ಬಿರಿಯಾನಿ ತಿಂದ ಕೆಲವೇ ಗಂಟೆಗಳಲ್ಲಿ 10 ವರ್ಷದ ಬಾಲಕಿ ಸಾವು.. 21 ಮಂದಿ ಅಸ್ವಸ್ಥ

ಬಿರಿಯಾನಿ ತಿಂದ ಕೆಲವೇ ಗಂಟೆಗಳಲ್ಲಿ 10 ವರ್ಷದ ಬಾಲಕಿ ಸಾವು.. 21 ಮಂದಿ ಅಸ್ವಸ್ಥ

ಚೆನ್ನೈ: ಹೋಟೆಲ್ ಒಂದರಲ್ಲಿ ಬಿರಿಯಾನಿ ತಿಂದ ಸ್ವಲ್ಪ ಹೊತ್ತಿನಲ್ಲೇ 10 ವರ್ಷದ ಬಾಲಕಿಯೋರ್ವಳು ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲ ನಡೆದಿದೆ. ತಿರುವಣ್ಣಾ ಮಲೈನಲ್ಲಿ ಘಟನೆ ನಡೆದಿದ್ದು 21 ಜನರು ವಾಂತಿ, ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆ ಬೆನ್ನಲ್ಲೇ ತಮಿಳುನಾಡಿನ ಫುಡ್ ಸೇಫ್ಟಿ ಡಿಪಾರ್ಟ್​ಮೆಂಟ್ ತಮಿಳುನಾಡಿನಾದ್ಯಂತ ನಾನ್ ವೆಜ್ ಹೋಟೆಲ್​ಗಳ ಮೇಲೆ ದಾಲಿ ನಡೆಸಿ ಆಹಾರದ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಹೋಟೆಲ್ ಒಂದರಲ್ಲಿ ಹಲವು ದಿನಗಳಿಂದ ಸಂಗ್ರಹಿಸಿಡಲಾಗಿದ್ದ 15 ಕೆಜಿ ಕೋಳಿ ಮಾಂಸವನ್ನು ನಾಶಗೊಳಿಸಿದ್ದಾರೆ. ಹೋಟೆಲ್​ನ್ನು ಅಧಿಕಾರಿಗಳು ಸೀಲ್ ಮಾಡಿದ್ದು ಮಾಲೀಕನ ವಿರುದ್ಧ ಕೇಸ್ ದಾಖಲಿಸಿದೆ. ಮಾಲೀಕನ ಜೊತೆಗೆ ಅಡುಗೆ ಮಾಡುವವನನ್ನೂ ಜೈಲಿಗೆ ಕರೆದೊಯ್ಯಲಾಗಿದೆ.

Source: newsfirstlive.com Source link