ತನ್ವೀರ್ ಸೇಠ್ ವಿರುದ್ಧ ಹೇಳಿಕೆ: ಪ್ರತಾಪ್ ಸಿಂಹ ಕಚೇರಿ ಬಳಿ ಬಳೆ ಇಟ್ಟು ಪ್ರತಿಭಟಿಸಿದ ಯೂತ್ ಕಾಂಗ್ರೆಸ್

ತನ್ವೀರ್ ಸೇಠ್ ವಿರುದ್ಧ ಹೇಳಿಕೆ: ಪ್ರತಾಪ್ ಸಿಂಹ ಕಚೇರಿ ಬಳಿ ಬಳೆ ಇಟ್ಟು ಪ್ರತಿಭಟಿಸಿದ ಯೂತ್ ಕಾಂಗ್ರೆಸ್

ಮೈಸೂರು: ಬಳೆ ವಿಚಾರದಲ್ಲಿ ಶಾಸಕ ತನ್ವೀರ್‌ಸೇಠ್ ಬಗ್ಗೆ ಪ್ರತಾಪ್‌ಸಿಂಹ ಲೇವಡಿ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ‌ ಪ್ರತಾಪ್‌ಸಿಂಹಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಬಳೆ ಕೊಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದ್ದಾರೆ.

ಪ್ರತಾಪ್‌ಸಿಂಹ ಕಚೇರಿಗೆ ತೆರಳಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು 20 ಡಜನ್ ಬಳೆಯನ್ನ ಕಚೇರಿಯ ಮುಂದಿಟ್ಟಿದ್ದಾರೆ. ಯುವಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ದೀಪಕ್ ಶಿವಣ್ಣ ನೇತೃತ್ವದಲ್ಲಿ ಈ ವಿನೂತನ ಪ್ರತಿಭಟನೆ ನಡೆದಿದೆ.

ಶಾಸಕ ತನ್ವೀರ್‌ಸೇಠ್ ಸೇರಿದಂತೆ ಕಾಂಗ್ರೆಸ್ ನಾಯಕರ ಬಗ್ಗೆ ಎಚ್ಚರಿಕೆಯಿಂದ ಮಾತನಾಡಬೇಕು. ಕೊರೊನನಾ ಸಂಕಷ್ಟದಲ್ಲಿ‌ ಜನ ಸಾಯುತ್ತಿರುವಾಗ ನಿಮಗೆ‌ ಕೋಮುವಾದ ಬೇಕಾ. ಪ್ರಚೋದನೆ ಮಾಡುವುದನ್ನ ಬಿಡಬೇಕು. ಹೆಣ್ಣಿಗೆ ಗೌರವ ಕೊಡುವುದನ್ನ ನಿಮ್ಮಿಂದ ಕಲಿಯಬೇಕಿಲ್ಲ. ಮೈಸೂರು ಜನ ನಿಮ್ಮ ರಾಸಲೀಲೆಗಳನ್ನ ನೋಡಿದ್ದಾರೆ. ನೀವು ಏನೆಂಬುದು ಜನರಿಗೆ ಗೊತ್ತಿದೆ ಎಂದು ದೀಪಕ್ ಶಿವಣ್ಣ ಈ ವೇಳೆ ಹೇಳಿಕೆ ನೀಡಿದ್ದಾರೆ.

Source: newsfirstlive.com Source link