‘ನನಗೆ ಹಣದ ಆಫರ್ ಬಂದಿತ್ತು’ ಎಂದ ಶ್ರೀಮಂತ್ ಪಾಟೀಲ್​ಗೆ ಧನ್ಯವಾದ ಹೇಳಿದ ಡಿಕೆಎಸ್

‘ನನಗೆ ಹಣದ ಆಫರ್ ಬಂದಿತ್ತು’ ಎಂದ ಶ್ರೀಮಂತ್ ಪಾಟೀಲ್​ಗೆ ಧನ್ಯವಾದ ಹೇಳಿದ ಡಿಕೆಎಸ್

ಬೆಳಗಾವಿ: ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ವೇಳೆ ‘ನನಗೆ ಹಣದ ಆಫರ್ ಬಂದಿತ್ತು’ ಎಂಬ ಶ್ರೀಮಂತ ಪಾಟೀಲ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್.. ಆಪರೇಷನ್ ಕಮಲದ ಬಗ್ಗೆ ಶ್ರೀಮಂತ ಪಾಟೀಲ್ ತಡವಾಗಿಯಾ ಸತ್ಯ ಹೇಳಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ.

ಇದೊಂದು ಗಂಭೀರ ಪ್ರಕರಣವಾಗಿದ್ದು, ಭ್ರಷ್ಟಾಚಾರ ನಿಗ್ರಹ ದಳವು ಈ ಪ್ರಕರಣವನ್ನು ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕು. ಅಧಿವೇಶನದಲ್ಲೂ ಈ ವಿಚಾರ ಪ್ರಸ್ತಾಪ ಮಾಡುತ್ತೇವೆ. ಬಿಜೆಪಿಯು ಶುದ್ಧ ಆಡಳಿತ ನಡೆಸಲು ಬಂದಿರುವುದಾಗಿ‌ ಆಗಾಗ ಹೇಳುತ್ತದೆ. ಆದರೆ ಶ್ರೀಮಂತ ಪಾಟೀಲ‌ ಹೇಳಿಕೆಯಿಂದ ಸತ್ಯ ಬಯಲಾಗಿದೆ ಎಂದು ಹೇಳಿದ್ದಾರೆ.

Source: newsfirstlive.com Source link