‘ಬಿಜೆಪಿ ನಾಯಕರು ಹಣದ ಆಫರ್ ನೀಡಿದ್ದರು’ ಎಂದ ಶ್ರೀಮಂತ ಪಾಟೀಲ್​ರಿಂದ ಉಲ್ಟಾ ಹೇಳಿಕೆ

‘ಬಿಜೆಪಿ ನಾಯಕರು ಹಣದ ಆಫರ್ ನೀಡಿದ್ದರು’ ಎಂದ ಶ್ರೀಮಂತ ಪಾಟೀಲ್​ರಿಂದ ಉಲ್ಟಾ ಹೇಳಿಕೆ

ಬೆಳಗಾವಿ: ಕಾಂಗ್ರೆಸ್​ನಿಂದ ಬಿಜೆಪಿಗೆ ಬರಲು ಕಮಲ ನಾಯಕರು ಹಣದ ಆಫರ್ ನೀಡಿದ್ದರು ಎಂದು ಹೇಳುವ ಮೂಲಕ ಬಿಜೆಪಿ ನಾಯಕರಿಗೆ ಮುಜುಗರವಾಗವಂತೆ ಮಾತನಾಡಿದ್ದ ಮಾಜಿ ಸಚಿವ ಮತ್ತು ಶಾಸಕ ಶ್ರೀಮಂತ ಪಾಟೀಲ್ ಇದೀಗ ಉಲ್ಟಾ ಹೊಡೆದಿದ್ದಾರೆ.

ತಮ್ಮ ಹೇಳಿಕೆ ವಿವಾದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಉಲ್ಟಾ ಹೊಡೆದ ಶ್ರೀಮಂತ ಪಾಟೀಲ್ ಕಿತ್ತೂರಿನ ಅಂಬಡಗಟ್ಟಿಯಲ್ಲಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಸಚಿವ ಸಂಪುಟದಲ್ಲಿ ಸ್ಥಾನ ನೀಡುವ ಬಗ್ಗೆ ಸಿಎಂ ಖಚಿತ ಭರವಸೆ ನೀಡಿದ್ದಾರೆ. ಒಂದು ವೇಳೆ ಸಚಿವ ಸ್ಥಾನ ಸಿಗದಿದ್ದರೆ ಆಗ ನನ್ನ ಮುಂದಿನ ತೀರ್ಮಾನ ಪ್ರಕಟಿಸುತ್ತೇನೆ. ನನಗೆ ಯಾವ ಬಿಜೆಪಿ ನಾಯಕರೂ ಹಣ ಕೊಡಲು ಬಂದಿಲ್ಲ. ನನ್ನ ಮಾತಿನಲ್ಲಿ ಸ್ವಲ್ಪ ಏರುಪೇರಾಗಿ ನಾನೇ ಆ ರೀತಿ ಹೇಳಿಕೆ ನೀಡಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ‘ಕಾಂಗ್ರೆಸ್​ ಬಿಟ್ಟು ಬರಲು ಹಣ ಆಫರ್​​ ಮಾಡಿದ್ರು’ ಎಂದ ಶ್ರೀಮಂತ ಪಾಟೀಲ್​;​​​ ಬಿಜೆಪಿಗರ ಆಕ್ರೋಶ

ನಾನು ಬಿಜೆಪಿ ಸಿದ್ಧಾಂತ ಒಪ್ಪಿಕೊಂಡು ಕಾಂಗ್ರೆಸ್ ತೊರೆದು ಹೋಗಿದ್ದೇನೆ. ಬಿಜೆಪಿಗೆ ಹೋಗುವ ಸಂದರ್ಭದಲ್ಲಿ ಬಿಜೆಪಿ ನಾಯಕರು ನೀವೇನಾದ್ರೂ ಅಪೇಕ್ಷೆ ಇಟ್ಟುಕೊಂಡು ಬಂದಿದ್ದೀರಾ ? ಎಂದು ಕೇಳಿದ್ರು. ಆದರೆ ನಾನು ಯಾವುದೇ ಹಣದ ಅಪೇಕ್ಷೆಗಾಗಿ ನಾನು ಬಂದಿಲ್ಲ ಎಂದು ಆಗ ಹೇಳಿದ್ದೆ. ಸರ್ಕಾರ ಬಂದ್ರೆ ಒಂದು ಸೂಕ್ತಸ್ಥಾನಮಾನ ನೀಡಲು ಮನವಿ ಮಾಡಿದ್ದೆ. ಅದರಂತೆ ಕಳೆದ ಬಾರಿ ಜವಳಿ ಖಾತೆಯನ್ನು ನನಗೆ ನೀಡಿದ್ದರು. ಪ್ರಾಮಾಣಿಕವಾಗಿ ನನ್ನ ಖಾತೆಯನ್ನು ನಾನು ನಿರ್ವಹಣೆ ಮಾಡಿದ್ದೇನೆ. ಬಾಯಿ ತಪ್ಪಿನಿಂದ ಆ ರೀತಿ ಹೇಳಿಲ್ಲ, ತಪ್ಪು ತಿಳುವಳಿಕೆ ಆಗಿದೆ. ಬಿಜೆಪಿಯವರು ಆಮಿಷವೂಡ್ಡಿ ಯಾರು ಬಂದಿರಲಿಲ್ಲ. ನಾನೇ ಹೋಗಿದ್ದೆ. ಸಚಿವ ಸ್ಥಾನ ಸಿಗದಿದ್ದರೆ ಸಮಾಜ ರಾಜೀನಾಮೆ ನೀಡು ಎಂದ್ರೆ ನೀಡಲು ಸಿದ್ಧ. ನಿಗಮ ಮಂಡಳಿ ನಾನು ಕೊಟ್ರೂ ತೆಗೆದುಕೊಳ್ಳುವುದಿಲ್ಲ. ನಾನು ಕೃಷಿಯಲ್ಲಿ ಬಹಳ ಆಶಕ್ತಿ ಹೊಂದಿದ್ದೇನೆ. ಕೃಷಿ ಖಾತೆಗೆ ಬೇಡಿಕೆ ಇಟ್ಟಿದ್ದೇನೆ. ಯಾವ ಖಾತೆ ಕೊಡುವುದು, ಬಿಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದಿದ್ದಾರೆ.

Source: newsfirstlive.com Source link