ಫುಟ್ಬಾಲ್ ಆಟಗಾರ ಕಮ್ ರೌಡಿಶೀಟರ್​ ಆಗಿದ್ದ​​ವನ ಕೊಲೆಗೈದ ದುಷ್ಕರ್ಮಿಗಳು

ಫುಟ್ಬಾಲ್ ಆಟಗಾರ ಕಮ್ ರೌಡಿಶೀಟರ್​ ಆಗಿದ್ದ​​ವನ ಕೊಲೆಗೈದ ದುಷ್ಕರ್ಮಿಗಳು

ಬೆಂಗಳೂರು: ನಗರದಲ್ಲಿ ಮತ್ತೊಬ್ಬ ರೌಡಿಶೀಟರ್​ನ ಹತ್ಯೆ ನಡೆದಿದೆ. ಅಶೋಕನಗರದ ಫುಟ್​ಬಾಲ್ ಸಂಸ್ಥೆ ಆವರಣದಲ್ಲೇ ಅರವಿಂದ್(30)ಹೆಸರಿನ ರೌಡಿಶೀಟರ್​​ನನ್ನ ಕೊಚ್ಚಿ ಕೊಲೆಗೈಯ್ಯಲಾಗಿದೆ.

ಅರವಿಂದ್ ಅಶೋಕನಗರ ವ್ಯಾಪ್ತಿಯ ರೌಡಿಶೀಟರ್ ಆಗಿದ್ದ.. ಫುಟ್ಬಾಲ್ ಆಟಗಾರನೂ ಆಗಿದ್ದ ಅರವಿಂದ್ ಫುಟ್​ಬಾಲ್ ಟೀಂ ಒಂದಕ್ಕೆ ಮ್ಯಾನೇಜರ್ ಕೂಡ ಆಗಿದ್ದ ಎನ್ನಲಾಗಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ ಗೂಂಡಾ ಆಕ್ಟ್ ನಡಿ ಜೈಲುಪಾಲಾಗಿದ್ದ ಅರವಿಂದ್​ನನ್ನ ಭಾರತೀನಗರ ಪೊಲೀಸರು ಗೂಂಡಾ ಆ್ಯಕ್ಟ್ ಅಡಿಯಲ್ಲಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದರಂತೆ. ಆದ್ರೆ ಇತ್ತೀಚೆಗೆ ಜಾಮೀನು ಪಡೆದು ಜೈಲಿಂದ ಹೊರಬಂದಿದ್ದ ಎನ್ನಲಾಗಿದೆ.

ಘಟನೆಗೆ ಸಂಬಂಧಿಸಿದಂತ ಹೇಳಿಕೆ ನೀಡಿರುವ ಡಿಸಿಪಿ ಅನುಚೇತ್.. ಸಂಜೆ 4:30 ಕ್ಕೆ ಘಟನೆ ನಡೆದಿದೆ.. ಯಾವುದೋ ಗಲಾಟೆ ಆಗಿ ಸಂಜೆ‌ಕೊಲೆ ಮಾಡಿದ್ದಾರೆ.. ಸ್ಥಳದಲ್ಲಿನ ಸಿಸಿಟಿವಿ ಸಿಕ್ಕಿದೆ, ಅದನ್ನ ಪರಿಶೀಲನೆ ನಡೆಸ್ತಿದ್ದೇವೆ.. ಕೊಲೆಗೆ ನಿಖರ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸುತ್ತೇವೆ ಎಂದಿದ್ದಾರೆ.

Source: newsfirstlive.com Source link