ನಾಮಧಾರಿಯಾದ ಡಿಂಪಲ್ ಕ್ವೀನ್ ರಚಿತಾ ರಾಮ್

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಚಿತಾ ರಾಮ್ ಹಣೆಗೆ ನಾಮವನ್ನು ಇಟ್ಟುಕೊಂಡಿರುವ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

ಮುಂಜಾನೆಯ ಒಂದು ಸಣ್ಣ ಧನಾತ್ಮಕ ಯೋಚನೆ ನಿಮ್ಮ ಇಡೀ ದಿನವನ್ನು ಬದಲಾಯಿಸುತ್ತದೆ. ಆದ್ದರಿಂದ ಧನಾತ್ಮಕ ಯೋಚನೆಗಳೊಂದಿಗೆ ದಿನವನ್ನು ಆರಂಭಿಸಿ ಎಂದು ಬರೆದುಕೊಂಡು ನಾಮಧಾರಿಯಾಗಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

ನಾಮಧಾರಿಯಾಗಿರುವ ರಚಿತಾ ಅವರ ಫೋಟೋವನ್ನು ನೋಡಿದ ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ನಟಿಯನ್ನು ಕೊಂಡಾಡುತ್ತೀದ್ದಾರೆ. ವರ್ಣನೆಗೂ ಮೀರಿದ ಗೊಂಬೆ ಇವಳು, ಹಿಂದೂ ಧರ್ಮದ ಬಗ್ಗೆ ಗೌರವ ಮತ್ತು ಪ್ರೀತಿಯನ್ನು ತೋರಿಸುವ ಧೈರ್ಯವಿರುವ ನಟಿ ಜೈ ಶ್ರೀರಾಮ್ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತೀದ್ದಾರೆ. ಇದನ್ನೂ ಓದಿ: ಭೂಪೇಂದ್ರ ಪಟೇಲ್ ಯಾರು? ಹಿನ್ನೆಲೆ ಏನು?

ರಚಿತಾ ರಾಮ್ ಕೆಲವು ದಿನಗಳ ಹಿಂದೆ ಅವರ ಸಹೋದರಿಯ ಜೊತೆಗೆ ಇರುವ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ನಾನು ಎಷ್ಟು ಥ್ರಿಲ್ ಆಗಿದ್ದೇನೆ ಎಂದರೆ ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ಮತ್ತೆ ನಾವಿಬ್ಬರು ಒಂದಾಗಿದ್ದೇವೆ. ಈ ಖುಷಿಯಿಂದ ನನ್ನ ಹೃದಯ ಕರಗಿದೆ ಎಂದು ಬರೆದುಕೊಂಡು ಸಹೋದರಿಯ ಜೊತೆಗೆ ಇರುವ ವೀಡಿಯೋವನ್ನು ಪೋಸ್ಟ್ ಮಾಡಿದ್ದರು. ಇದನ್ನೂ ಓದಿ:  ನಾನು ಫುಲ್ ಥ್ರಿಲ್ ಆಗಿದ್ದೇನೆ ಅಂದ್ರು ಡಿಂಪಲ್ ಕ್ವೀನ್ ರಚಿತಾ

ರಚಿತಾ ಅವರ ಸಹೋದರಿ ನಿತ್ಯ ರಾಮ್ ಮದುವೆಯಾಗಿ ವಿದೇಶಕ್ಕೆ ಹೋಗಿದ್ದರು. ಇದರಿಂದ ರಚಿತಾ ತನ್ನ ಸಹೋದರಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದರು. ಮತ್ತೆ ಇವರಿಬ್ಬರು ಒಂದಾಗಿದ್ದಾರೆ. ರಚಿತಾ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಈ ಕುರಿತಾಗಿ ಬರೆದುಕೊಂಡಿದ್ದರು.

Source: publictv.in Source link