿದ ಲಾರಿ- ಭೀಕರ ಅಪಘಾತದಲ್ಲಿ 6 ಜನರ ದುರ್ಮರಣ

ಓವರ್​ಟೇಕ್​ ಮಾಡಲು ಹೋಗಿ ಜೀಪ್​ಗೆ ಗುದ್ದಿದ ಲಾರಿ- ಭೀಕರ ಅಪಘಾತದಲ್ಲಿ 6 ಜನರ ದುರ್ಮರಣ

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಮಾಡಿಕೆರೆ ಕ್ರಾಸ್ ಬಳಿ ಲಾರಿ ಹಾಗೂ ಜೀಪ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಸ್ಥಳದಲ್ಲೇ 6 ಮಂದಿ ಸಾವನ್ನಪ್ಪಿದ್ದಾರೆ.

ಮಾಡಿಕೆರೆ ಕ್ರಾಸ್ ಬಳಿಯ ಮರಿನಾಯಕನಹಳ್ಳಿ ಗೇಟ್ ಬಳಿ ದುರ್ಘಟನೆ ಸಂಭವಿಸಿದೆ. ಹಿಂದೆಯಿಂದ ಬರುತ್ತಿದ್ದ ಲಾರಿಯೊಂದು ಓವರ್​ಟೇಕ್​ ಮಾಡಲು ಹೋಗಿ ಜೀಪ್​ಗೆ ಗುದ್ದಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Source: newsfirstlive.com Source link