ಟಿ20 ವಿಶ್ವಕಪ್‍ಗೆ ಅಚ್ಚರಿಯ ಆಯ್ಕೆಗೊಂಡ ಆಟಗಾರರಿವರು

ದುಬೈ: ಟಿ20 ವಿಶ್ವಕಪ್‍ಗಾಗಿ ಪ್ರತಿ ದೇಶದ ತಂಡಗಳು ಕೂಡ ತಯಾರಿಯಲ್ಲಿ ತೊಡಗಿಕೊಂಡಿದೆ. ಈಗಾಗಲೇ ಟೂರ್ನಿಗೆ ಪ್ರತಿ ದೇಶದ ತಂಡಗಳಿಗೆ ಆಟಗಾರರನ್ನು ಆಯ್ಕೆ ಮಾಡಿ ಪಟ್ಟಿ ಬಿಡುಗಡೆಗೊಳಿಸಲಾಗಿದೆ. ಈ ಪಟ್ಟಿಯಲ್ಲಿ ಕೆಲ ಆಟಗಾರರ ಆಯ್ಕೆ ಅಚ್ಚರಿ ಮೂಡಿಸುತ್ತಿದೆ.

ಪ್ರತಿ ದೇಶಗಳು ಕೂಡ 15 ಸದಸ್ಯರ ತಂಡವನ್ನು ದುಬೈಗೆ ಕಳುಹಿಸಿಕೊಡಲು ತಂಡವನ್ನು ಆಯ್ಕೆ ಮಾಡಿದೆ. ಈ ನಡುವೆ ಕೆಲ ದೇಶಗಳ ಹಿರಿಯ ಆಟಗಾರರು ಮತ್ತು ಕಳಪೆ ಫಾರ್ಮ್‍ನಲ್ಲಿರುವವರು ಕೂಡ ತಂಡದಲ್ಲಿ ಸ್ಥಾನ ಪಡೆದು ಕ್ರಿಕೆಟ್ ಪ್ರೇಮಿಗಳಿಗೆ ಶಾಕ್ ನೀಡಿದ್ದಾರೆ.

ಅಚ್ಚರಿಯ ಆಯ್ಕೆ ಕಂಡವರಲ್ಲಿ ಮೊದಲಿಗರಾಗಿ ಕಾಣ ಸಿಗುವುದು ಭಾರತ ತಂಡದ ಆಟಗಾರ ರವಿಚಂದ್ರನ್ ಅಶ್ವಿನ್ ಭಾರತ ತಂಡಕ್ಕೆ ಕಳೆದ 4 ವರ್ಷಗಳಿಂದ ಸ್ಥಾನ ಪಡೆಯಲು ವಿಫಲರಾಗಿದ್ದರು. ಆದರೆ ಇದೀಗ ಅಶ್ವಿನ್ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಇದನ್ನೂ ಓದಿ: ಐಪಿಎಲ್ ಆಡಲ್ಲವೆಂದ ಇಂಗ್ಲೆಂಡ್ ಸ್ಟಾರ್ ಆಟಗಾರ..!

blank

ಅಶ್ವಿನ್‍ರಂತೆ ಅಚ್ಚರಿಯಾಗಿ ಆಯ್ಕೆಗೊಂಡವರಲ್ಲಿ ವೆಸ್ಟ್ ಇಂಡೀಸ್ ತಂಡದ ರವಿ ರಾಂಪಾಲ್ ಕೂಡ ಒಬ್ಬರು. ಅವರು ವೆಸ್ಟ್ ಇಂಡೀಸ್ ತಂಡದಿಂದ ಹೊರ ಬಿದ್ದು ಈಗಾಗಲೇ 6 ವರ್ಷ ಕಳೆದು ಹೋಗಿತ್ತು. ಆದರೆ ಇದೀಗ ನಡೆಯುತ್ತಿರುವ ಸಿಪಿಎಲ್‍ನಲ್ಲಿ ಭರ್ಜರಿ ಫಾರ್ಮ್ ಕಂಡುಕೊಂಡಿರುವ ರಾಂಪಾಲ್ ಮತ್ತೊಮ್ಮೆ ವೆಸ್ಟ್ ಇಂಡೀಸ್ ತಂಡ ಸೇರಿಕೊಂಡಿದ್ದಾರೆ.

blank

ತಾಲಿಬಾನಿಗಳಿಗಳ ಅಟ್ಟಹಾಸದಿಂದಾಗಿ ನಲುಗಿ ಹೋಗಿರುವ ಅಘ್ಘಾನಿಸ್ತಾನ ದೇಶ ಇದೀಗ ಟಿ20 ವಿಶ್ವಕಪ್‍ಗೆ ತಮ್ಮ ತಂಡವನ್ನು ಕಳುಹಿಸಿಕೊಡಲು ನಿರ್ಧರಿಸಿದೆ. ಈಗಾಗಲೇ ತಂಡವನ್ನು ಕೂಡ ಆಯ್ಕೆ ಮಾಡಲಾಗಿದೆ. ತಂಡದಲ್ಲಿ 2 ವರ್ಷಗಳ ಬಳಿಕ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ ಮೊಹಮ್ಮದ್ ಶಹಜಾದ್ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್‍ನಲ್ಲಿ ನಡೆದ ಏಕದಿನ ವಿಶ್ವಕಪ್ ಬಳಿಕ ತಂಡದಿಂದ ಹೊರ ಬಿದ್ದಿದ್ದ ಶಹಜಾದ್ ಟಿ20 ವಿಶ್ವಕಪ್‍ಗಾಗಿ ತಂಡಕ್ಕೆ ಮರಳಿದ್ದಾರೆ. ಇದನ್ನೂ ಓದಿ: ಆರು ಬಾಲಿಗೆ ಆರು ಸಿಕ್ಸರ್ ಸಿಡಿಸಿದ ಅಮೆರಿಕದ ಆಟಗಾರ

blank

ದೇಶಿ ಟೂರ್ನಿಯಲ್ಲಿ ಮಿಂಚಿದ ಇಂಗ್ಲೆಂಡ್ ತಂಡದ ವೇಗದ ಬೌಲರ್ ಟೈಮಲ್ ಮಿಲ್ಸ್ 2 ವರ್ಷಗಳ ಬಳಿಕ ಮತ್ತೆ ಇಂಗ್ಲೆಂಡ್ ತಂಡ ಸೇರಿಕೊಂಡಿದ್ದು, ರಾಷ್ಟ್ರೀಯ ತಂಡಕ್ಕಾಗಿ ಈ ಬಾರಿ ಟಿ20 ವಿಶ್ವಕಪ್ ಗೆಲ್ಲಿಸಿಕೊಡುವ ಇರಾದೆಯಲ್ಲಿದ್ದಾರೆ.

blank

ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಡೇವಿಡ್ ವೈಸ್ ಇದೀಗ ನಮೀಬಿಯಾ ತಂಡದ ಪರ ಆಡುತ್ತಿದ್ದಾರೆ. ದಕ್ಷಿಣ ಆಫ್ರಿಕಾ ತಂಡದಿಂದ ಹೊರ ಬಿದ್ದ ಬಳಿಕ ನಮೀಬಿಯಾ ತಂಡ ಸೇರಿಕೊಂಡ ವೈಸ್ ಇದೀಗ ಟಿ20 ವಿಶ್ವಕಪ್‍ನ ಅರ್ಹತಾ ಸುತ್ತಿನಲ್ಲಿ ಆಡುವ ಮೂಲಕ ಮತೊಮ್ಮೆ ಮಿಂಚಲು ಸಿದ್ಧರಾಗಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ತಂಡದಲ್ಲಿ ಸ್ಟಾರ್ ಆಟಗಾರರಿಗಿಲ್ಲ ಸ್ಥಾನ

ಈ ಎಲ್ಲಾ ಆಟಗಾರರು ಕೂಡ ಹಿರಿಯ ಅಟಗಾರಾಗಿದ್ದರೂ ಕೂಡ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಪ್ರದರ್ಶಿಸಿ ರಾಷ್ಟ್ರೀಯ ತಂಡದಲ್ಲಿ ಮಿಂಚುಹರಿಸಲು ಸಿದ್ಧರಾಗಿದ್ದಾರೆ. ಆದರೆ ಇವೆಲ್ಲರಿಗೂ ಆಡುವ 11ರ ಬಳಗದಲ್ಲಿ ಸ್ಥಾನ ಸಿಗುವುದೇ ಎನ್ನುವುದನ್ನು ಕಾದು ನೋಡಬೇಕಾಗಿದೆ.

Source: publictv.in Source link