ಸಂಕ್ರಾಂತಿಗೆ ಕ್ರಾಂತಿ ಸೃಷ್ಟಿಸಿ ಬಾಕ್ಸಾಫೀಸ್​ನಲ್ಲಿ ಕೋಲಾಹಲ ಎಬ್ಬಿಸುತ್ತಾ ಬಹುನೀರಿಕ್ಷಿತ RRR

ಸಂಕ್ರಾಂತಿಗೆ ಕ್ರಾಂತಿ ಸೃಷ್ಟಿಸಿ ಬಾಕ್ಸಾಫೀಸ್​ನಲ್ಲಿ ಕೋಲಾಹಲ ಎಬ್ಬಿಸುತ್ತಾ ಬಹುನೀರಿಕ್ಷಿತ RRR

ಸದ್ಯಕ್ಕಂತೂ ಸಿನಿಮಾ ರಂಗಕ್ಕೆ ಇದು ಗ್ರಹಣ ಕಾಲ. ಅದ್ರಲೂ ಥಿಯೇಟರ್​ನ ಸಿಲ್ವರ್ ಸ್ಕ್ರೀನ್​​ಗಂತೂ ಇದು ಕಗ್ಗತ್ತಲ ಕಾಲ. ವಾಯುಮಾಲಿನ್ಯವಾಗಿ ವಾತಾವರಣ ಕಲುಶಿತವಾದಂತೆ ಸಿನಿಮಾ ರಂಗದ ಪಾಡಾಗಿದೆ.. ನಾವು ಅಂದೇ ಹೇಳ್ದಂಗೆ ನೀವು ಅಂದೇ ಕೇಳ್ದಂತೆ ಥ್ರಿಬಲ್ ಆರ್ ಸಿನಿಮಾ ಮುಂದಿನ ವರ್ಷ ಬರೋದಾಗಿ ತಿಳಿಸಿದೆ. ಆದ್ರೆ ಯಾವಾಗ ರಿಲೀಸ್ ಅನ್ನೋದೇ ಈಗ ಮಿಸ್ಟ್ರಿ.

ಮತ್ತೆ ಥಿಯೇಟರ್​​ಗಳಿಗೆ ಪ್ರೇಕ್ಷಕರು ಬಂದು ಸಿನಿಮಾ ಹಬ್ಬ ಮಾಡಬೇಕೆಂದ್ರೆ ನೋಡುವಂತ, ನಿರೀಕ್ಷೆ ಮಾಡಿದಂತ ದೊಡ್ಡ ದೊಡ್ಡ ಸಿನಿಮಾಗಳು ಬರಬೇಕು ಅಂತ ಸಿನಿಮಾ ಪಂಡಿತರು ಭವಿಷ್ಯ ನುಡಿತಾರೆ.. ಆದ್ರೆ ದೊಡ್ಡ ಸಿನಿಮಾಗಳು ರಿಲೀಸ್​​ಗೆ​ ಮುಂದೆ ಬರಬೇಕಲ್ವಾ.? ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳೆಲ್ಲ ಒಂದೆಜ್ಜೆ ಮುಂದೆ ಬರೋ ಬದ್ಲು ಹತ್ತು ಹೆಜ್ಜೆ ಹಿಂದೆ ಹೋಗ್ತಿದ್ದಾವೆ.

blank

ಭಾರತೀಯ ಚಿತ್ರರಂಗದ ದಕ್ಷಿಣ ಭಾಗದ ಎರಡು ನಿರೀಕ್ಷಿತ ಸಿನಿಮಾಗಳು ಕೆಜಿಎಫ್ ಚಾಪ್ಟರ್ 2 ಹಾಗೂ ರಣ ರೌದ್ರ ರುಧಿರ.. ಈ ಎರಡು ಸಿನಿಮಾಗಳು ತೆರೆಯನ್ನ ಬೆಳಗಬೇಕು.. ಆ ಬೆಳ್ಳಿ ಬೆಳಕನಲ್ಲಿ ಜನ ಮನ ಕುಣಿದು ಕುಪ್ಪಳಿಸಬೇಕು ಅನ್ನೋದು ಸಮಸ್ತ ಚಿತ್ರಪ್ರೇಮಿಗಳ ಆಶಯ.. ಈ ಎರಡು ಸಿನಿಮಾಗಳೇ ಥಿಯೇಟರ್​​​ಗೆ ಜನರನ್ನ ಕರೆದುಕೊಂಡು ಬರಲು ಸಾಧ್ಯ ಅನ್ನೋ ಅಂದಾಜಿದೆ. ಆದ್ರೆ ಈ ಅಂದದ ಅಂದಾಜಿಗೆ ಸದ್ಯ ತಣ್ಣೀರು ಬಿದಿದ್ದೆ. ನಿರೀಕ್ಷೆಯಂತೆ ಥ್ರಿಬಲ್ ಆರ್ ಸಿನಿಮಾ ಕೂಡ ನಾವು ಹೇಳಿದ ಡೇಟ್ ಅಕ್ಟೋಬರ್ 13ನೇ ತಾರೀಖ್​​ನಂದು ಬರಲ್ಲ ಎಂದು ಡಿಸಪಾಯಿಂಟಿಂಗ್ ನ್ಯೂಸ್ ಕೊಟ್ಟಿದೆ..

ಸದ್ಯ ಇಡೀ ದೇಶದಲ್ಲಿ ಪೂರ್ಣ ಪ್ರಮಾಣದ ಥಿಯೇಟರ್​ಗಳು ಓಪನ್ ಆಗಿಲ್ಲ. ತೆರೆದ ಚಿತ್ರಮಂದಿಗಳಲ್ಲೂ ಸಿನಿಮಾ ನೋಡೋ ವಾತಾವರಣ ಸೃಷ್ಟಿಯಾಗಿಲ್ಲ.. ಪ್ರೆಕ್ಷಕರು ಸಿನಿಮಾ ಥಿಯೇಟರ್​​​ನಲ್ಲಿ ಸಿನಿಮಾ ನೋಡೋ ಮೂಡ್​​ನಲ್ಲಂತೂ ಮೊದ್ಲೇ ಇಲ್ಲ.. ಹೀಗಾಗಿ ಈ ಟೈಮ್​ನಲ್ಲಿ ಜನರ ಮುಂದೆ ಬರೋದು ತುಂಬಾನೇ ರಿಸ್ಕ್ ಅನ್ನೋ ವಿಚಾರವನ್ನ ಸಿನಿಮಾ ಮಂದಿ ಅರಿತುಕೊಂಡು ಹಿಂದೆ ಸರಿಯುತ್ತಿದ್ದಾರೆ.. ಎರಡನೇ ಬಾರಿಗೆ ಥ್ರಿಬಲ್ ಆರ್ ಸಿನಿಮಾದ ರಿಲೀಸ್ ಡೇಟ್ ಮುಂದೂಡಲಾಗಿದೆ..

ಯಾವಾಗ RRR ಸಿನಿಮಾ ರಿಲೀಸ್..?
2022ರಲ್ಲಿ ಯಾವಾಗ ಬರುತ್ತೆ RRR..?
ಸಂಕ್ರಾಂತಿಗೆ ಕ್ರಾಂತಿ ಮಾಡುತ್ತಾ RRR..?

ಥ್ರಿಬಲ್ ಆರ್ ಸಿನಿಮಾ ರಿಲೀಸ್ ಡೇಟ್ ಮುಂದೂಡಲಾಗಿದೆ.. ಆದ್ರೆ ಯಾವಾಗ ಅನ್ನೋದೇ ಸಸ್ಪೆನ್ಸ್​​​ ಕಹಾನಿ.. ಒಂದು ಮಾಹಿತಿ ಪ್ರಕಾರ ಈ ವರ್ಷ ಬರೊಲ್ಲ ಥ್ರಿಬಲ್ ಆರ್.. ಮುಂದಿನ ವರ್ಷ ಅಂದ್ರೆ 2022ಕ್ಕೆ ಯಾವ ಡೇಟ್​​​ಗೆ ಬರುತ್ತೆ ಅನ್ನೋದೇ ಪ್ರಶ್ನೆ​​.. ಕೆಜಿಎಫ್ ಚಾಪ್ಟರ್ 2 ಸಿನಿಮಾ ಯಾವ ಉಸಾಬರಿನೂ ಬೇಡ ಯಾರಿಗೂ ತೊಂದರೆ ಮಾಡೋದು ಬೇಡ ಅಂತ ಏಪ್ರಿಲ್ 14. 2022ಕ್ಕೆ ಫಿಕ್ಸ್ ಮಾಡಿಕೊಂಡಿದೆ ರಿಲೀಸ್ ಮುಹೂರ್ತ.. ಥ್ರಿಬಲ್ ಆರ್ ಚಿತ್ರ ಕೆಜಿಎಫ್​​2ಗಿಂತ ಮೊದ್ಲೇ ಬರಬೇಕು ಅನ್ನೋದು ಗುರಿ. ಹೀಗಾಗಿ ಸಂಕ್ರಾಂತಿ ಹಬ್ಬಕ್ಕೆ ಥ್ರಿಬಲ್ ಆರ್ ಬರಬಹುದು ಅನ್ನೋ ಮಾತುಗಳು ಕೇಳಿ ಬರುತ್ತಿವೆ..

blank

ಸಂಕ್ರಾಂತಿ ಹಬ್ಬಕ್ಕಾ. ಅರೇ ಸಂಕ್ರಾಂತಿ ಹಬ್ಬಕ್ಕೆ ಈಗಾಗಲೇ ತೆಲುಗು ಮತ್ತು ತಮಿಳಿನ ಒಂದಷ್ಟು ಸಿನಿಮಾಗಳು ರಿಲೀಸ್ ಡೇಟ್ ಕನ್ಫರ್ಮ್ ಮಾಡಿಕೊಂಡಿವೆ. ಸಂಕ್ರಾಂತಿಗೆ ಥ್ರಿಬಲ್ ಆರ್ ಬಂದ್ರೆ ಬಾಕ್ಸಾಫೀಸ್​​ನಲ್ಲಿ ಕೋಲಾಹಲವಾಗಲ್ವಾ..? ಈ ರೀತಿಯ ಪ್ರಶ್ನೆ​ಗಳು ಎದ್ದಿವೆ.. ಇನ್ನು ಯುಗಾದಿ ಹಬ್ಬಕ್ಕೆ ರಾಜಮೌಳಿ ಥ್ರಿಬಲ್ ಆರ್ ಸಿನಿಮಾ ಬರಬಹುದು ಎಂದು ಗೇಸ್ ಮಾಡಲಾಗುತ್ತಿದೆ. ಏಪ್ರಿಲ್ 2ನೇ ತಾರೀಖ್ ಯುಗಾದಿ ಹಬ್ಬ 2022ಕ್ಕೆ ಬರಲಿದೆ. ಏಪ್ರಿಲ್ ಒಂದನೇ ತಾರೀಖ್ ವಿಶ್ವದ್ಯಾಂತ ರೌದ್ರ ರಣ ರುಧಿರ ಸಿನಿಮಾ ಬರೋ ಸಾಧ್ಯತೆ ಇದೆ. ಕಾದು ನೋಡೋಣ. ಯಾಕೆಂದ್ರೆ ಈ ಕೊರೊನಾ ಕಾಲದಲ್ಲಿ ಯಾರ ಅಂದಾಜು ಅಂದವಾಗಿ ಅಂದುಕೊಂಡಂಗೆ ಆಗಿಲ್ಲ.

Source: newsfirstlive.com Source link