‘ತ್ರಿಪುರ ಸುಂದರಿ’ಯಾಗಲು ಹೊರಟ ಬಿಗ್​ಬಾಸ್​ ಸ್ಟ್ರಾಂಗ್​ ವುಮೆನ್​ ದಿವ್ಯಾ ಸುರೇಶ್​

‘ತ್ರಿಪುರ ಸುಂದರಿ’ಯಾಗಲು ಹೊರಟ ಬಿಗ್​ಬಾಸ್​ ಸ್ಟ್ರಾಂಗ್​ ವುಮೆನ್​ ದಿವ್ಯಾ ಸುರೇಶ್​

ಕನ್ನಡ ಬಿಗ್​ಬಾಸ್​ ಸೀಸನ್​ 8ರ​ ಕಂಟೆಸ್ಟೆಂಟ್​ಗಳಲ್ಲಿ ದಿವ್ಯಾ ಸುರೇಶ್​ ಕೂಡಾ ಒಬ್ಬರು. ಡಿ.ಎಸ್​ ಅಂದ್ರೆ ಸ್ಟ್ರಾಂಗ್​ ವುಮೆನ್​ ಅನ್ನೋದು ಎಲ್ಲರಿಗೂ ತಿಳಿದ ವಿಚಾರ. ಟಾಸ್ಕ್​ ಅಂದ್ರೆ ತಾನು ಯಾವ ಹುಡುಗರಿಗಿಂತಾ ಕಮ್ಮಿ ಇಲ್ಲಾ ಅನ್ನುವ ರೀತಿ ಪರ್ಫಾರ್ಮ್​ ಮಾಡಿದ್ದಾರೆ..

blank

ದಿವ್ಯಾ ಸುರೇಶ್​ ಬಿಗ್​ಬಾಸ್​ ವಿನ್ನರ್ ಆಗ್ಬೇಕು ಅನ್ನೋ ಕನಸು ಕಂಡಿದ್ರು.. ಆದ್ರೆ ಇವರು ಟಾಪ್​ 5 ಕಂಟೆಸ್ಟೆಂಟ್​ಗಳಲ್ಲಿ ಒಬ್ಬರಾಗಿದ್ರು. ಬಿಗ್​ಬಾಸ್​ ಮುಗಿದ ಮೇಲೆ ದಿವ್ಯಾ ಸುರೇಶ್​ಗೆ ಸಾಕಷ್ಟು ಸಿನಿಮಾ ಹಾಗೂ ಧಾರವಾಹಿಗಳಿಂದ ಆಫರ್​ ಬಂದಿರೋದು ಪಕ್ಕಾ.. ಆದ್ರೆ ದಿವ್ಯಾ ಯಾವ ಪ್ರಾಜೆಕ್ಟ್​ ಗೆ ಗ್ರೀನ್​ ಸಿಗ್ನಲ್​ ಕೊಡಬಹುದು ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. ಇದೀಗ ಆ ಕತೂಹಲಕ್ಕೆ ಬ್ರೇಕ್​ ಬಿದ್ದಿದೆ.. ಹೌದು ದಿವ್ಯಾ ಸುರೇಶ್​ ಹೊಸ ಪ್ರಾಜೆಕ್ಟ್​ನ ಟೈಟಲ್​ ಲಾಂಚ್​ ಆಗಿದೆ.. ಸದ್ಯ ಕಲರ್ಸ್​ ಕನ್ನಡದ ತ್ರಿಪುರ ಸುಂದರಿ ಎಂಬ ಧಾರವಾಹಿಯಲ್ಲಿ ಡಿಎಸ್​ ಲೀಡ್​ ರೋಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

blank

ತ್ರಿಪುರ ಸುಂದರಿ ಟೈಟಲ್​ ಕೇಳಿದ್ರೆ ಇದು ಯಾವ ರೀತಿಯ ಕಥೆ ಅನ್ನೊದನ್ನ ಊಹಿಸಲು ಸುಲಭವಲ್ಲ.. ಒಂದು ಅರ್ಥ ತ್ರಿಪುರ ಸುಂದರಿ ಅಂದ್ರೆ ದೇವರ ಹೆಸರು ಕೂಡಾ ಆಗತ್ತೆ. ಮತ್ತೊಂದು ನಾನು ಒಬ್ಬಳೇ ಚಂದ ಅನ್ನುವ ರೀತಿ ಅರ್ಥ ಕೂಡಾ ಬರತ್ತೆ.. ಈ ಮುಂಚೆ ದಿವ್ಯಾ ಸುರೇಶ್​ ಜೋಡಿಹಕ್ಕಿ ಧಾರವಾಹಿಯಲ್ಲಿ ಟೀಚರ್​ ರೋಲ್​ ಮೂಲಕ ಎಲ್ಲರನ್ನೂ ರಂಜಿಸಿದ್ರು. ಜೊತೆಗೆ ಒಂದಿಷ್ಟು ಸಿನಿಮಾಗಳನ್ನು ಕೂಡಾ ಮಾಡಿದ್ರು. ಬಿಗ್​ಬಾಸ್​ ಮುಗಿದ ಮೇಲೆ ದಿವ್ಯಾ ಸುರೇಶ್​ಗೆ ಹೊಸ ಪ್ರಾಜೆಕ್ಟ್​ಗೆ ಕೈ ಹಾಕಿದ್ದಾರೆ. ಡಿಎಸ್​ ಹಾಗೂ ತ್ರಿಪುರ ಸುಂದರಿ ಟೀಮ್​ಗೆ ನಮ್ಮ ಕಡೆಯಿಂದಲು ಬೆಸ್ಟ್​ ವಿಶಸ್​..

Source: newsfirstlive.com Source link