ಮೀಸಲು ಅರಣ್ಯ ಪ್ರದೇಶಕ್ಕೆ ಸಾಗರೋಪಾದಿಯಲ್ಲಿ ಆಗಮಿಸಿದ ಪ್ರವಾಸಿಗರು: ಗರಂ ಆದ ಸಾರ್ವಜನಿಕರು

ಮೀಸಲು ಅರಣ್ಯ ಪ್ರದೇಶಕ್ಕೆ ಸಾಗರೋಪಾದಿಯಲ್ಲಿ ಆಗಮಿಸಿದ ಪ್ರವಾಸಿಗರು: ಗರಂ ಆದ ಸಾರ್ವಜನಿಕರು

ಚಿಕ್ಕಮಗಳೂರು: ಜಿಲ್ಲೆಯ ಕುದುರೆಮುಖ-ಕಾರ್ಕಳ ಗಡಿ ಭಾಗದ ಮೀಸಲು ಅರಣ್ಯ ಪ್ರದೇಶದಲ್ಲಿ ಕೊರೊನಾ ನಿಯಮಾವಳಿಗಳನ್ನ ಗಾಳಿಗೆ ತೂರಿ, ಪ್ರವಾಸಿಗರು ಸಾಗರೋಪಾದಿಯಲ್ಲಿ ಆಗಮಿಸುತ್ತಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರವೇಶ ನಿಷೇಧದ ನಡುವೆಯೂ ಇರುವೆಗಳಂತೆ ಸಾಲುಗಟ್ಟಿ ಟ್ರೆಕ್ಕಿಂಗ್ ಹೊರಟ ಪ್ರವಾಸಿಗರು, ಮೀಸಲು ಅರಣ್ಯದಲ್ಲಿ ಕೊರೊನಾ ನಿಯಮಗಳನ್ನು ಉಲ್ಲಂಘಿಸಿ ಮೋಜು-ಮಸ್ತಿಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಕಳಸ ತಾಲೂಕಿನ ಕುದುರೆಮುಖ ಅರಣ್ಯದ ತುದಿಯಲ್ಲಿ ಟ್ರೆಕ್ಕಿಂಗ್​ಗೆ ಜಮಾಯಿಸಿದ ಪ್ರವಾಸಿಗರ ನಡೆ ಕುರಿತು ಗರಂ ಆದ ಸ್ಥಳೀಯರು ಇವರಿಗೆ ಅನುಮತಿ ನೀಡಿದವರ್ಯಾರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಮನೆ ಮುಂದೆ ಬೈಕ್​ ನಿಲ್ಲಿಸೋರೆ ಹುಷಾರ್.. ಕ್ಷಣಾರ್ಧದಲ್ಲಿ ಮಾಯವಾಗುತ್ತೆ ಬೈಕ್​ನಲ್ಲಿದ್ದ ಪೆಟ್ರೋಲ್​

ಇದನ್ನೂ ಓದಿ: ಮಕ್ಕಳು ಕೂರಿಸಿದ್ದ ಗಣಪತಿ ಮೂರ್ತಿಯನ್ನೇ ಕದ್ದೊಯ್ದ ಖತರ್ನಾಕ್​ ಕಳ್ಳರು..!

Source: newsfirstlive.com Source link