ಸೇಲ್ ಆಗದ ಗಣೇಶ ಮೂರ್ತಿಗಳು.. ಅಸಹಾಯಕರಾಗಿ ಮೂರ್ತಿಗಳನ್ನು ಒಡೆದುಹಾಕಿದ ತಯಾರಕರು

ಸೇಲ್ ಆಗದ ಗಣೇಶ ಮೂರ್ತಿಗಳು.. ಅಸಹಾಯಕರಾಗಿ ಮೂರ್ತಿಗಳನ್ನು ಒಡೆದುಹಾಕಿದ ತಯಾರಕರು

ಹಾವೇರಿ: ಗಣೇಶ ಮೂರ್ತಿಗಳ ಮೇಲೂ ಕೊರೊನಾ ಎಫೆಕ್ಟ್ ಬೀರಿದ್ದು ಗಣೇಶ ಮೂರ್ತಿ ತಯಾರಕರಿಗೆ ಸಂಕಷ್ಟ ಎದುರಾಗಿದೆ. ಗಣೇಶ ಮೂರ್ತಿಗಳು ಕೊಳ್ಳುವವರಿಲ್ಲದೇ ವೇಸ್ಟ್ ಆಗುತ್ತಿವೆ.

ಸರ್ಕಾರ ಹೊಸ ಮಾರ್ಗಸೂಚಿ ತಂದ ಹಿನ್ನೆಲೆ ಅದ್ದೂರಿ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ಸಿಕ್ಕಿರಲಿಲ್ಲ.. ಹೀಗಾಗಿ ದೊಡ್ಡ ದೊಡ್ಡ ಗಣೇಶ ಮೂರ್ತಿಗಳು ಮಾರಾಟ ಆಗಿರಲಿಲ್ಲ.. ಮನೆಯಲ್ಲಿ ಇಟ್ಟುಕೊಳ್ಳೋಕೂ ಜಾಗ ಇಲ್ಲ.. ವಾಹನದಲ್ಲಿ ಸಾಗಿಸಿ ನೀರಿನಲ್ಲಿ ವಿಸರ್ಜಿಸೋದೂ ಅಸಾಧ್ಯ.. ಹೀಗಾಗಿ ಅನಿವಾರ್ಯವಾಗಿ ಮೂರ್ತಿ ತಯಾರಕರು ಗಣೇಶ ಮೂರ್ತಿಗಳನ್ನು ಒಡೆದು ತುಂಡು ತುಂಡು ಮಾಡಿ ಕುಟ್ಟುತ್ತಿದ್ದಾರೆ.

ಇದನ್ನೂ ಓದಿ: ಮಕ್ಕಳು ಕೂರಿಸಿದ್ದ ಗಣಪತಿ ಮೂರ್ತಿಯನ್ನೇ ಕದ್ದೊಯ್ದ ಖತರ್ನಾಕ್​ ಕಳ್ಳರು..!

ಮೂರ್ನಾಲ್ಕು ಲಕ್ಷ ರೂಪಾಯಿ ಸಾಲ ಮಾಡಿ ಬಣ್ಣ, ಕಚ್ಚಾ ವಸ್ತುಗಳನ್ನು ತಂದು ಮೂರ್ತಿಗಳನ್ನು ತಯಾರಿಸಲಾಗಿತ್ತು.. ಸುಮಾರು ಎರಡು ತಿಂಗಳು ಕುಟುಂಬದೊಡನೆ ಗಣೇಶ ಮೂರ್ತಿಗಳನ್ನು ತಯಾರಿಸಲಾಗಿದ್ದು ಎಂದು ಮೂರ್ತ ತಯಾರಿಸುವ ಮಂಜುನಾಥ್ ದಂಪತಿ ಕಣ್ಣೀರಿಟ್ಟಿದೆ.

ಇದನ್ನೂ ಓದಿ: ಗಣೇಶೋತ್ಸವಕ್ಕೆ BBMP ಹೊಸ ರೂಲ್ಸ್​; ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

ಮೂರ್ತಿಗಳನ್ನು ನೋಡಿದರೆ ಒಡೆಯೋಕೆ ಮನಸ್ಸು ಬರ್ತಿಲ್ಲ.. ಅನಿವಾರ್ಯವಾಗಿ ಒಡೆದು ತುಂಡು ತುಂಡು ಮಾಡಬೇಕಾಗಿದೆ ಎಂದು ಹೇಳಿದ್ದಾರೆ. ಸಾಂಪ್ರದಾಯಿಕವಾಗಿ ಗಣೇಶ ವಿಸರ್ಜನೆ ಸಮಯದಲ್ಲಿ ಮಾಡೋ ಪ್ರಕ್ರಿಯೆ ಪ್ರಕಾರ ನಮಸ್ಕರಿಸಿ ಮೂರ್ತಿಗಳನ್ನು ನಾಶ ಮಾಡಿದ್ದಾರೆ.

Source: newsfirstlive.com Source link