ಕರ್ತವ್ಯ ನಿರತ ಕಾರ್ಮಿಕ ಕಂಪನಿಯಲ್ಲೇ ಸಾವು.. ಅತಿಯಾದ ಒತ್ತಡವೇ ಕಾರಣ ಎಂದ ಪೋಷಕರು

ಕರ್ತವ್ಯ ನಿರತ ಕಾರ್ಮಿಕ ಕಂಪನಿಯಲ್ಲೇ ಸಾವು.. ಅತಿಯಾದ ಒತ್ತಡವೇ ಕಾರಣ ಎಂದ ಪೋಷಕರು

ಕೋಲಾರ: ಕರ್ತವ್ಯ ನಿರತ ಕಾರ್ಮಿಕನೊಬ್ಬನ ಕಾರ್ಖಾನೆಯಲ್ಲಿ ಮೃತಪಟ್ಟಿರುವ‌ ಘಟನೆ ಕೋಲಾರದಲ್ಲಿ ನಡೆದಿದೆ. ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದ ವರಾಕ್ ಕಂಪನಿಯಲ್ಲಿ ಈ ಘಟನೆ ಸಂಭವಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಬಿಸನಹನಹಳ್ಳಿ ಗ್ರಾಮದ ನಾಗೇಶ್ (28) ಮೃತ ಕಾರ್ಮಿಕ. ನಿನ್ನೆ ರಾತ್ರಿ ಪಾಳಯದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ನಿತ್ರಾಣಗೊಂಡು ಕುಸಿದು ಬಿದಿದ್ದು ಕೂಡಲೇ ಕೋಲಾರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಇನ್ನು ವಿಷಯ‌ ತಿಳಿದು ಸ್ಥಳಕ್ಕೆ ಆಗಮಿಸಿದ ಪೋಷಕರು ಮತ್ತು ಸಂಬಂಧಿಕರು ತಮ್ಮ ಮಗ ನಿನ್ನೆ ರಾತ್ರಿ ಸಹ ಆರೋಗ್ಯವಾಗಿದ್ದು ಕೆಲಸಕ್ಕೆ ಹೋಗಿದ್ದ. ತಡರಾತ್ರಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ‌ ಎಂದು ಕಂಪನಿಯಿಂದ ನನಗೆ ಪೋನ್ ಬಂದಿದ್ದು, ಮಗನ‌ ಸಾವಿಗೆ ಕೆಲಸದ ಒತ್ತಡವೇ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ. ಪ್ರತಿದಿನ ತಮ್ಮ ಬಳಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲವೆಂದು ಆಳಲು ತೋಡಿಕೊಳ್ಳುತ್ತಿದ್ದ ಎಂಬುದು ಪೋಷಕರ ಆರೋಪ.

ಇನ್ನು ಕಂಪನಿಯನ ಮೇಲ್ವಿಚಾರಕ ಸುನೀಲ್ ತ್ರಿಪಾಠಿ ಮಾತನಾಡಿ ನಾವು‌ ಕಾರ್ಮಿಕರಿಗೆ ಯಾವುದೇ ರೀತಿಯ ಒತ್ತಡ ಹೇರಿಲ್ಲ, ಮತ್ತು ‌ಹೆಚ್ಚಿನ ಕೆಲಸ ಮಾಡಿಸಿಕೊಳ್ಳುತ್ತಿರಲಿಲ್ಲ. ಕಾನೂನಿನಡಿಯಲ್ಲಿ ಕಾರ್ಮಿಕನಿಗೆ ಸೇರಬೇಕಾದ ಎಲ್ಲಾ ಸವಲತ್ತನ್ನು ಕಂಪನಿ‌ ನೀಡುತ್ತದೆ ಎಂದು ಭರವಸೆ‌ ನೀಡಿದ್ದಾರೆ. ಆದ್ರೆ‌ ಪೋಷಕರು ಮತ್ತು ಸಂಬಂಧಿಕರು ಇದಕ್ಕೆ ಒಪ್ಪದ ಕಾರಣ ಪ್ರಕರಣ ವೇಮಗಲ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Source: newsfirstlive.com Source link