ಗುಜರಾತ್​ಗೆ ಭೂಪೇಂದ್ರ ಪಟೇಲ್ ನೂತನ ಸಿಎಂ.. ಏನಿವರ ಹಿನ್ನೆಲೆ..?

ಗುಜರಾತ್​ಗೆ ಭೂಪೇಂದ್ರ ಪಟೇಲ್ ನೂತನ ಸಿಎಂ.. ಏನಿವರ ಹಿನ್ನೆಲೆ..?

ನವದೆಹಲಿ: ಗುಜರಾತ್ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು ಈ ಹಿಂದೆ ಸಿಎಂ ಆಗಿದ್ದ ವಿಜಯ್ ರುಪಾನಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಇದೀಗ ಭೂಪೇಂದ್ರ ಪಟೇಲ್ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಹಾಗಾದ್ರೆ ಯಾರಿದು ಭೂಪೇಂದ್ರ ಪಟೇಲ್ ಅಂತ ನೋಡದಾದ್ರೆ..

ಇದನ್ನೂ ಓದಿ: #BIGBREAKING ಗುಜರಾತ್ ನೂತನ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಆಯ್ಕೆ

ಭೂಪೇಂದ್ರ ಪಟೇಲ್ ಅಹ್ಮದಾಬಾದ್​​ ಮುನಿಸಿಪಲ್ ಕಾರ್ಪೋರೇಷನ್​ ನ ಮುಖ್ಯಸ್ಥರಾಗಿದ್ದರು. ನಂತರ ಅವರನ್ನ ಅಹ್ಮದಾಬಾದ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಇದನ್ನು ಬಿಟ್ಟರೆ ಭೂಪೇಂದ್ರ ಪಟೇಲ್ ಪಕ್ಷದಲ್ಲಿ ಅಷ್ಟೇನೂ ಜನಪ್ರಿಯತೆ ಗಳಿಸಿಲ್ಲ ಎನ್ನಲಾಗಿದೆ. ಅತೀದೊಡ್ಡ ಕ್ಷೇತ್ರದಿಂದ ಸ್ಪರ್ಧಿಸಿ ಲಕ್ಷಕ್ಕೂ ಹೆಚ್ಚು ಮತಗಳನ್ನ ಪಡೆದು ಆಯ್ಕೆಯಾಗಿರುವ ಭೂಪೇಂದ್ರ ಪಟೇಲ್ ಗುಜರಾತ್​ನ ಬಿಜೆಪಿಯ ಹಿರಿಯ ಶಾಸಕರೂ ಹೌದು. ಭೂಪೇಂದ್ರ ಪಟೇಲ್ ಪಾಟೀದಾರ್​ ಸಮುದಾಯದ ನಾಯಕರಾಗಿದ್ದಾರೆ.

ಇದ್ದಕ್ಕಿದ್ದಂತೆ ವಿಜಯ್ ರುಪಾನಿಯವರನ್ನ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಭೂಪೇಂದ್ರ ಪಟೇಲ್​ರನ್ನ ಮುಖ್ಯಮಂತ್ರಿ ಸ್ಥಾನಕ್ಕೇರಿಸಿರುವ ಬಿಜೆಪಿ ಹೈಕಮಾಂಡ್ ನಡೆ ಅಚ್ಚರಿ ಮೂಡಿಸಿದೆ.

Source: newsfirstlive.com Source link