ಜೀ ಕುಟುಂಬಕ್ಕೆ ಎಂಟ್ರಿ ಕೊಟ್ಟ ಗೋಲ್ಡನ್​ ಸ್ಟಾರ್​ ಗಣೇಶ್​

ಜೀ ಕುಟುಂಬಕ್ಕೆ ಎಂಟ್ರಿ ಕೊಟ್ಟ ಗೋಲ್ಡನ್​ ಸ್ಟಾರ್​ ಗಣೇಶ್​

ರಾಜೇಶ್‌ ಕೃಷ್ಣನ್‌ ಕಲರ್ಸ್ ಕನ್ನಡ ವಾಹಿನಿಯ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಜಡ್ಜ್‌ ಆಗಿ ಬಂದಾಗ ಇಡೀ ಕರ್ನಾಟಕವೇ ಆಶ್ಚರ್ಯಪಟ್ಟಿತ್ತು. ಸರಿಗಮಪ ಅನ್ನೋ ಸಿಂಗಿಂಗ್ ಶೋನಲ್ಲಿ ಹಲವು ವರ್ಷಗಳಿಂದ ಇದ್ದ ರಾಜೇಶ್‌ ಕೃಷ್ಣನ್‌ ಹೇಗೇ ಕಲರ್ಸ್‌ ವಾಹಿನಿ ಬಂದ್ರೂ ಅಂತಾ ಎಲ್ಲರೂ ಕುತೂಹಲದ ಕಣ್ಣಿಂದ ನೋಡಿದ್ದರು. ಈಗ ಅದೇ ಸರದಿ ಗೋಲ್ಡನ್‌ ಸ್ಟಾರ್ ಗಣೇಶ್ ಮೇಲೆ ನೆಟ್ಟಿದೆ.

ಕಲರ್ಸ್ ವಾಹಿನಿಯ ಪಾಪ್ಯುಲರ್ ಶೋ ಸೂಪರ್ ಮಿನಿಟ್‌ನ ಸಾರಥಿಯಾಗಿದ್ದ ಗೋಲ್ಡನ್ ಸ್ಟಾರ್ ಗಣೇಶ್‌ ಈಗ ಜೀ ವಾಹಿನಿಯ ಕುಟುಂಬದ ಸದಸ್ಯರಾಗಿದ್ದಾರೆ. ಇದು ಕೂಡ ಒಂಥರಾ ಆಶ್ಚರ್ಯವೇ. ವಿಶೇಷ ಅಂದ್ರೆ, ಗಣೇಶರ ಆಗಮನವನ್ನ ಜೀ ಕುಟುಂಬ ಗ್ರ್ಯಾಂಡ್ ಆಗಿ ಸೆಲಬ್ರೇಟ್ ಮಾಡಿದೆ. ಗ್ರ್ಯಾಂಡ್ ಆಗಿರೋ ಪ್ರೊಮೋ ಕೂಡ ರಿಲೀಸ್ ಮಾಡಿದೆ.

ಗೋಲ್ಡನ್ ಸ್ಟಾರ್ ಗಣೇಶ್‌ ಬಂದಿರೋದರಿಂದ ಈಗ ವೀಕ್ಷಕರಲ್ಲಿ ಒಂದು ಪ್ರಶ್ನೆ ಮನೆ ಮಾಡಿದೆ. ಅದೇನಂದ್ರೆ, ಗಣೇಶ್ ಯಾವ ಪ್ರೊಗ್ರಾಂ ಮಾಡ್ತಾರೆ ಅನ್ನೋದು. ಹೌದು, ಸದ್ಯ ಎಲ್ಲರೂ ಕೇಳ್ತಿರೋ ಪ್ರಶ್ನೆಯೇ ಇದು. ಅದಕ್ಕೆ ಉತ್ತರ ನಮ್ಮತ್ರ ಇದೇ. ಅಂದ್ಹಾಗೇ, ಗಣೇಶ್‌ ಸದ್ಯದಲ್ಲಿಯೇ ಲಾಂಚ್ ಆಗ್ಲಿರೋ ಹೊಸ ರಿಯಾಲಿಟಿ ಶೋನ ಹೋಸ್ಟ್ ಮಾಡ್ಲಿದ್ದಾರೆ. ಡ್ಯಾಡಿ ನಂಬರ್‌-1ಗೆ ಅವರು ಆ್ಯಂಕರ್ ಆಗ್ಬಹುದಾ ಅನ್ನೋ ಕುತೂಹಲವಿತ್ತು. ಆದ್ರೆ, ಅವರು ಹೊಸ ರಿಯಾಲಿಟಿ ಶೋನ ಹೋಸ್ಟ್ ಮಾಡಲಿದ್ದಾರೆ ಅನ್ನೋ ಮಾಹಿತಿ ನಮಗೆ ಸಿಕ್ಕಿದೆ. ಆ ಶೋನ ಪ್ರೊಮೋ ಕೂಡ ಸದ್ಯದಲ್ಲಿಯೇ ಪ್ರಸಾರವಾಗ್ಲಿದೆ.

ಇದನ್ನೂ ಓದಿ:ಫ್ಯಾಮಿಲಿ ಜೊತೆ ಅರಣ್ಯ ಸಫಾರಿಗೆ ಟ್ರಿಪ್​​​ ಹೋದ ಗೋಲ್ಡನ್​ ಸ್ಟಾರ್​ ಗಣೇಶ್

blank

ಜೀ ಫ್ಯಾಮಿಲಿಗೆ ಗಣಪನ ಆಗಮನದ ಖುಷಿ ಮಾತ್ರವಲ್ಲ, ಕಮಲಿ 900 ಸಂಚಿಕೆ ಹಾಗೂ ಸತ್ಯ ಸೀರಿಯಲ್‌ 200 ಎಪಿಸೋಡ್ ಕಂಪ್ಲೀಟ್ ಮಾಡಿರೋ ಸಂತೋಷವೂ ಇದೇ. ಇದೆಲ್ಲವೂ ಗಣೇಶ ಹಬ್ಬದ ಸಂದರ್ಭದಲ್ಲಿಯೇ ಆಗಿರೋದು ಜೊತೆಗೆ ಗಣೇಶ್‌ ಕೂಡ ಇದೇ ಸಮಯಕ್ಕೆ ಬಂದಿರೋದು ಸಂತೋಷವನ್ನ ಡಬಲ್ ಮಾಡ್ಬಿಟ್ಟಿದೆ.

blank

ಇದನ್ನೂ ಓದಿ:ಬಾಯ್​​ ಫ್ರೆಂಡ್​​ಗೆ ಕಿಸ್​​ ಕೊಟ್ಟ ನ್ಯಾಷನಲ್​​​​ ಕ್ರಶ್​​​ ರಶ್ಮಿಕಾ ಮಂದಣ್ಣ..

Source: newsfirstlive.com Source link