ಸಲಾರ್​ನ ‘ಆ’ ಒಂದು ಸೀನ್​​ಗಾಗಿ ಒಂದು ವಾರ ಮೀಸಲಿಟ್ಟ ಪ್ರಶಾಂತ್​ ನೀಲ್​..

ಸಲಾರ್​ನ ‘ಆ’ ಒಂದು ಸೀನ್​​ಗಾಗಿ ಒಂದು ವಾರ ಮೀಸಲಿಟ್ಟ ಪ್ರಶಾಂತ್​ ನೀಲ್​..

ಶೇ. 90ರಷ್ಟು ಕೆಜಿಎಫ್ ಸಿನಿಮಾ ಶೂಟಿಂಗ್ ಮುಗಿಸಿ ಸಲಾರ್ ಸಿನಿಮಾ ಶೂಟಿಂಗ್​​ ಅಡ್ಡದಲ್ಲಿ ಇಳಿದಿದ್ದಾರೆ ಪ್ರಶಾಂತ್ ನೀಲ್. ಆ ಒಂದು ರೋಚಕ ಸೀನ್​​ಗಾಗಿ ಪ್ರಭಾಸ್ ಅವರನ್ನ ಖಡಕ್ ಌಂಡ್ ವಿಭಿನ್ನವಾಗಿ ತೋರಿಸೋದಕ್ಕಾಗಿ ಫುಲ್ ತಲೆ ಕೆಡಿಸಿಕೊಂಡಿದ್ದಾರಂತೆ ಪ್ರಶಾಂತ್ ನೀಲ್​. ಹಾಗಾದ್ರೆ ಯಾವ ಸೀನ್ ನೀಲ್ ಫಿಲ್ಡ್​ನಲ್ಲಿ ಬೆವರು ಹರಿಸುತ್ತಿದ್ದಾರೆ ಅನ್ನೋ ಕ್ಯೂರಿಯಸ್ ಸ್ಟೋರಿ ನಿಮ್ಮಮುಂದೆ.

ಸಲಾರ್.. ಹೊಂಬಾಳೆ ಬ್ಯಾನರ್​​ನಲ್ಲಿ ಪ್ರಶಾಂತ್ ನೀಲ್, ಪ್ರಭಾಸ್ ಕಾಂಬಿನೇಷನ್​​ನಲ್ಲಿ ಮೂಡಿ ಬರುತ್ತಿರೋ ಬಹು ನಿರೀಕ್ಷಿತ ಸಿನಿಮಾ.. ಪಬ್ಲಿಕ್ ಟಾಕ್, ಪೋಸ್ಟರ್ ಕಿಕ್​​, ಮುಹೂರ್ತದ ಝಲಕ್​ ಎಲ್ಲದ್ರಿಂದ ಗಮನ ಸೆಳೆದಿರೋ ಸಲಾರ್ ಸಿನಿಮಾ ಶೂಟಿಂಗ್ ಸೆಟ್​​ನಲ್ಲಿ ಇರುವಾಗಲೇ ಭಾರೀ ಸೌಂಡ್ ಮಾಡ್ತಿದೆ. ನೀಲ್ ಮತ್ತು ಪ್ರಭಾಸ್ ಕಾಂಬಿನೇಷನ್ ಹಂಗಿದೆ. ಈ ಹೊಸ ವಿಷಯವೆನು ಗೊತ್ತಾ.? ಆ ಒಂದು ಸೀನ್​​ಗೆ ನೀಲ್ ಬರೋಬ್ಬರಿ ಒಂದು ವಾರ ಬೆವರು ಹರಿಸುತ್ತಿದ್ದಾರೆ. ಹಾಗಾದ್ರೆ ಯಾವ ಸೀನ್ ಅದು..?

blank

ಸಲಾರ್ ಸಿನಿಮಾದ ಕುತೂಹಲದ ಸೀನ್ ಶೂಟ್
ಆ ಒಂದು ಸೀನ್​​ಗಾಗಿ ಒಂದು ವಾರ ಮೀಸಲು

ಕೆಜಿಎಫ್ ಸಿನಿಮಾದ ಮೂಲಕ ಭಾರತೀಯ ಚಿತ್ರರಂಗ ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್. ಅವರ ಸಲಾರ್ ಚಿತ್ರದ ಮೇಲೆ ದೊಡ್ಡ ನಿರೀಕ್ಷೆ ಮೌಂಟ್ ಎವರೆಸ್ಟ್ ತರ ಇದೆ. ಈ ಕಾರಣಕ್ಕೆ ಪ್ರಶಾಂತ್ ನೀಲ್ ಜಾಗರೂಕತೆಯಿಂದ ಶೂಟಿಂಗ್​ ಮಾಡ್ತಿದ್ದಾರೆ. ಎರಡ್ಮೂರು ಸಿನಿಮಾಗಳ ಶೂಟಿಂಗ್​​ಗಳ ನಡುವೆ ಪ್ರಭಾಸ್ ಸಲಾರ್ ಸಿನಿಮಾ ಶೂಟಿಂಗ್​​ಗಾಗಿ ಡೇಟ್ ಹೊಂದಾಣಿಕೆ ಮಾಡಿಕೊಂಡು ಶೂಟಿಂಗ್ ಅಡ್ಡಕ್ಕೆ ಇಳಿದಿದ್ದಾರೆ. ಸದ್ಯ ಸಲಾರ್ ಸಿನಿಮಾ ತಂಡವೀಗ ಇಂಟರ್​ವೆಲ್ ಸೀನ್​​ ಶೂಟ್​​ನ ಕಸರತ್ತಿನಲ್ಲಿದೆ.

ಇದನ್ನೂ ಓದಿ:ಫ್ಯಾಮಿಲಿ ಜೊತೆ ಅರಣ್ಯ ಸಫಾರಿಗೆ ಟ್ರಿಪ್​​​ ಹೋದ ಗೋಲ್ಡನ್​ ಸ್ಟಾರ್​ ಗಣೇಶ್

ಇಂಟರ್​​​ವಲ್​ ದೃಶ್ಯಕ್ಕಾಗಿ ನೀಲ್ ಬೇಜಾನ್ ಕಸರತ್ತು
ಅದ್ಧೂರಿ ಆ್ಯಕ್ಷನ್ ಸೀನ್​​​​​​​ನೊಂದಿಗೆ ಇಂಟರ್​​​ವಲ್​

blank

ಗಣೇಶ ಹಬ್ಬ ಮುಗಿಸಿರೋ ನೀಲ್​ ಆಂಡ್ ಪ್ರಭಾಸ್​ ಈಗ ಹೈದರಾಬಾದ್​ಲ್ಲಿ ಸಲಾರ್ ಇಂಟರ್​​​ವಲ್​ದೃಶ್ಯದ ಚಿತ್ರೀಕರಣ ಮಾಡುತ್ತಿದ್ದಾರೆ.. ‘ಸಲಾರ್’​ ಇಂಟರ್​​​ವಲ್​​​ನಲ್ಲಿ ಇರುತ್ತೆ ಸೂಪರ್ ಡೂಪರ್ ಆಕ್ಷನ್..! ಎರಡನೇ ಶೆಡ್ಯೂಲ್ ಶೂಟಿಂಗ್ ಮುಗಿಸಿದ್ದ ಪ್ರಭಾಸ್ ಆ್ಯಂಡ್ ಟೀಂ ಕ್ರಿಕೆಟ್ ಆಡಿಕೊಂಡು ರಿಲ್ಯಾಕ್ಸ್ ಮೂಡ್​ನಲ್ಲಿದ್ರು. ಆದ್ರೆ ಈಗ ಟಾಲಿವುಡ್​ನ ಬಾಹುಬಲಿ ರಣ ರೋಚಕ ಆಕ್ಷನ್ ದೃಶ್ಯಕ್ಕೆ ಮೈ ಕೊಡವಿ ಬಂದಿದ್ದಾರೆ.. ಮೂರನೇ ಶೆಡ್ಯೂಲ್ ಶೂಟಿಂಗ್​ನಲ್ಲಿರೋ ನೀಲ್​​​​​​ ಈಗ ಸಲಾರ್​ ಇಂಟರ್​​​ವಲ್ ​ನಲ್ಲಿ ಬರೋ ಆಕ್ಷನ್ ದೃಶ್ಯದ ಚಿತ್ರೀಕರಣ ಮಾಡುತ್ತಿದ್ದಾರೆ. ವಿಶೇಷ ಅಂದ್ರೆ ಸಲಾರ್ ಕ್ರೈಮ್ಯಾಕ್ಸ್ ಒಂದನ್ನ ಬಿಟ್ರೆ, ಬಹು ಕೋಟಿ ವೆಚ್ಚದಲ್ಲಿ ಚಿತ್ರೀಕರಣ ಆಗುತ್ತಿರೋ ಸೀನ್ ಇದಾಗಿರುತ್ತಂತೆ.

ಇದನ್ನೂ ಓದಿ:ಬಾಯ್​​ ಫ್ರೆಂಡ್​​ಗೆ ಕಿಸ್​​ ಕೊಟ್ಟ ನ್ಯಾಷನಲ್​​​​ ಕ್ರಶ್​​​ ರಶ್ಮಿಕಾ ಮಂದಣ್ಣ..

ಜಗಪತಿ ಬಾಬು ಸಲಾರ್​ರನಲ್ಲಿ ಬರೋ ಬಿಗ್​​ ವಿಲನ್.. ವಿಲನ್ ಇರೋ ಮನೆಯನ್ನ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸೆಟ್ ಹಾಕಿ ನಿರ್ಮಿಸಿದ್ದಾರೆ. ಈಗ ಸಲಾರ್​ ಮಧ್ಯಂತರ ದೃಶ್ಯಕ್ಕಾಗಿ ಕೋಟಿ ಕೋಟಿ ಖರ್ಚು ಮಾಡಿ ಚಿತ್ರೀಕರಣ ಮಾಡಲಾಗ್ತಿದೆ. ಕರ್ನಾಟಕದ ಫೇಮಸ್ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಮ್ಸ್​ ಬಂಡವಾಳ ಹೂಡಿರೋ ಸಲಾರ್ ಗಾಗಿ ಸಿಕ್ಕಾಪಟ್ಟೆ ಶ್ರಮ ವಹಿಸಿ ನೀಲ್​ ವರ್ಕ್ ಮಾಡುತ್ತಿದ್ದಾರೆ. ಮುಂದಿನ ವರ್ಷ ಪ್ರೇಕ್ಷಕ ಮುಂದೆ ಸಲಾರ್ ಸಿನಿಮಾ ಬಂದು ನಿಲ್ಲಲಿದೆ.

Source: newsfirstlive.com Source link