ನೆಲಸಮಗೊಂಡ ದೇವಸ್ಥಾನದ ಬಳಿಯೇ ಹೊಸ ಮೂರ್ತಿ ಪ್ರತಿಷ್ಠಾಪನೆಗೆ ಮುಂದಾದ ಗ್ರಾಮಸ್ಥರು

ನೆಲಸಮಗೊಂಡ ದೇವಸ್ಥಾನದ ಬಳಿಯೇ ಹೊಸ ಮೂರ್ತಿ ಪ್ರತಿಷ್ಠಾಪನೆಗೆ ಮುಂದಾದ ಗ್ರಾಮಸ್ಥರು

ಮೈಸೂರು: ನೆಲಸಮವಾಗಿದ್ದ ದೇಗುಲದ ಬಳಿ ಮತ್ತೆ ಹೋಮ ಹವನ ನಡೆಸಿ ಶ್ರೀ ಶಕ್ತಿದೇವತೆ ಮಹಾದೇವಿ ಮೂರ್ತಿ ಪ್ರತಿಷ್ಠಾಪನೆ ಮಾಡಲು ಮುಂದಾಗಿದ್ದಾರೆ. ದೇಗುಲ ನೆಲಸಮದ ಮುಂದಾಳತ್ವ ವಹಿಸಿದ ಪೊಲೀಸ್ ಅಧಿಕಾರಿ ಕರ್ಪೂರ ಹಚ್ಚಿ ಕ್ಷಮೆಯಾಚನೆ ಮಾಡಿದ್ದಾರೆ. ನೂತನ ಪ್ರತಿಷ್ಠಾಪನೆಯ ಮೂರ್ತಿಯ ಬಳಿ 2 ನಿಮಿಷಗಳ ಕಾಲ ಪೊಲೀಸ್ ಅಧಿಕಾರಿ ಮೌನ ವಹಿಸಿ ಕರ್ಪೂರ ಹಚ್ಚಿ ಕ್ಷಮೆ ಕೋರಿದ್ದಾರಂತೆ.

ಇದನ್ನೂ ಓದಿ: ಚರ್ಚ್​​, ಮಸೀದಿ ಬಿಟ್ಟು ಹಿಂದೂ ದೇವಾಲಯಗಳ ಟಾರ್ಗೆಟ್​ ಮಾತ್ರ ಯಾಕೆ?- ಪ್ರತಾಪ್​​ ಸಿಂಹ

ನೆಲಸಮವಾಗಿರುವ ದೇವಾಲಯವನ್ನು ಕೋಟಿ ರೂ ವೆಚ್ಚದಲ್ಲಿ ಪ್ರತಿಷ್ಠಾಪನೆ ಮಾಡಲು ಹುಚ್ಛಗಣಿ ಮತ್ತು ಸುತ್ತಮತ್ತಲ ಗ್ರಾಮಸ್ಥರು ಮುಂದಾಗಿದ್ದಾರೆ. ಇದಕ್ಕಾಗಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಲು ಗ್ರಾಮಸ್ಥರು ತಯಾರಾಗಿದ್ದಾರಂತೆ.
ಇನ್ನು ಹುಚ್ಚಗುಣಿ ಗ್ರಾಮದ ಸಂಗಮೇಶ್ ಮತ್ತು ಭಾಗ್ಯ ದಂಪತಿ ಲಕ್ಷಾಂತರ ಬೆಲೆ ಬಾಳುವ 5ಗುಂಟೆ ಜಮೀನನ್ನು ದೇವಾಲಯ ನಿರ್ಮಾಣಕ್ಕೆ ದಾನ ಮಾಡಲು ಮುಂದಾಗಿದೆಯಂತೆ.

ಇದನ್ನೂ ಓದಿ: ದೇವಸ್ಥಾನ ನೆಲಸಮ ಮಾಡಲು ಜೆಸಿಬಿ ತಂದ್ರೆ ನಾನು ಹೋಗಿ ತಲೆಕೊಡಬೇಕಿತ್ತಾ..? ಎಂದ ಬಿಜೆಪಿ ಶಾಸಕ

Source: newsfirstlive.com Source link