ಬಾಲಿವುಡ್​ನಲ್ಲೇ ದುಬಾರಿ ಕಾರ್ ಖರೀದಿಸಿದ ಮೊದಲ ನಟಿ ಕೃತಿ, ಕಾರಿನ ಬೆಲೆ ಎಷ್ಟು?

ಬಾಲಿವುಡ್​ನಲ್ಲೇ ದುಬಾರಿ ಕಾರ್ ಖರೀದಿಸಿದ ಮೊದಲ ನಟಿ ಕೃತಿ, ಕಾರಿನ ಬೆಲೆ ಎಷ್ಟು?

ಬಾಲಿವುಡ್​ ನಟಿ ಕೃತಿ ಸನೋನ್ ಸುಮಾರು 2. 43 ಕೋಟಿ ಮೌಲ್ಯದ ‘ಮರ್ಸಿಡಿಸ್​ ಮೇಬ್ಯಾಕ್​ ಜಿಎಲ್​ಎ 600’ ಕಾರನ್ನ ಖರೀದಿಸಿದ್ದಾರೆ. ಇತ್ತೀಚೆಗಷ್ಟೇ ಕೃತಿ ನಟನೆಯ ‘ ಮಿಮಿ’ ಸಿನಿಮಾ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ವಿ ಕಂಡಿತ್ತು. ಇನ್ನು ಗೆಲುವಿನ ಸಂತೋಷದಲ್ಲಿರುವ ಕೃತಿ ಇದೀಗ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ.

ಹೌದು ಬಾಲಿವುಡ್​ನ ಕೆಲವೇ ಕಲವು ಸ್ಟಾರ್​ ಸೆಲೆಬ್ರೆಟಿಗಳು ಹೊಂದಿರುವ ‘ಮರ್ಸಿಡಿಸ್​ ಮೇಬ್ಯಾಕ್​ ಜಿಎಲ್​ಎ 600’ ಕಾರನ್ನು ಕೃತಿ ಖರೀದಿಸಿದ್ದಾರೆ. ನಟರಾದ ರಣವೀರ್​ ಸಿಂಗ್, ಅರ್ಜುನ್​ ಕಪೂರ್ ಈ ದುಬಾರಿ ಕಾರನ್ನ ಈ ಹಿಂದೆ ಖರೀದಿಸಿದ್ರು ಈಗ ಅವರ ಸಾಲಿಗೆ ಕೃತಿ ಸನೋನ್​ ಕೂಡ ಸೇರ್ಪಡೆ ಆಗಿದ್ದು, ಬಾಲಿವುಡ್​ ಅಂಗಳದಲ್ಲಿ ಈ ದುಬಾರಿ ಕಾರು ಖರೀದಿಸಿದ ಮೊದಲ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇನ್ನು ‘ಮಿಮಿ’ ಸಿನಿಮಾ ಹಿಟ್​ ಆದ ನಂತರ ಕೃತಿಗೆ ಸಾಲು ಸಾಲು ಸಿನಿಮಾಗಳ ಆಫರ್​ ಒದಗಿ ಬರುತ್ತಿದ್ದು ಕೃತಿ ತಮ್ಮ ಸಂಭಾವನೆಯನ್ನು ಕೂಡ ಹೆಚ್ಚಿಸಿಕೊಂಡಿದ್ದಾರಂತೆ. ಸದ್ಯ ಕೃತಿ ಕೈಯಲ್ಲಿ ಅನೇಕ ಸಿನಿಮಾಗಳಿದ್ದು, ಡಾರ್ಲಿಂಗ್​ ಪ್ರಭಾಸ್​ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಆದಿಪುರುಷ್​’ ಚಿತ್ರದಲ್ಲಿ ಕೃತಿ ಪ್ರಭಾಸ್​ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.

Source: newsfirstlive.com Source link