20 ವರ್ಷಗಳ ಹಿಂದೆ ಸಾವನ್ನಪ್ಪಿದ್ದಾನೆ ಎನ್ನಲಾದ ಅಲ್​ಖೈದಾ ಲೀಡರ್ ಇದ್ದಕ್ಕಿದ್ದಂತೆ ಪ್ರತ್ಯಕ್ಷ

20 ವರ್ಷಗಳ ಹಿಂದೆ ಸಾವನ್ನಪ್ಪಿದ್ದಾನೆ ಎನ್ನಲಾದ ಅಲ್​ಖೈದಾ ಲೀಡರ್ ಇದ್ದಕ್ಕಿದ್ದಂತೆ ಪ್ರತ್ಯಕ್ಷ

ನವದೆಹಲಿ: ಅಮೆರಿಕಾದ ಟ್ವಿನ್ ಟವರ್ ಮೇಲಿನ ದಾಳಿಯ ನಂತರ ಸಾವನ್ನಪ್ಪಿದ್ದಾನೆ ಎನ್ನಲಾಗಿದ್ದ ಅಲ್​ಖೈದಾ ಉಗ್ರ ಸಂಘಟನೆಯ ನಾಯಕ ಅಯ್ಮನ್ ಅಲ್-ಜವಾಹಿರಿ ಇದ್ದಕ್ಕಿದ್ದಂತೆ ಪ್ರತ್ಯಕ್ಷನಾಗಿದ್ದಾನೆ. ಅದ್ರಲ್ಲೂ ನಿನ್ನೆ ಅಮೆರಿಕಾದಲ್ಲಿ ನಡೆದ 9/11 ದುರ್ಘಟನೆಯ ಸ್ಮರಣೆಯ ದಿನದಂದೇ ಆತನ ವಿಡಿಯೋವೊಂದು ಹೊರಬಿದ್ದಿದೆ.

ಇದನ್ನೂ ಓದಿ: ತಾಲಿಬಾನ್‌ ಸರ್ಕಾರಕ್ಕೆ ಮಾನ್ಯತೆ ಸಿಗುತ್ತಾ?ತಾಲಿಬಾನ್‌ ವಿಚಾರದಲ್ಲಿ ಭಾರತದ ನಿರ್ಧಾರ ಏನು ?

ಯುಎಸ್​ ಮೂಲದ SITE ಇಂಟಲಿಜೆನ್ಸ್ ಗ್ರೂಪ್ ಜಿಹಾದಿಸ್ಟ್ ಗ್ರೂಪ್​ಗಳ ನಡೆಯನ್ನ ಪತ್ತೆಹಚ್ಚಿದ್ದು ಈ ವೇಳೆ ಜವಾಹಿರಿ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ. ಈ ಕುರಿತು ಟ್ವೀಟ್ ಮಾಡಿರುವ SITE ನಿರ್ದೇಶಕ ರಿಯಾ ಕಾಟ್ಜ್.. ಸಾವನ್ನಪ್ಪಿದ್ದಾನೆ ಎನ್ನಲಾಗಿದ್ದ ಅಲ್​ಖೈದಾ ಸಂಘಟನೆಯ ನಾಯಕ ಅಲ್-ಜವಾಹಿರಿ 60 ನಿಮಿಷದ ವಿಡಿಯೋವೊಂದರಲ್ಲಿ ಪ್ರತ್ಯಕ್ಷವಾಗಿದ್ದಾನೆ. ಈ ಬಾರಿ ತಾನು ಸಾವನ್ನಪ್ಪಿಲ್ಲ ಎಂಬುದಕ್ಕೆ ಸಾಕ್ಷ್ಯಗಳನ್ನೂ ನೀಡಿದ್ದಾನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ರಮಾಣವಚನ ಕಾರ್ಯಕ್ರಮ ರದ್ದುಪಡಿಸಿದ ತಾಲಿಬಾನಿಗಳಿಗೆ ಬೆನ್ನು ತಟ್ಟಿದ ಚೀನಾ, ಪಾಕಿಸ್ತಾನ ಹೇಳಿದ್ದೇನು?

ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡ ಬೆನ್ನಲ್ಲೇ ಹೀಗೆ ಭೂಗತರಾಗಿದ್ದ ಭಯೋತ್ಪಾದಕ ಸಂಘಟನೆಯ ನಾಯಕರುಗಳು ಹೊರಬರುತ್ತಿರುವುದು ಜಾಗತಿಕ ಮಟ್ಟದ ಆತಂಕಕ್ಕೆ ಕಾರಣವಾಗಿದೆ.

Source: newsfirstlive.com Source link