ಸೂಪರ್​ಸ್ಟಾರ್​ ಉಪ್ಪಿಯ ‘ಕಬ್ಜ’ವಾಗೋ ಸುಂದ್ರಿ ಯಾರು?

ಸೂಪರ್​ಸ್ಟಾರ್​ ಉಪ್ಪಿಯ ‘ಕಬ್ಜ’ವಾಗೋ ಸುಂದ್ರಿ ಯಾರು?

ಕಬ್ಜ.‌ಸ್ಯಾಂಡಲ್​ವುಡ್ ಮಾತ್ರವಲ್ಲ, ಇಡೀ ದಕ್ಷಿಣ ಸಿನಿ ಲೋಕದಲ್ಲೇ ಕುತೂಹಲ ಮೂಡಿಸಿರುವ ಚಿತ್ರ. ಉಪ್ಪಿ ಮತ್ತೆ ನಿರ್ದೇಶಕ ಆರ್​. ಚಂದ್ರು ಅಂಡರ್ ವರ್ಲ್ಡ್ ಕತೆಯ ಮೂಲಕ ಮತ್ತೆ ಒಂದಾಗಿದ್ದು ಮತ್ತಷ್ಟು ಹೈಪ್ ಕ್ರಿಯೇಟ್ ಆಗಿದೆ. ಇಷ್ಟಾದ್ರು ನಿರ್ದೇಶಕ ಆರ್.ಚಂದ್ರು ಇನ್ನು ಚಿತ್ರದ ನಾಯಕಿ ಬಗ್ಗೆ ಗುಟ್ಟು ಬಿಟ್ಟು ಕೊಡದೆ ಸಸ್ಪೆನ್ಸ್ ಮೆನ್​​​​​​​ಟೈನ್ ಮಾಡಿದ್ದಾರೆ. ಹಾಗಾದ್ರೆ ಚಂದ್ರು ನುಡಿದಂತೆ ಅದ್ಯಾವ ಬಹುಭಾಷೆ ಸ್ಟಾರ್ ನಟಿಯನ್ನ ಕಬ್ಜ ಅಡ್ಡಕ್ಕೆ ಕರ್ಕೊಂಡ್ ಬರ್ತಿದ್ದಾರೆ‌.?

ಸಿನಿಮಾದ ಟೈಟಲ್, ಮೇಕಿಂಗ್, ಸ್ಟಾರ್ ಕಾಸ್ಟ್, ಬಜೆಟ್, ಕಥೆ ಯಾವುದೇ ವಿಚಾರದಲ್ಲೂ ರಾಜಿ ಆಗದೇ ಸ್ಟೋರಿ ಏನ್​​​​​​ ಡಿಮ್ಯಾಂಡ್ ಮಾಡೊದನ್ನು ಬಜೆಟ್ ಬಗ್ಗೆ ಯೋಚಿಸದೆ ಮಾಡಿ ತೊರಿಸ್ತಾರೆ ಆರ್. ಚಂದ್ರು. ಇನ್ನು ಉಪ್ಪಿ ಮತ್ತು ಕಿಚ್ಚ ಇಬಿಬ್ರು ಪ್ಯಾನ್ ಇಂಡಿಯಾ ಸ್ಟಾರ್ ಗಳ ಹಾಕೊಂಡ್ ಸಿನಿಮಾ ಮಾಡೊವಾಗ ನಾಯಕಿ ವಿಚಾರದಲ್ಲಿ ರಾಜಿ ಆಗಲ್ಲ ನಮ್ಮ ಚಂದ್ರಪ್ಪ. ಯಾವ್ದಾದ್ರು ಬಿಗ್ ಸ್ಟಾರ್ ನಟಿಗೆ ಬಲೆ ಬಿಸ್ತಾರೆ ಅಂತ, ಚಂದ್ರು ಅವರನ್ನು ಹತ್ತಿರದಿಂದ ಬಲ್ಲವರು ಕಬ್ಜ ಚಿತ್ರ ಶುರುವಾದಗಿಂದ ಹೇಳ್ತಾನೆ ಇದ್ದಾರೆ.. ಆ ಮಾತು ಈಗ ನಿಜವಾಗೋ ಕಾಲ ಸನಿಹವಾಗುತ್ತಿದೆ..

ಗಾಂಧಿನಗರದ ಮಂದಿ ಕಬ್ಜ ಚಿತ್ರದ ನಾಯಕಿ ಬಗ್ಗೆ ಇಷ್ಟೆಲ್ಲ ಮಾತಾಡೊಕೆ ಕಾರಣ ತಾಜ್ ಮಹಲ್ ಚಂದ್ರಣ್ಣನೆ ಕಾರಣ ಅಂತಾರೆ ಉಪ್ಪಿ ಅಣ್ಣನ ಅರಾಧಕರು. ಯಾಕಂದ್ರೆ  ಕಬ್ಜ ಚಿತ್ರ ಆರಂಭವಾದ ದಿನವೇ ಚಿತ್ರಕ್ಕೆ ಕಾಜಲ್ ಅಗರ್ವಾಲ್ ಅವರನ್ನು ಕರೆಸ್ತಿವಿ, ಕಾಜಲ್​​​ ಬಂದು ಕಾಲಿಗೆ ಗೆಜ್ಜೆ ಕಟ್ಟಿ ಉಪ್ಪಿ ಜೊತೆ ಹೆಜ್ಜೆಯನ್ನ ಹಾಕಿಸ್ತಿನಿ ಅಂತ ಡೈರೆಕ್ಟರ್ ಚಂದ್ರು ಅವರೆ ಹೇಳಿದ್ರು. ಅದ್ರೆ ಕಾಜಲ್ ಗ್ಯಾಫ್ ಅಲ್ಲಿ ಮ್ಯಾರೇಜ್ ಅಗಿ ಬಿಟ್ಟ್ರು. ಕಾಜಲ್ ಮದುವೆ ಆದ ಕಾರಣ ಅವರು ಕಬ್ಜ ಚಿತ್ರಕ್ಕೆ ಕರೆತರುವ ಅಲೊಚನೆಯನ್ನು ಕೈ ಬಿಟ್ಟಿ ಕೊರೊನ ಕಾರಣ ಶೂಟಿಂಗ್ ನಿಂತ ಕಾರಣ  ಚಂದ್ರು ಕೊಂಚ ಸೈಲೆಂಟ್ ಅಗಿದ್ರು. ಆದ್ರು ಕಬ್ಜ ಚಿತ್ರಕ್ಕೆ ಟಾಲಿವುಡ್  ಕಾಜಲ್ ಬರ್ದಿದ್ರೆ ಏನು, ಕಾಲಿವುಡ್ ನಯನತಾರ ಬರ್ತಾರಂತೆ. ಅಂತೆಲ್ಲ ಮಾತುಗಳು ಕೇಳಿ ಬಂದ್ವು. ಅದ್ರೆ ಇದ್ಯಾವುದಕ್ಕೂ ನಿರ್ದೇಶಕರು ತುಟಿ ಬಿಚ್ಚದೆ ಸೈಲೆಂಟ್ ಆಗಿದ್ರು.
blank
ಫೈನಲಿ ಕಬ್ಜ ಸಿನಿಮಾದ ನಾಯಕಿ ಯಾರು ಅನ್ನೋ ಗೌಪ್ಯವನ್ನ ರಿವೀಲ್ ಮಾಡೋ ಕಾಲ ಸನಿಹವಾಗುತ್ತಿದೆ. ಕಬ್ಜ ಸಿನಿಮಾದ ನಾಯಕಿ ಕಾಜಲ್​ ಅಲ್ಲ ಸೂಪರ್ ಸುಂದ್ರಿ ನಯನತಾರನೂ ಅಲ್ಲ ಎನ್ನುತ್ತಿದೆ ಕಬ್ಜ ಸಿನಿಮಾದ ಆತ್ಮೀಯ ಬಳಗ ಹೇಳ್ತಿರೋ ರಿಪೋರ್ಟ್​. ಹಾಗಾದ್ರೆ ಯಾರು ಕಬ್ಜ ಸಿನಿಮಾ ಹೀರೋಯಿನ್ ಅನ್ನೊದಕ್ಕೆ ಈ ಸಿಕ್ಕಿರೋ ಪಕ್ಕಾ ಉತ್ತರ ಸೂಪರ್ ಸುಂದ್ರಿ ನಯನತಾರ ಅಲ್ಲ ಪವರ್ ಸುಂದ್ರಿ ತ್ರಿಶಾ ಕೃಷ್ಣನ್​.​

ಕಬ್ಜ ಸಿನಿಮಾ ಸೆಟ್​​​ಗೆ ಬರ್ತಾರಾ ಪವರ್ ಸುಂದ್ರಿ.?
ಕನ್ನಡಕ್ಕೆ ಪವರ್, ದ್ವಿತ್ವ ನಂತರ ಮತ್ತೊಮ್ಮೆ ತ್ರಿಶಾ.?

ಹೌದು ಕಾಜಲ್, ನಯನತಾರ ನಂತ್ರ ದ್ವಿತ್ವ ಸುಂದರಿ ತ್ರಿಶಾ ಕಬ್ಜ ಚಿತ್ರಕ್ಕೆ ನಾಯಕಿ ಆಗ್ತಾರೆ ಅನ್ನೋ ಮಾಹಿತಿ ಸಿಕ್ಕಿದೆ. ಈಗಾಗಲೇ ಚಂದ್ರು ಸೌತ್ ಇಂಡಿಯಾ ಸ್ಟಾರ್ ನಟಿ ತ್ರಿಶಾ ಅವರನ್ನು ಫೈನಲ್ ಮಾಡಿದ್ದಾರಂತೆ ಅನ್ನೋ ವಿಷ್ಯ ಗಾಂಧಿನಗರದಲ್ಲಿ ಹರಿದಾಡ್ತಿದೆ. ಆದ್ರೆ ಚಂದ್ರು ಇದಕ್ಕೆ ತಲೆ ಕೆಡಿಸಿಕೊಳ್ಳದೆ ಮೂರನೇ ಶೆಡ್ಯೂಲ್ ಶೂಟಿಂಗ್ ಪ್ಲಾನ್ ಮಾಡೊ ತವಕದಲ್ಲಿದ್ದಾರೆ‌‌‌‌. ಇನ್ನು ಈ‌ ಕಬ್ಜ ಚಿತ್ರದ ನಾಯಕಿ ವಿಚಾರವಾಗಿ ಚಿತ್ರಪ್ರೇಮಿಗಳೇ ತಂಡ ನಿರ್ದೇಶಕ ಚಂದ್ರು ಅವರನ್ನು ಮಾತಿಗೆಳೆಯುವ ಪ್ರಯತ್ನ ಮಾಡಿದ್ದು, ನಾಯಕಿ ವಿಚಾರದಲ್ಲಿ ಮತ್ತದೆ ಹಳೇ ಬಾಣ ಬಿಟ್ಟು ಸ್ಟಾರ್ ನಟಿ ಕರ್ಕೊಂಡ್ ಬಂದೆ ಬರ್ತೀನಿ ಅಂದ್ರು.

ಅದೇನೆ ಇರಲಿ ಆರ್.ಚಂದ್ರು ಕಬ್ಜ ಚಿತ್ರದ ನಾಯಕಿ  ವಿಚಾರದಲ್ಲಿ ಸಾಕಷ್ಟು ತಲೆ ಕೆಡಸಿ ಕೊಂಡತೆ ಕಾಣ್ತಿದ್ದು,  ಈ ಹಿಂದೆ ಕಬ್ಜ ಚಿತ್ರದ ಒಂದೊಂದೆ ಪಾತ್ರಗಳನ್ನು ಸರ್ಪ್ರೈಸ್ ಆಗಿ ರಿವೀಲ್ ಮಾಡಿದಂತೆ, ನಾಯಕಿ ಪಾತ್ರವನ್ನು ರಿವೀಲ್ ಮಾಡೊ ಪ್ಲಾನ್ ನಲ್ಲಿದ್ದು, ಉಪ್ಪಿಯ ಹುಟ್ಟು ಹಬ್ಬದ ದಿನ ಚಂದ್ರು ಕಬ್ಜ ಚಿತ್ರದ ನಾಯಕಿ ಬಗ್ಗೆ ಸುಳಿವು ಕೊಡ್ತಾರೆ.ಅನ್ನೋ ಮಾತು ಈಗ ಉಪ್ಪಿ ಬಳಗದಲ್ಲಿ ಕೇಳಿ ಬರ್ತಿದೆ. ಆದರೆ ಅದು ನಿಜವೋ ಇಲ್ಲ ಗಾಳಿ ಸುದ್ದಿಯೋ ಉಪ್ಪಿ ಹುಟ್ಟು ಹಬ್ಬದವರೆಗೂ ಕಾದು ನೋಡಬೇಕು..

Source: newsfirstlive.com Source link