ಮದುವೆ ಮನೆಯಲ್ಲಿ ಮ್ಯೂಸಿಕ್ ಪ್ಲೇ ಮಾಡಿದ್ದಕ್ಕೆ ಮಾರಣಾಂತಿಕ ಹಲ್ಲೆ ನಡೆಸಿದ ತಾಲಿಬಾನಿಗಳು

ಮದುವೆ ಮನೆಯಲ್ಲಿ ಮ್ಯೂಸಿಕ್ ಪ್ಲೇ ಮಾಡಿದ್ದಕ್ಕೆ ಮಾರಣಾಂತಿಕ ಹಲ್ಲೆ ನಡೆಸಿದ ತಾಲಿಬಾನಿಗಳು

ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ತಮ್ಮ ಕ್ರೌರ್ಯವನ್ನು ಮುಂದುವರೆಸಿದ್ದಾರೆ. ಅಫ್ಘಾನಿಸ್ತಾನದ ಜನರು ಇದೀಗ ತಾಲಿಬಾನಿಗಳ ವಿರುದ್ಧ ತಿರುಗಿಬಿದ್ದಿದ್ದು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಆದ್ರೆ ಈ ಪ್ರತಿಭಟನೆಗಳನ್ನ ವರದಿ ಮಾಡಿದ ಪತ್ರಕರ್ತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆಗಳು ನಡೆದಿವೆ.

ಇದನ್ನೂ ಓದಿ: ತಾಲಿಬಾನಿಗಳ ಪ್ರಮಾಣ ವಚನ ಮುಂದೆ ಹೋಗಿದ್ದೇಕೆ? ಪ್ರಮಾಣ ವಚನ ನಡೆದಿದ್ರೆ ಏನಾಗ್ತಿತ್ತು ಗೊತ್ತಾ?

ಇದೀಗ ಅಫ್ಘಾನಿಸ್ತಾನದ ವ್ಯಕ್ತಿಯೋರ್ವ ತನ್ನ ಮದುವೆಯಲ್ಲಿ ಮ್ಯೂಸಿಕ್ ಹಾಕಿದ್ದಕ್ಕೆ ಆತನ ವಿರುದ್ಧ ಹಲ್ಲೆ ನಡೆಸಲಾಗಿದೆ. ಮದುವೆಯ ದಿನ ರಾತ್ರಿ ಹೊತ್ತಿನಲ್ಲಿ ಮ್ಯೂಸಿಕ್ ಹಾಕಲಾಗಿತ್ತು. ಈ ವೇಳೆ ತಾಲಿಬಾನಿಗಳು ಬಂದು ಮ್ಯೂಸಿಕ್ ಆಫ್ ಮಾಡುವಂತೆ ಹೇಳಿದರು. ತಕ್ಷಣವೇ ನಾನು ಮ್ಯೂಸಿಕ್ ಆಫ್ ಮಾಡಿದೆ. ಆದರೆ ಕೆಲಹೊತ್ತಿನ ನಂತರ ನಾನು ಮತ್ತು ನನ್ನ ತಾಯಿಯನ್ನು ಎಳೆದೊಯ್ದು ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ಖಾಜಾ ಘರ್ ಜಿಲ್ಲೆಯ ಫೈಜುಲ್ಲಾ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಪ್ರಮಾಣವಚನ ಕಾರ್ಯಕ್ರಮ ರದ್ದುಪಡಿಸಿದ ತಾಲಿಬಾನಿಗಳಿಗೆ ಬೆನ್ನು ತಟ್ಟಿದ ಚೀನಾ, ಪಾಕಿಸ್ತಾನ ಹೇಳಿದ್ದೇನು?

Source: newsfirstlive.com Source link